ಮನೆ Latest News ಇದೇ ತಿಂಗಳಿಂದಲೇ ಅಕ್ಕಿಯನ್ನ ಗ್ರಾಹಕರಿಗೆ ಕೊಡ್ತಿದ್ದೇವೆ: ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿಕೆ

ಇದೇ ತಿಂಗಳಿಂದಲೇ ಅಕ್ಕಿಯನ್ನ ಗ್ರಾಹಕರಿಗೆ ಕೊಡ್ತಿದ್ದೇವೆ: ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿಕೆ

0

 

ಬೆಂಗಳೂರು; ಇದೇ ತಿಂಗಳಿಂದಲೇ ಅಕ್ಕಿಯನ್ನ ಗ್ರಾಹಕರಿಗೆ ಕೊಡ್ತಿದ್ದೇವೆ ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು ಚುನಾವಣೆ ಮುಗಿದ ಬಳಿಕ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಆಗ ಅಕ್ಕಿ ಕೊಡಲು ಆಗುವುದಿಲ್ಲ ಅಂತ ಕೇಂದ್ರದವರು ಹೇಳಿದ್ದರು. ಹೀಗಾಗಿ ನಾವು ಐದು ಕೆಜಿ ಅಕ್ಕಿ, ಐದು ಕೆಜಿ ಅಕ್ಕಿಗೆ‌ಹಣ ಕೊಡುತ್ತಿದ್ದೆವು. ಈಗ ಕೇಂದ್ರ‌ ಸಚಿವರು ಅಕ್ಕಿ‌ಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ. ರಾಜ್ಯದ ಜನರಿಗೆ ಈಗಾಗಲೇ ನವೆಂಬರ್ ವರೆಗೂ ಹಣ ನೀಡಿದ್ದೇವೆ. ಜನವರಿವರೆಗೆ ಹಣವನ್ನು ಡಿಬಿಟಿ ಮೂಲಕ ಹಾಕುತ್ತೇವೆ. ಫೆಬ್ರುವರಿಯಿಂದ ನಾವು ಹತ್ತು ಕೆಜಿ ಅಕ್ಕಿ ಕೊಡುವ ತೀರ್ಮಾನ ಮಾಡಿದ್ದೇವೆ. 2013 ರಿಂದ ಈ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಇದೇ ತಿಂಗಳಿಂದಲೇ ಅಕ್ಕಿಯನ್ನ ಗ್ರಾಹಕರಿಗೆ ಕೊಡ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಮಹತ್ವದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿಯನ್ನು ವಿತರಿಸಲು ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ್ದೆವು. ನಂತರದ ದಿನಗಳಲ್ಲಿ ಅಕ್ಕಿಯ ಲಭ್ಯವಾಗದ ಕಾರಣ ನಮ್ಮ ಸರ್ಕಾರ ಸಾರ್ವಜನಿಕರಿಗೆ ಕೊಟ್ಟ ಮಾತಿನಂತೆ ಸಿಎಂ ಡಿಸಿಎಂ ನೇತೃತ್ವದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯ ಜೊತೆಗೆ ಉಳಿದ 5 ಕೆಜಿ ಅಕ್ಕಿಗೆ ರೂ. 170 ರೂಗಳಂತೆ ನೇರ ನಗದು ವರ್ಗಾವಣೆ ಮಾಡುತ್ತಿದ್ದೆವು. ಈಗ ಕೇಂದ್ರ ಸರ್ಕಾರದಿಂದ ಅಕ್ಕಿ ಲಭ್ಯವಿರುವ ಹಿನ್ನಲೆ ಜೂನ್-2025ರವರೆಗೆ OMSS(D)ರಡಿ ಪ್ರತಿ ಕೆ.ಜಿ.ಗೆ ರೂ. 22.50/-ದರದಲ್ಲಿ ಸರಬರಾಜು ಮಾಡಲು ಒಪ್ಪಿಗೆ ನೀಡಿದೆ. ಹೀಗಾಗಿ ಸರ್ಕಾರದಿಂದ ವಿತರಿಸಲು ಉದ್ದೇಶಿಸಿರುವ 05 ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರದ OMSS (D) ಯೋಜನೆಯಡಿ ಖರೀದಿಸುವ ಫೆಬ್ರವರುಯಿಂದ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಹ್ಲಾದ್ ಜೋಶಿಯವರನ್ನ ಎರಡು ಸರಿ ಭೇಟಿಯಾಗಿದ್ದೆ. ಇದೇ ತಿಂಗಳಿಂದಲೇ ಅಕ್ಕಿಯನ್ನ ಗ್ರಾಹಕರಿಗೆ ಕೊಡ್ತಿದ್ದೇವೆ. ಈಗಾಗಲೇ ಸರ್ಕಾರ ಆದೇಶ ಮಾಡಿದೆ. ನಮಗೆ ಬೇಕಾಗಿರುವ 5 ಕೆಜಿ ಅಕ್ಕಿ ಕೊಡೊದಕ್ಕೆ ಕೇಂದ್ರ ಸರ್ಕಾರವು ಒಪ್ಪಿಗೆ ಕೊಟ್ಟಿದೆ. ಪ್ರತಿ ತಿಂಗಳಿಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆ ಇದೆ. ವರ್ಷಕ್ಕೆ 27.84 ಲಕ್ಷ ಮೆಟ್ರಿಕ್ ಅಕ್ಕಿ ಅವಶ್ಯಕತೆ ಇದೆ. ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದ ಜನರಿಗೆ ಅಕ್ಕಿ, ಹಣ ಎರಡನ್ನೂ ಕೊಟ್ಟಿದ್ದೇವೆ. ನಮ್ಮ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಸ್ಪಂದಿಸಿದ್ದಾರೆ. ನಮಗೆ ಬೇಕಾಗಿರುವ ಅಕ್ಕಿ ಕೊಡುವುದಕ್ಕೆ ಸರ್ಕಾರ ಆದೇಶ ಮಾಡಿದೆ ಎಂದಿದ್ದಾರೆ.

ಕೆಂದ್ರ ಸರ್ಕಾರ ಮೊದಲು ಒಂದು ಕೆಜಿ ಅಕ್ಕಿಗೆ 28 ರೂ ನಿಗದಿಪಡಿಸಿತ್ತು. ಆದಾದ ಬಳಿಕ ಕೆಂದ್ರ ಸರ್ಕಾರ 17/1/25 ರಂದು  ಪ್ರತಿ ಕೆಜಿಗೆ 22.50 ರೂ ನಂತೆ  ಕೊಡಲು ನಿರ್ಧರಿಸಿದೆ .ದರ ಪರಿಷ್ಕರಣೆ‌ ಹಿನ್ನೆಲೆಯಲ್ಲಿ ‌ಮೂರು ತಿಂಗಳು ಹಣ ಹಾಕಿಲ್ಲ. ಒಂದು ವಾರದೊಳಗೆ ಸಕಾಲದಲ್ಲಿ ಹಣ ಹಾಕುತ್ತೇವೆ. ಸಿಎಂ‌ ಜೊತೆಗೂ ನಾನು ಸಭೆಯನ್ನು ಮಾಡುತ್ತೇನೆ. 531.71 ಕೋಟಿ ಪ್ರತಿ ತಿಂಗಳು ಹಣ ಸಂದಾಯ ಮಾಡುತ್ತದೆ ಸರ್ಕಾರ. 159 ಕೋಟಿ ಸರ್ಕಾರಕ್ಕೆ ಹಣ ಉಳಿಯಲಿದೆ. ನವೆಂಬರ್, ಡಿಸೆಂಬರ್, ಜನವರಿ ಹಣ ಡಿಬಿಟಿ ಮೂಲಕ ಹಾಕುತ್ತೇವೆ. ಪರಿಷ್ಕರಣೆ ಕಾರ್ಯಕ್ರಮ ಇದ್ದಿದ್ರಿಂದ ಸಮಸ್ಯೆ ಆಯ್ತು. ಎಪಿ ಎಲ್, ಬಿಪಿ ಎಲ್ ಗೊಂದಲ ಇದ್ದಿದ್ದರಿಂದ ಹಣ ಹಾಕೋದು ತಡವಾಯ್ತು ಅಷ್ಟೆ. ಸಕಾಲಕ್ಕೆ ಈ ಮೂರು ತಿಂಗಳ ಹಣ ಹಾಕುತ್ತೇವೆ. ಬಿಪಿಎಲ್ ಕಾರ್ಡುದಾರರು ಯಾರು ಎಪಿಎಲ್ ಗೆ ಸೇರಿದ್ದಾರೆ ಅವರು ಕಾರ್ಡ್ ಬಿಟ್ಟುಕೊಡಿ. ಬಿಪಿಎಲ್ ಅವರು ಯಾರಿದ್ದಾರೆ ಅವರಿಗೆ ಸಿಗಬೇಕಿದೆ. ಯಾರು ಸಮಯದ ಒಳಗಾಗಿ ಬಿಟ್ಟು ಕೊಡೋದಿಲ್ಲ ಅವರಿಗೆ ದಂಡ ವಿಧಿಸುತ್ತೇವೆ. ನಾವು ಇದಕ್ಕೊಂದು ಪ್ರಕಟಣೆ ಹೊರಡಿಸುತ್ತೇವೆ ಎಂದಿದ್ದಾರೆ.