ಬೆಂಗಳೂರು: ರಾಜ್ಯಪಾಲರು ಸುಗ್ರೀವಾಜ್ಞೆ ವಾಪಾಸ್ ಕಳುಹಿಸಿದ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದು ಅಬ್ಸರ್ ವೇಷನ್ ಹಾಕಿ ವಾಪಾಸ್ ಕೊಟ್ಟಿದ್ದಾರೆ. ಈಗಾಗಲೇ ನಮ್ಮ ಸರ್ಕಾರ ಉತ್ತರ ಕೊಟ್ಟು, ಮತ್ತೆ ಕಳಿಸೋಕೆ ಮುಂದಾಗಿದೆ. ತಪ್ಪು ಮಾಡಿದ ಕಂಪನಿಗಳಿಗೆ ದಂಡ ಹಾಕುತ್ತಾರೆ.ರಾಜ್ಯಪಾಲರು ಯಾವ ದೃಷ್ಟಿಕೋನದಲ್ಲಿ ಅಬ್ಸರ್ ವೇಷನ್ ಮಾಡಿದ್ದಾರೊ ಗೊತ್ತಿಲ್ಲ.ತಪ್ಪುಗಳು ಮಾಡದೇ ಇರಲಿ ಅಂತ ನಾವು ದಂಡದ ಪ್ರಮಾಣ ಹೆಚ್ಚು ಮಾಡಿದ್ದೇವೆ.ತಪ್ಪು ಮಾಡದೇ ಇದ್ದರೆ ಆ ಪ್ರಯೇಮ ಬರುವುದಿಲ್ಲ ಎಂದರು.
ಅಧಿವೇಶದಲ್ಲಿ ಚರ್ಚೆ ಬಳಿಕ ಬಿಲ್ ತನ್ನಿ ಎಂದು ರಾಜ್ಯಪಾಲರ ಪತ್ರದಲ್ಲಿ ಉಲ್ಲೇಖ ವಿಚಾರದ ಬಗ್ಗೆ ಮಾತನಾಡಿದ ಅವರು ಅವರು ಸಲಹೆ ಕೊಟ್ಟಿದ್ದಾರೆ, ಹತ್ತಿರದಲ್ಲೇ ವಿಧಾನಸಭೆ ಅಧಿವೇಶ ಬರುತ್ತಿದೆ. ಮಾ.3ರಂದು ಅಧಿವೇಶನ ಮಾಡಬೇಕು ಅಂತ ಅಂದುಕೊಂಡಿದ್ದೇವೆ.ಪ್ರತಿನಿತ್ಯ ಕೊಲೆ, ಆತ್ಮಹತ್ಯೆ, ಕಿರುಕುಳ ಪ್ರಕರಣ ಹೆಚ್ಚಾಗುತ್ತಿತ್ತು.ಹೀಗಾಗಿ ತ್ವರಿತಗತಿಯಲ್ಲಿ ನಾವು ಕ್ರಮ ಕೈಗೊಳ್ಳುವುದಕ್ಕೆ ಅನುವು ಮಾಡಿಕೊಡಿ ಅಂತ ಕೇಳಿದ್ವಿ.ಅವರು ಒಟ್ಟಾರೆಯಾಗಿ ತಿರಸ್ಕಾರ ಮಾಡಿಲ್ಲ.ವಿವರಣೆ ಕೊಡಿ ಅಂತ ಹೇಳಿದ್ದಾರೆ, ಕೊಡ್ತೀವಿ.ಅವರು ತಿರಸ್ಕಾರ ಮಾಡಿದಿದ್ರೆ ನಮ್ಮ ಉತ್ತರ ಬೇರೆ ಇರ್ತಿತ್ತು.ಸರ್ಕಾರದ ದೃಷ್ಟಿಕೋನ ಒಂದು, ರಾಜ್ಯಪಾಲರ ದೃಷ್ಟಿಕೋನ ಮತ್ತೊಂದಿರುತ್ತೆ ಎಂದಿದ್ದಾರೆ.
ಇಡೀ ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಈ ರೀತಿಯ ಘಟನೆಗಳು ನಡೆದಿದೆ.ನೀವು ವಿವರಣೆಯನ್ನೇ ಕೇಳಬಾರದು ಅಂತ ನಾವು ರಾಜ್ಯಪಾಲರಿಗೆ ಹೇಳೋಕೆ ಆಗುತ್ತಾ?.ರಾಜ್ಯಪಾಲರು ಅವರದ್ದೇ ದೃಷ್ಟಿಕೋನದಲ್ಲಿ ಯೋಚನೆ ಮಾಡಿದ್ದಾರೆ.ಆದರೆ ನಾವು ಆ ರೀತಿ ಯೋಚನೆ ಮಾಡಿಲ್ಲ.ಕೆಲವು ಕಾನೂನುಗಳು ಇದ್ರೂ ಅದನ್ನ ನಾವು ಜಾರಿ ಮಾಡೋಕೆ ಆಗಲ್ಲ ಅಂತ ಸುಗ್ರೀವಾಜ್ಞೆ ಮೂಲಕ ಜಾರಿಗೆ ಮುಂದಾಗಿದ್ದೀವಿ.ಅದಷ್ಟೇ ಇದ್ದಿದ್ರೆ ನಮಗೆ ಅವಶ್ಯಕತೆಯೇ ಇರಲಿಲ್ಲ ಅಲ್ವಾ .ಅಷ್ಟು ಕನಿಷ್ಟ ಜ್ಞಾನ ಸರ್ಕಾರಕ್ಕೆ ಇದೆ.ಸೂಪರ್ ಸ್ಪೀಡ್ ಮಾಡಿ ನಾವೇ ಆದೇಶ ಹೊರಡಿಸಲು ಸಾಧ್ಯವಿಲ್ಲ.ಅದಕ್ಕೆ ಅವಕಾಶ ಇಲ್ಲ, ರಾಜ್ಯಪಾಲರೇ ಅಂಕಿತ ಹಾಕ್ಬೇಕು.ಇಲ್ಲದಿದ್ದರೇ ನಾವೇ ಮಾಡಿಕೊಳ್ತಾ ಇದ್ವಿ, ಅವರ ಬಳಿ ಕಳುಹಿಸತ್ತಲೇ ಇರಲಿಲ್ಲ.ಅಸೆಂಬ್ಲಿ ನಲ್ಲಿ ಬಿಲ್ ಇಡ್ತೀವಿ, ಪಾಸ್ ಆದ್ಮೇಲೆ ಅವರಿಗೆ ಕಳುಹಿಸಿ ಕೊಡ್ತೀವಿ ಎಂದು ಅವರು ಹೇಳಿದ್ದಾರೆ.