ಮನೆ Latest News ಮುಡಾ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಈ ರೀತಿ ತೀರ್ಪು ಬರುತ್ತೆ ಎಂದು ನಾವು ನಿರೀಕ್ಷಿಸಿದ್ದೆವು: ಗೃಹ...

ಮುಡಾ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಈ ರೀತಿ ತೀರ್ಪು ಬರುತ್ತೆ ಎಂದು ನಾವು ನಿರೀಕ್ಷಿಸಿದ್ದೆವು: ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಹೇಳಿಕೆ

0

 

ಬೆಂಗಳೂರು: ಮುಡಾ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಈ ರೀತಿ ತೀರ್ಪು ಬರುತ್ತೆ ಎಂದು ನಾವು ನಿರೀಕ್ಷಿಸಿದ್ದೆವು ಎಂದು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ರೀತಿ ತೀರ್ಪು ಬರುತ್ತೆ ಅಂದುಕೊಂಡಿದ್ದೆವು. ಯಾಕೆಂದ್ರೆ ಇದರಲ್ಲಿ ಸಿಬಿಐ ಗೆ ಕೊಡಬೇಕಾದ ಅಂಶ ಯಾವುದು ಇರಲಿಲ್ಲ.ಜೊತೆಗೆ ಲೋಕಾಯುಕ್ತ ತನಿಖೆ ಮೇಲೆ ವಿಶ್ವಾಸ ಇಟ್ಟು ತೀರ್ಮಾನ ಮಾಡಿದ್ದಾರೆ. ಲೋಕಾಯುಕ್ತ ವರದಿ ಸರಿ ಇಲ್ಲ ಅನ್ನೋದಕ್ಕೆ ಏನು ಪುರಾವೆ. ಯಾವ ಅರ್ಥದಲ್ಲಿ ತನಿಖೆ ಸರಿಯಾಗಿಲ್ಲ ಅಂತ ಹೇಳೋಕೆ ಆಗಿಲ್ಲ.ಸುಪ್ರೀಂ ಕೋರ್ಟ್ ಗೆ ಹೋಗಲಿ ನಮ್ಮ ಲೀಗಲ್ ಟೀಮ್ ಪರಿಶೀಲಿಸ್ತಾರೆ .ಇಡಿ ತನಿಖೆ ಅವ್ರು ಮಾಡಲಿ, ಅವರ ತೀರ್ಮಾನ ಏನು ಬರತ್ತೆ ನೋಡೋಣ ಎಂದಿದ್ದಾರೆ.

ರಾಜಕೀಯವಾಗಿ ಮಾತನಾಡೋರಿಗೆ ಉತ್ತರ ಸಿಕ್ಕಿದೆ.ಯಡಿಯೂರಪ್ಪ ಕೇಸ್ ನಲ್ಲಿ ಅವರಿಗೂ ಒಂದಷ್ಟು ರಿಲೀಫ್ ಸಿಕ್ಕಿದೆ. ಕಾನೂನಿನ ತೀರ್ಮಾನಗಳು ಅದು ಸುಪ್ರೀಂ ಕೋರ್ಟ್ ಆಗಲೀ ಹೈಕೋರ್ಟ್ ಆಗಲೀ.ಸ್ವಾಭಾವಿಕವಾಗಿ ನ್ಯಾಯಯುತವಾಗಿ ಕೂಡಿರತ್ತೆ ಅನ್ನೋದಕ್ಕೆ ಇದು ಉದಾಹರಣೆ ಎಂದು ಅರು ಹೇಳಿದ್ದಾರೆ.

ಸಿಎಂ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಮಾತನಾಡಿ ಲೋಕಾಯುಕ್ತ ಸ್ವತಂತ್ರ ಸಂಸ್ಥೆ. ಅಂತಹ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.ಸಿಬಿಐ ಗೆ‌ ವಹಿಸಲು ಈ ಪ್ರಕರಣ ದಲ್ಲಿ ಕಾರಣವಾದ ಅಂಶಗಳು ಇಲ್ಲ ಅಂತ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.ನಾನು ಇನ್ನೂ‌ ತೀರ್ಪು ಪ್ರತಿ ಓದಿಲ್ಲ.ಇಡಿ ಯವರ ಎರಡೂ ನೋಟೀಸ್ ಗಳು ಕೋರ್ಟ್ ನಲ್ಲಿ ಇವೆ.ಯಾವುದೇ ತನಿಖೆಗೂ ನಾವು ಸಹಕಾರ ಕೊಡ್ತೀವಿ.ಕಾನೂನು ಚೌಕಟ್ಟಿನಲ್ಲಿ ಹೋರಾಡುತ್ತೇವೆ ಎಂದ್ರು.

ಈ ತೀರ್ಪಿನ ಬಗ್ಗೆ ಸಿಎಂ ಕೂಡಾ ಸಂತೋಷ ವ್ಯಕ್ತ ಪಡಿಸಿದ್ದಾರೆ.ಈ ತೀರ್ಪಿನ ಬಗ್ಗೆ ಸಿಎಂ ಗಮನಕ್ಕೆ ಬಂದಿದೆ. ಈ ತೀರ್ಪಿನ ಬಗ್ಗೆ ಈಗಲೇ ಸಂಭ್ರಮ ಬೇಡ ಎಂಬ ವಿಜಯೇಂದ್ರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ವಿಜಯೇಂದ್ರ ಅವರಿಗೆ ಅವರದ್ದೆ ಆದ ಸಮಸ್ಯೆ ಗಳಿವೆ. ಯಡಿಯೂರಪ್ಪ ಅವರ ತೇಜೋವಧೆ ಆಗ್ತಾ ಇದೆ.ಅದರ ಬಗ್ಗೆ ಅವರು ಗಮನ ಹರಿಸಲಿ ಎಂದ ಅವರು ಮುಂದಿನ ಕಾನೂನು ಹೋರಾಟ ನಿಲ್ಲಲ್ಲ ಎಂಬ ಸ್ನೇಹಮಯ ಕೃಷ್ಣ ಹೇಳಿಕೆಗೆ ತಿರುಗೇಟು ಕೊಡುತ್ತಾ ಸ್ನೇಹಮಯಿ ಕೃಷ್ಣ ಸುಪ್ರೀಂ ಕೋರ್ಟ್ ಗೆ ಹೋಗ್ತಾರೋ ಅವರ ಹಿಂದೆ ಇರೋರು ಹೋಗ್ತಾರೋ ನೋಡೋಣ. ಸರ್ಕಾರ ವನ್ನು ಅಸ್ಥಿರ ಗೊಳಿಸುವ ಪ್ರಯತ್ನ ನಡೆಯುತ್ತಿದೆ.ಇದನ್ನು ಕಾನೂನು ಪ್ರಕಾರ ಹೋರಾಟ ಮಾಡ್ತೀವಿ ಎಂದರು.

ಸಚಿವ ಹೆಚ್ ಸಿ ಮಹಾದೇವಪ್ಪ ಮಾತನಾಡಿ ಸಿಎಂ ಮತ್ತು ನಾವು ಕಾನೂನನನ್ನ ಗೌರವಿಸುತ್ತೇವೆ. ಆದ್ರೆ ಈ ಕೇಸ್ ನಲ್ಲಿ ರಾಜಕೀಯ ಮಾಡೋದನ್ನೇ ಗುರಿ ಇತ್ತು. ಆದ್ರೀಗ ಹೈಕೋರ್ಟ್ ಎಲ್ಲಾ ಅಂಶಗಳನ್ನು ಪರಾಮರ್ಶಿಸಿ ಅರ್ಜಿ ವಜಾ ಗೊಳಿಸಿದೆ. ಹಿಂದೆ ಮತ್ತು ಈಗಲೂ ನಾವು ಆದೇಶ ಗೌರವಿಸುತ್ತೇವೆ.ಸದ್ಯ ನಾವು ಲೋಕಾಯುಕ್ತಕ್ಕೆ ಗೌರವ ನೀಡಬೇಕು.ಅದೊಂದು ಸ್ವತಂತ್ರ ಸಂಸ್ಥೆ.ಇದನ್ನ ರಾಜಕೀಯ ಉದ್ಧೇಶದಿಂದ ವಿರೋಧ ಮಾಡುತ್ತಲೇ ಬಂದಿದ್ದಾರೆ.ಇದಕ್ಕೂ, ಸಿಎಂ ಸ್ಥಾನಕ್ಕೂ ಸಂಬಂಧ ಇಲ್ಲ.ಇದು ವಿರೋಧ ಪಕ್ಷ ಗಳು ಸಿಎಂ ಅವರನ್ನ ಜಾರಿತ್ರಗೊಳಿಸೋ ಷಡ್ಯಂತ್ರ ಅಷ್ಟೇ ಎಂದಿದ್ದಾರೆ.