ಮನೆ Latest News ನಮ್ಮಲ್ಲಿ ಯಾವುದೇ ಟೀಂ ಇಲ್ಲ, ಭಿನ್ನಾಭಿಪ್ರಾಯ ಇಲ್ಲ, ಆದ್ರೆ ಕೆಲವರು ಅವರವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ:...

ನಮ್ಮಲ್ಲಿ ಯಾವುದೇ ಟೀಂ ಇಲ್ಲ, ಭಿನ್ನಾಭಿಪ್ರಾಯ ಇಲ್ಲ, ಆದ್ರೆ ಕೆಲವರು ಅವರವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ: ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ನಮ್ಮಲ್ಲಿ ಯಾವುದೇ ಟೀಂ ಇಲ್ಲ, ಭಿನ್ನಾಭಿಪ್ರಾಯ ಇಲ್ಲ, ಆದ್ರೆ ಕೆಲವರು ಅವರವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಹುಟ್ಟು ಹಬ್ಬ ಹಿನ್ನೆಲೆ ಸಂಜಯ್ ನಗರದ ಮುನಿಯಪ್ಪ ನಿವಾಸಕ್ಕೆ ಆಗಮಿಸಿದ ಪರಮೇಶ್ವರ್ ಅವರಿಗೆ ಶುಭ ಕೋರಿದರು. ಆರೋಗ್ಯವಾಗಿರಿ, ಧೀರ್ಘ ಕಾಲ ಅಧಿಕಾರದಲ್ಲಿರಿ ಎಂದು ಶುಭ ಹಾರೈಸಿದರು.

ಇದೇ ವೇಳೆ  ಮಾತನಾಡಿದ ಅವರು ಮುನಿಯಪ್ಪ ಅವರದ್ದು ಮೊನ್ನೆ ಹುಟ್ಟು ಹಬ್ಬ. ಅಂದು ಶುಭಕೋರೋದಕ್ಕೆ ಆಗಿರ್ಲಿಲ್ಲ. ಅದಕ್ಕೆ ಒಳ್ಳೇದ್ ಆಗಲಿ, ಆರೋಗ್ಯ ನೀಡಲಿ. ಮನಸ್ಸಿನಲ್ಲಿ ಅಂದುಕೊಂಡಿದ್ದು ಎಲ್ಲಾ ಆಗಲಿ ಎಂದು ಶುಭ ಕೋರಿದ್ದೇನೆ. ಹಿರಿಯ ರಾಜಕಾರಣ, ಏಳು ಬಾರಿ ಲೋಕಸಭೆಗೆ ಹೋಗಿದ್ದರು. ಹಿರಿತನ ಕಾಪಾಡಿಕೊಂಡು ಬಂದಿದ್ದೇನೆ.ಅನೇಕ ಕೆಲಸ ರಾಜ್ಯಕ್ಕೆ ಮಾಡಿದ್ದಾರೆ. ರಾಜ್ಯದ ಹಿತ ಕಾಪಾಡಿದ್ದಾರೆ, ಈ ಬಾರಿ ಗೆದ್ದು ಸರ್ಕಾರದಲ್ಲಿ ಸಚಿವರು ಆಗಿದ್ದಾರೆ. ಅನೇಕ ಕೊಡುಗೆ ಅವರಿಂದ ಆಗಿದೆ. ದಲಿತ ಸಮುದಾಯ ಅಂತ ಹೇಳೋದಿಲ್ಲ.ಎಲ್ಲಾ ಸಮುದಾಯಕ್ಕೆ ಮುನಿಯಪ್ಪ ಕೆಲಸ ಮಾಡಿದ್ದಾರೆ.ಸಮುದಾಯವನ್ನ ಪ್ರತಿ‌ನಿಧಿಸುವವರು, ಅದಕ್ಕೆ ಹಿರಿತನ ಕಾಪಾಡಿಕೊಂಡು ಬಂದಿದ್ದಾರೆ ಎಂದರು.

ಒಳಮೀಸಲಾತಿ ಗೊಂದಲ ವಿಚಾರದ ಬಗ್ಗೆ ಮಾತನಾಡಿದ ಅವರು ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ.೫೬% ಮೀಸಲಾತಿ ಕೊಡಬೇಕು ಅಂತ ಇತ್ತು. ನಾಗಮೋಹನ್ ದಾಸ್ ವರದಿ ಪ್ರಕಾರವೇ ಮೂರು ವರ್ಗ ಮಾಡಿದ್ವಿ. ಆದ್ರೆ ಕೋರ್ಟ್ ನಲ್ಲಿ ೫೬% ಆಗೋದಿಲ್ಲ, ೫೦% ಸೀಲಿಂಗ್ ಆಗಿದೆ ಅಂತ ಹೇಳ್ತು. ೫೦% ಮುಂದುವರಿಸಲು ಕೋರ್ಟ್ ಅಭಿಪ್ರಾಯ ಹೇಳಿತ್ತು. ನಮ್ಮಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಆದ್ರೆ ಕೆಲ ಒಂದಿಷ್ಟು ಗೊಂದಲ ಆಗಬಾರದು ಅಂತ ಚರ್ಚೆ ನಡೀತಿದೆ  , ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ.ನಮ್ಮಲ್ಲಿ ಯಾವುದೇ ಟೀಂ ಇಲ್ಲ, ಭಿನ್ನಾಭಿಪ್ರಾಯ ಇಲ್ಲ. ಆದ್ರೆ ಕೆಲವರು ಅವರವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ. ಆದ್ರೆ ವಿರೋಧ ಪಕ್ಷದವರು ಲಾಭ ಪಡೆಯೋಕೆ ಹೋದ್ರೆ ನಾವು ಎದುರಿಸುತ್ತೇವೆ.ಟೆಕ್ನಿಕಲ್ ಸಮಸ್ಯೆ ಅಷ್ಟೇ.. ೫೦% ಅನ್ವಯ ದಲ್ಲೇ ನೇಮಕಾತಿ ಆಗುತ್ತದೆ ಎಂದ ಅವರು  ಬಳ್ಳಾರಿ ವಿಷ್ಯ ನೋಡೋಣ.. ಒಬ್ಬ ಹುಡುಗ ಇದ್ದಾನೆ.ಅವರನ್ನ ಹಿಡಿದುಕೊಂಡು ಬರ್ತೇವೆ. ಅವರ ಉದ್ದೇಶ ಏನು, ಯಾರೋ‌ ಒಬ್ಭ ಡ್ರಗ್ ತೆಗೆದುಕೊಂಡಿದ್ದಾನೆ ಅಂತ ಹೇಳುತ್ತಿದ್ದರು, ನೋಡೋಣ ಎಂದಿದ್ದಾರೆ.