ಬೆಂಗಳೂರು; ನಾವು ಏನು ಹೇಳ್ಬೇಕು ಅದೆಲ್ಲವನ್ನು ಸಿಎಂಗೆ ಹೇಳಿದ್ದೇವೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಚನ್ನರಾಯಪಟ್ಟಣ ಪಟ್ಟಣ ರೈತರಲ್ಲೆ ಒಡಕಿನ ವಿಚಾರದ ಬಗ್ಗೆ ಮಾತನಾಡಿದ ಅವರು ನಿನ್ನೆ ಬಂದ ರೈತರು ಈ ಮೊದಲು ಬಂದಿದ್ರು. 400-500 ಎಕರೆ ಅವರು ಒಪ್ಪಿಕೊಂಡ ಮೇಲೆ ಹಿಂದೆ ನೋಟಿಫಿಕೇಷನ್ ಆಗಿದೆ. ಆ ರೈತರು ಕೊಡೋದಕ್ಕೆ ರೆಡಿ ಇದ್ದಾರೆ. ರೈತರು ವಿಷಯ ಬೇರೆ ಈಗ, ಅದನ್ನ ಬಿಟ್ಟು ಹೋರಾಟ ಮಾಡ್ತಿರೊದು ಬೇರೆ ಇದೆ. 15 ರಂದು ಮೀಟಿಂಗ್ ಇದೆ, ಸಿಎಂ ಅದರ ಬಗ್ಗೆ ಮಾತಾಡ್ತಾರೆ. ಸಾಧಕ ಬಾಧಕ ಬಗ್ಗೆ ನಮ್ಮ ಜೊತೆ ಸಿಎಂ ಚರ್ಚೆ ಮಾಡಿದ್ದಾರೆ ಎಂದಿದ್ದಾರೆ.
ದೇವನಹಳ್ಳಿ ಭೂಮಿ ವಿಚಾರಕ್ಕೆ ಚಿಂತಕರಿಂದ ಹೈಕಮಾಂಡ್ ಗೆ ಪತ್ರ ಬರೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬರೆಯಲಿ ಅದ್ರಲ್ಲಿ ಏನ್ ತಪ್ಪಿದೆ. ಪ್ರತಿಯೊಬ್ಬರಿಗೂ ಹಕ್ಕು ಇದೆ. ಕೆಲವರು ನನಗೆ ಕೇಳಿದ್ರು ಅದಕ್ಕೆ ಉತ್ತರ ಕೊಟ್ಟಿದ್ದೇನೆ. ಹೈಕಮಾಂಡ್ ಗೂ ಗೊತ್ತಿದೆ ಎಂದರು. ಸರ್ಕಾರ ಗ್ರೀನ್ ಬೆಲ್ಟ್ ಅಸ್ತ್ರ ಪ್ರಯೋಗಿಸೋದಕ್ಕೆ ಮುಂದಾಯ್ತಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಅವರ ಉದ್ದೇಶ ಕೃಷಿ ಭೂಮಿ ಆಗಿಯೇ ಉಳಿಬೇಕು. ಬೇರೆ ಉದ್ದೇಶಕ್ಕೆ ಬಳಕೆ ಆಗಬಾರದು ಅನ್ನೋದು ಅವರ ಡಿಮ್ಯಾಂಡ್. ಒಳ್ಳೆ ರೇಟ್ ಕೊಡೊದಕ್ಕೆ ಸಿಎಂ ಘೋಷಣೆ ಮಾಡಬಹುದು. ಆಫರ್ ಮಾಡ್ತಿವಿ, ಇದಕ್ಕೆ ಒಪ್ಪಿದಿದ್ರೆ ಸಿಎಂ ಮುಂದಿನ ನಿರ್ಧಾರ ಮಾಡ್ತಾರೆ ಎಂದು ತಿಳಿಸಿದ್ದಾರೆ.
ನಿನ್ನೆ ಸಿಎಂ ಭೇಟಿಯಾದವರು ರೈತರಲ್ಲ, ಕಾಂಗ್ರೆಸ್ ಮುಖಂಡರು ಎಂಬ ಅರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರು ಹೋರಾಟಾಗಾರರು ಯಾರು ಅಲ್ಲಾ ಅನ್ನೋದು ನಿರ್ಧಾರ ಮಾಡೋದಕ್ಕೆ ಆಗಲ್ಲ. ನಿನ್ನೆ ಬಂದವರು 4೦೦ ಎಕರೆದು ಪಹಣಿ ತಂದಿದ್ದರು. ಭೂಮಿ ಇದ್ದ ರೈತರು ಮುಖ್ಯ ಆಗ್ತಾರೆ. ಅವರು ಕೊಡಬೇಕಾಗಿದ್ರೆ ಕೊಡ್ತಾರೆ ಬೇಡ ಅಂದ್ರೆ ಬಿಡ್ತಾರೆ. ಯಾರಿಗೂ ಒತ್ತಾಯ ಮಾಡೊಲ್ಲಾ ಸಿಎಂ ಒಳ್ಳೆ ನಿರ್ಣಯ ತೆಗೆದುಕೊಳ್ತಾರೆ . ನಾನು ಭೂಸ್ವಾಧೀನ ವಿಚಾರದಲ್ಲಿ ವಿಜಾಪುರದಲ್ಲಿ ಹೋರಾಟ ಮಾಡಿ ಬಂದವನು. ನಮಗೂ ರೈತರ ಬಗ್ಗೆ ಕಾಳಜಿ ಇದೆ ಎಂದು ಹೇಳಿದ್ದಾರೆ.
ರೈತರಿಗೆ ಕೆಲವರಿಂದ ದಾರಿ ತಪ್ಪಿಸುವ ಕೆಲಸ ಆಗ್ತಿದ್ಯಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಯಾವುದು ಆಗೊಲ್ಲಾ ನಾಡಿದ್ದು ಸಿಎಂ ಜೊತೆ ಮೀಟಿಂಗ್ ಇದೆ ಒಳ್ಳೆ ನಿರ್ಧಾರ ಮಾಡ್ತಾರೆ. ರಿಯಲ್ ಎಸ್ಟೇಟ್ ಮಾಫಿಯಾದ ಬಗ್ಗೆ ಹೇಳೊಕೆ ಹೋಗಲ್ಲಾ, ಸಂಪೂರ್ಣ ಮಾಹಿತಿ ಇದೆ. ಯಾರು ಯಾರು ಅಗ್ರಿಮೆಂಟ್ ಹೋಲ್ಡರ್ಸ್ ಇದ್ದಾರೆ. ನಮ್ಮಂತಹ ರಾಜಕಾರಣಿಗಳ ಜಮೀನು ಎಷ್ಟಿದೆ ಎಲ್ಲಾ ಗೊತ್ತಿದೆ. ಪ್ರತಿಯೊಬ್ಬರಿಗೂ ಹೋರಾಟದ ಹಕ್ಕಿದೆ. ಕೆಲವರು ಬೇಡ ಅಂತಾರೆ ಕೆಲವರು ಕೊಡ್ತಿವಿ ಅಂತಾರೆ. ಅವರು ರೇಟ್ ಕೇಳೊದು ಕೊಡೊಕೆ ಅದನ್ನ ಪರಿಶೀಲನೆ ಮಾಡಬೇಕಾಗುತ್ತೆ. 17 ವರ್ಷದ ನಂತರ ಈಗ ಪಶ್ಚಿಮ ಬಂಗಾಳದ ಸಿಎಂ ಟಾಟಾ ನ್ಯಾನೋದವರ ಜೊತೆ ಮಾತಾಡಿದ್ದಾರೆ. ಉದ್ದಿಮೆಗಳು ಆಗಬೇಕು, ರೈತರಿಗೆ ಅನ್ಯಾಯವಾಗಬಾರದು. ನಾವು ಹೇಳಬೇಕಾದೆಲ್ಲಾ ನಾವು ಸಿಎಂಗೆ ಹೇಳಿದ್ದೇವೆ ಎಂದಿದ್ದಾರೆ.