ಬೆಂಗಳೂರು: ನಮಗೆ ಬಾಗಲಕೋಟೆ, ದಾವಣಗೆರೆ ಎರಡೂ ಕಡೆ ಉತ್ತಮ ಗೆಲುವಿನ ಅಲೆ ಇದೆ, ಕಾಂಗ್ರೆಸ್ ನವರಿಗೆ ಸೋಲುವ ಭೀತಿ ಇದೆ; ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮಗೆ ಬಾಗಲಕೋಟೆ, ದಾವಣಗೆರೆ ಎರಡೂ ಕಡೆ ಉತ್ತಮ ಗೆಲುವಿನ ಅಲೆ ಇದೆ. ಕಾಂಗ್ರೆಸ್ ನವರಿಗೆ ಸೋಲುವ ಭೀತಿ ಇದೆ. ಇಂಟಲಿಜೆನ್ಸ್ ರಿಪೋರ್ಟ್ ಕೂಡಾ ಸಿಕ್ಕಿದೆ. ಅಭಿವೃದ್ಧಿ ಮಾಡಿದ್ದರೆ ಇಷ್ಟೊಂದು ಕಷ್ಟ ಯಾಕೆ ಪಡುತ್ತಿದ್ದರು?. ಕಳೆದ ಮೂರು ವರ್ಷಗಳ ನಿಮ್ಮ ಅಭಿವೃದ್ಧಿ ಶೂನ್ಯ. ಸಿದ್ದರಾಮಯ್ಯ ಕರ್ನಾಟಕವನ್ನು ಸಾಲಗಾರನಾಗಿ ಮಾಡಿದ್ದಾರೆ. ಗೃಹಲಕ್ಷ್ಮಿ ಹಣ ಎರಡು ತಿಂಗಳು ಬಿಟ್ಟು ಹಾಕುತ್ತಿದ್ದಾರೆ. ಬಿಜೆಪಿ ದೊಡ್ಡ ಮಟ್ಟದಲ್ಲಿ ಗೆಲ್ಲುವ ವಿಶ್ವಾಸ ಇದೆ.ಎಲ್ಲಾ ಹಿಂದುತ್ವ ವಿಚಾರದಲ್ಲಿ ನಾವೆಲ್ಲಾ ಪ್ರಚಾರ ಮಾಡುತ್ತೇವೆ. ಹಿಂದು ನಾವೆಲ್ಲಾ ಒಂದು. ಸಿದ್ದರಾಮಯ್ಯ ಕೆಲವು ಕಡೆ ಬಡವರನ್ನು ಗೆಲ್ಲಿಸಿ ಅಂತ ಹೇಳಿದ್ದಾರೆ. ಪರೋಕ್ಷವಾಗಿ ಸಿದ್ದರಾಮಯ್ಯ ನಮಗೆ ಬೆಂಬಲ ಕೊಡುತ್ತಿದ್ದಾರೆ. ಗೆಲ್ಲುವ ವಿಶ್ವಾಸ ನಮಗಿದೆ ಎಂದಿದ್ದಾರೆ.
ಗ್ಯಾಸ್ ಸಿಲಿಂಡರ್ ವಿಚಾರದ ಬಗ್ಗೆ ಮಾತನಾಡಿದ ಅವರು ಅಪಪ್ರಚಾರ ಮಾಡುವ ಡಿ.ಕೆ. ಶಿವಕುಮಾರ್ ಮೊದಲು ಕ್ಷಮೆ ಕೇಳಬೇಕು. ಇಡೀ ಪ್ರಪಂಚಕ್ಕೆ ಇದರ ಬಿಸಿ ತಟ್ಟಿದೆ. ಪಾಕಿಸ್ತಾನದಲ್ಲಿ ಪೆಟ್ರೋಲ್ 500 ರೂ. ಇದೆ. ಇದಕ್ಕೆ ಡಿ.ಕೆ. ಶಿವಕುಮಾರ್ ಏನು ಹೇಳುತ್ತಾರೆ?. ಇವರಿಗೆ ಕುಕ್ಕರ್ ಬ್ರದರ್ ಅಂದ್ರೆ ಪ್ರೀತಿ. ಹಾರ್ಮುಜ್ ನಲ್ಲಿ ಭಾರತದ ಹಡಗು ಮಾತ್ರ ಬಿಡುತ್ತಿದ್ದಾರೆ. ಪಾಕಿಸ್ತಾನದ ಹಡಗನ್ನೂ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇನ್ನೂ ಬೆಂಕಿ ಹಚ್ಚೋಣ ಅಂತ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಸೀಟ್ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಗೊತ್ತಿರಯವ ಪ್ರಕಾರ ಈಗಿರುವ ಸೀಟಿನ ಆಧಾರದಲ್ಲಿ ಅನುಪಾತವಾರು ಮಾಡುತ್ತಾರೆ. ಇದು ನನಗೆ ಇರುವ ಮಾಹಿತಿ. ಇದರಲ್ಲಿ ಗಿಮಿಕ್ ಇಲ್ಲ ಏನೂ ಇಲ್ಲ. ಪ್ರಧಾನಿ ಹೇಳುವಾಗ ಏನು ಗಿಮಿಕ್ ಬರುತ್ತದೆ?. ಸಿದ್ದರಾಮಯ್ಯ ಹೇಳಿದರೆ ಸುಳ್ಳು. ಸಿದ್ದರಾಮಯ್ಯ ಎಂದರೆ ಮೋಸ. ಅಕ್ಕಿ ಕೇಂದ್ರ ಸರ್ಕಾರದ್ದು, ನಮ್ಮದು, ಚೀಲ ಮಾತ್ರ ಇವರದ್ದು. ಬಜೆಟ್‌ನಲ್ಲಿ ಸಾಲ ಮಾಡಿದರೂ ಸಾಲ ರಾಮಯ್ಯ ನಾನಲ್ಲ ಎನ್ನುತ್ತಾರೆ . ಲೋಕಸಭೆಯಲ್ಲಿ ಚರ್ಚೆ ಮಾಡಲಿ ಈ ವಿಚಾರ. ಹಾಲು ಯಾವುದು ನೀರು ಯಾವುದು ಗೊತ್ತಾಗಲಿ. ಅಲ್ಲಿಯವರೆಗೂ ಕಾದು ನೋಡಿ. ಯಾಕೆ ಬಾಯಿ ಬಾಯಿ ಬಡೆದುಕೋಳ್ಳುತ್ತೀರಾ?. ಈಗಲೇ ದೇಶದಲ್ಲಿ ಖಾಲಿ ಆಗಿದ್ದೀರಿ. ಮೂರು ರಾಜ್ಯ ಖಾಲಿ ಆದಮೇಲೆ ತಿರುಪತಿ ಚೊಂಬು. ಮೂರು ನಾಮ ಇಟ್ಟುಕೊಂಡು ಹೋಗುತ್ತಾ ಇರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.











