ಬೆಂಗಳೂರು; ಸಿಲಿಕಾನ್ ಸಿಟಿಯಲ್ಲಿ ಮಳೆಗೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ದಿಂದ ೪ ದಿನ ಮಳೆ ಇದೆ ಎಂದು ಹವಾಮಾನ ಇಲಾಖೆ ಅವರು ತಿಳಿಸಿದ್ದಾರೆ. ಈಗಾಗಲೇ ನಾವು ಎಚ್ಚರಿಕೆ ವಹಿಸಿದ್ದೇನೆ.ದಿನದ ೨೪ ಗಂಟೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದ್ದೇನೆ. ಟ್ರಾಫಿಕ್ ಮತ್ತು ಮಳೆ ಹೆಚ್ಚಾಗುವ ಕಾರಣ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದೇವೆ.೧೫ ಎಂಎಂ ಮಳೆ ಹಾಗೂ ೨೨೮ ಪರ್ಸೆಂಟ್ ಮಳೆ ಹೆಚ್ಚಾಗಿದೆ ಎಂದಿದ್ದಾರೆ.
ಇನ್ನು ವಾರ್ಡ್ ಗಳಲ್ಲಿ ನೀರು ನುಗ್ಗಿರೋ ಬಗ್ಗೆ ದೂರು ಬಂದಿದೆ.೧೩೦ ಮರ ಬಿದ್ದಿದ್ದೆ ದೂರು ಬಂದಿದೆ ೨೫ ವಿಲೇವಾರಿ ಮಾಡಿದ್ದೇವೆ. ಇನ್ನು ೨೭ ಕಂಬಗಳನ್ನು ತೆರವು ಮಾಡಿದ್ದೇವೆ. ೬೫ ಎಂಎಂ ಮಳೆ ಬಿದ್ದಿದ್ದು ಗಮನದಲ್ಲಿ ಇಟ್ಟುಕೊಂಡಿದ್ದೇವೆ ಯಲಹಂಕ, ಪೂರ್ವ ಹಾಗೂ ಪಶ್ಚಿಮ, ಮಹದೇವಪುರ ಸೇರಿ ಹಲವೆಡೆ ಹೆಚ್ಚು ಮಳೆ ಬಂದಿದೆ. ಇನ್ನೂ ಮೂರು ದಿನ ಮಳೆ ಹೆಚ್ಚಾಗಲಿದೆ.ಇದಕ್ಕೆ ನಾವು ಜಾಗೃತೆ ವಹಿಸಿದ್ದೇವೆ.ಜನರಿಗೆ ಹುಷಾರ್ ಆಗಿರಿ ಎಂದು ಮನವಿ ಮಾಡುತ್ತೇವೆ ಎಂದಿದ್ದಾರೆ.
ಮಳೆ ಬಗ್ಗೆ ವೆಬ್ ಸೈಟ್ ತೆಗೆದಿದ್ದೇವೆ.ಸಮಸ್ಯೆ ಹಾಗೂ ಮಾಹಿತಿ ಅಲ್ಲಿ ನೀಡಬಹುದು.ಸಮಸ್ಯೆ ಇದ್ರೆ ೧೫೩೩ ಫ್ರೀ ಟೋಲ್ ನಂಬರ್ ಕರೆ ಮಾಡಿ ಮಾಹಿತಿ ನೀಡಿ. ಪ್ರತೀ ಝೋನ್ ನಲ್ಲೂ ನಂಬರ್ ಗೆ ಕರೆ ಮಾಡಿ.ನಾನು ಖುದ್ದಾಗಿ ಬಂದು ಪರಿಶೀಲನೆ ಮಾಡಿದ್ದೇನೆ.ಯಾವ ರೀತಿ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತಾರೆ ಎಂದು ನೋಡಿದ್ದೇನೆ.ಲೋ ಲೇಯಿಂಗ್ ಏರಿಯಾದಲ್ಲಿ ಮನೆ ಕಟ್ಟಿಕೊಂಡಿದ್ದಾರೆ.ಇದ್ರಿಂದ ಮನೆಗಳಿಗೆ ನೀರು ಹರಿಯುತ್ತಿದೆ ಎಂದಿದ್ದಾರೆ.
ಮೇಜರ್ ಸಮಸ್ಯೆ ಏನೂ ಇಲ್ಲ.ಅಪಘಾತ, ದುರಂತ ಏನೂ ಆಗಿಲ್ಲ. ಹಿಂದಿಗಿಂತ ಸಮಸ್ಯೆ ಕಡಿಮೆಯಾಗಿದೆ ಎಂದಿದ್ದಾರೆ. ಇನ್ನು ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಮಳೆ ನಿಲ್ಲಲಿ, ರಸ್ತೆ ಗುಂಡಿ ಮುಚ್ಚುತ್ತೇವೆ.ಈಗ್ಲೇ ಎಲ್ಲಾ ಮುಚ್ಚೋದಕ್ಕೆ ಆಗಲ್ಲ.ಎಲ್ಲಾ ಕಡೆ ಪರಿಶೀಲನೆ ಮಾಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ಉಪಚುನಾವಣೆಗೆ ದಿನಾಂಕ ಘೋಷಣೆ: ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ ಎಂದ ಡಿಕೆಶಿ
ನವದೆಹಲಿ; ರಾಜ್ಯದಲ್ಲಿ ತೆರವಾಗಿರುವ ಮೂರು ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚನ್ನಪಟ್ಟಣ , ಶಿಗ್ಗಾವಿ, ಸಂಡೂರು ಈ ಮೂರು ಕ್ಷೇತ್ರಗಳಿಗೆ ನವೆಂಬರ್ 13 ಕ್ಕೆ ಈ ಉಪಚುನಾವಣೆ ನಡೆಯಲಿದೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುಮಾವಣಾ ಆಯುಕ್ತ ರಾಜೀವ್ ಕುಮಾರ್ ಎಚ್ ಡಿ ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ, , ಇ.ತುಕಾರಾಂ ಅವರ ರಾಜೀನಾಮೆಯಿಂದ ತೆರವಾಗಿರುವ ಸಂಡೂರು ಕ್ಷೇತ್ರ, ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ ಎಂದಿದ್ದಾರೆ.
ಇನ್ನು ಉಪ ಚುನಾವಣೆ ದಿನಾಂಕ ಘೋಷಣೆಯಾದ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತೆ ಎಂದಿದ್ದಾರೆ. ನಾನು ಮಳೆಯನ್ನೂ ಸ್ವಾಗತ ಮಾಡುತ್ತೇನೆ, ಚುನಾವಣೆಯನ್ನೂ ಸ್ವಾಗತ ಮಾಡ್ತೇನೆ ಎಂದು ಅವರು ಹೇಳಿದ್ರು.
ಚನ್ನಪಟ್ಟಣಕ್ಕೆ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್ ನಾನೇ ಅಭ್ಯರ್ಥಿ ಎಂದು ನಗೆ ಬೀರಿದ್ದಾರೆ. ಎಲೆಕ್ಷನ್ ಬಂದಿದೆ, ಪ್ರಜಾಪ್ರಭುತ್ವದ ಹಬ್ಬ. ಮೂರು ಕ್ಷೇತ್ರಗಳನ್ನ ಗೆಲ್ತೀವಿ ಎಂಬ ವಿಶ್ವಾಸ ಇದೆ ಎಂದರು. ಇನ್ನು ಸಿ ಪಿ ಯೋಗೇಶ್ವರ್ ರೆಬಲ್ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ನಿಮ್ಮ ಮಾತನ್ನ ನಂಬೊಲ್ಲಾ, ಯಾವಾಗ ಹೇಳಿದ್ದಾರೆ?ನನಗೆ ಅದೆಲ್ಲಾ ಗೊತ್ತಿಲ್ಲ. ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆ ಆಗಲಿ.ಅವರು ಯಾವ ನಿರ್ಧಾರ ತೆಗೆದುಕೊಳ್ತಾರೆ ನೋಡೋಣಾ.ಆಮೇಲೆ ನಮ್ಮ ನಿರ್ಧಾರ ಏನು ಅಂತ ಹೇಳ್ತಿವಿ. ಈಗ ಯಾಕೆ ಅದೆಲ್ಲಾ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.