ಮನೆ Latest News ಸಿ ಟಿ ರವಿ ಪ್ರಕರಣದಲ್ಲಿ ನಮ್ಮದು ಯಾವುದೇ ಇನ್ವಾಲ್ಮೆಂಟ್ ಇಲ್ಲ; ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆ...

ಸಿ ಟಿ ರವಿ ಪ್ರಕರಣದಲ್ಲಿ ನಮ್ಮದು ಯಾವುದೇ ಇನ್ವಾಲ್ಮೆಂಟ್ ಇಲ್ಲ; ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು;  ಸಿ ಟಿ ರವಿ ಪ್ರಕರಣದಲ್ಲಿ ನಮ್ಮದು ಯಾವುದೇ ಇನ್ವಾಲ್ಮೆಂಟ್ ಇಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಿ ಟಿ ರವಿಗೆ ಹೈಕೋರ್ಟ್ ಜಾಮೀನು ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನಾನು ಕೋರ್ಟ್ ಅಲ್ಲ. ಏನು ಸೆಕ್ಷನ್ ಹಾಕಿದ್ದಾರೆ, ಸರ್ಕಾರ ಹಾಗೂ ಪೊಲೀಸರು ಏನ್ ಸೆಕ್ಷನ್ ಹಾಕಿದ್ದಾರೆ ಗೊತ್ತಿಲ್ಲ. ನನಗೆ ಗೊತ್ತಿಲ್ಲ, ಯಾವುದೇ ಸಂಬಂಧ ಇಲ್ಲ. ಪೊಲೀಸರು ಉಂಟು, ಕಾನೂನು ಉಂಟು ಎಂದಿದ್ದಾರೆ.

ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಸಂಚು ಎಂಬ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ನಮ್ಮದು ಇದರಲ್ಲಿ ಯಾವುದೂ ಇನ್ವಾಲ್ಮೆಂಟ್ ಇಲ್ಲ. ರಾಜ್ಯದಲ್ಲಿ ಏನಾದರೂ ನಾವೇ. ಸಿಎಂ ಹಾಗೂ ನಾನೇ ಹೊಣೆ ಅಂತಾರೆ ಎಂದರು. ಇನ್ನು ಗೆಲುವು ನಮ್ಮದೇ ಆಗಿದೆ ಎಂಬಂತೆ ಬಿಜೆಪಿಗರ ಸಂಭ್ರಮ ವಿಚಾರದ ಬಗ್ಗೆ ಮಾತನಾಡಿದ ಅವರು  ಹೌದಾ.. ಅಲ್ಲ ರೀ.. ನೋಡ್ರೀ.. ಮೊದಲು ಈ ತಾಯಿಗೆ, ಹೆಣ್ಣಿಗೆ , ಮಕ್ಕಳಿಗೆ ಆಗಿರೋ ಅವಮಾನ. ಈ ಸಂಸ್ಕೃತಿಗೆ ಮೊದಲು ಅದಕ್ಕೆ ಮಾತಾಡೋಕೆ ಹೇಳಿ ಎಂದಿದ್ದಾರೆ.

ಬಿಜೆಪಿ MLC ಸಿ. ಟಿ ರವಿಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್; ತಕ್ಷಣ ಬಿಡುಗಡೆ ಮಾಡುವಂತೆ ಆದೇಶ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಂವಿಧಾನಕ ಪದ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬೆಳಗಾವಿಯ ಸುವರ್ ಸೌಧದಲ್ಲೇ ಅರೆಸ್ಟ್ ಆಗಿದ್ದ ಎಂಎಲ್ ಸಿ ಸಿ ಟಿ ರವಿ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಸಂವಿಧಾನಿಕ ಪದ ಬಳಕೆ ಬಗ್ಗೆ ಸಿ ಟಿ ರವಿ ವಿರುದ್ಧ ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ನಿನ್ನೆ ಸುವರ್ಣ ಸೌಧದಿಂದಲೇ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಈ  ಪ್ರಕರಣವನ್ನು  ರದ್ದು ಕೋರಿ ಸಿ.ಟಿ. ರವಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅದರಂತೆ ನ್ಯಾಯಮೂರ್ತಿ ಎಂ ಜಿ ಉಮಾ ಅವರಿದ್ದ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಸಿ ಟಿ ರವಿ ಅವರ ಪರವಾಗಿ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಮೂರ್ತಿ ಎಂ ಜಿ ಉಮಾ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ಸಿ ಟಿ ರವಿ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

ಈ ಮಧ್ಯೆ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿ.ಟಿ. ರವಿ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ನಾಳೆಗೆ ಮುಂದೂಡಿದ್ದಾರೆ.

ಇನ್ನು ಹೈಕೋರ್ಟ್ ನಿಂದ ಬೇಲ್ ಸಿಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಎಂಎಲ್ಸಿ ಸಿ ಟಿ  ರವಿ ಸತ್ಯಮೇವ ಜಯತೆ ಅಂತ ಬೆಳಗಾವಿಯಲ್ಲಿ ಹೇಳಿದ್ದೆ . ಸತ್ಯಕ್ಕೆ ಜಯ ಸಿಕ್ಕಿದೆ . ಬೆನ್ನೆಲುಬಾಗಿ ನಿಂತ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ಧನ್ಯವಾದ  ಎಂದಿದ್ದಾರೆ.

ಕಷ್ಟ ಬಂದಾಗ ಕುಗ್ಗುವುದಿಲ್ಲ. ಈ ರೀತಿ ಕೆಟ್ಟ ಸಂದರ್ಭ ಬಂದಾಗು ಕುಗ್ಗುವುದಿಲ್ಲ . ಹಲ್ಲೆ ಮಾಡಿದವರ ಮೇಲೆ ದೂರು ನೀಡಿದ್ದೇನೆ. ಆದರೆ ದೂರು ದಾಖಲಾಗಿಲ್ಲ. ನ್ಯಾಯ ಎಲ್ಲಿದೆ ಮುಖ್ಯಮಂತ್ರಿಗಳೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಿ ಟಿ ರವಿ ಪ್ರಶ್ನೆ ಮಾಡಿದ್ದಾರೆ.