ಬೆಂಗಳೂರು; ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪೋದಿಲ್ಲ ಎಂದು ನಾವೆಲ್ಲರೂ ನಂಬಿದ್ದೇವೆ ಎಂದು ಶಾಸಕ ಕುಣಿಗಲ್ ರಂಗನಾಥ್ ಹೇಳಿದ್ದಾರೆ.
ಸೂಕ್ತ ಸಂದರ್ಭದಲ್ಲಿ ಸಿಎಂ ಉತ್ತರ ಕೊಡುತ್ತಾರೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು ಹೌದು, ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪೋದಿಲ್ಲ ಎಂದು ನಾವೆಲ್ಲರೂ ನಂಬಿದ್ದೇವೆ. ಅದೇ ವಿಶ್ವಾಸದಲ್ಲಿ ನಾವಿದ್ದೇವೆ. ಸೂಕ್ತ ಸಂದರ್ಭದಲ್ಲಿ ಅವರೇ ರಾಜ್ಯದ ಜನತೆಗೆ ಉತ್ತರ ಕೊಡುತ್ತಾರೆ. ಅಧಿಕಾರದ ಒಪ್ಪಂದ ಆಗಿದ್ದರೆ ಅದರ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ನವರೇ ಉತ್ತರ ಕೊಡುತ್ತಾರೆ. ಅದಕ್ಕಾಗಿ ನಾವು ಭರವಸೆಯಿಂದ ಇದ್ದೇವೆ ಎಂದಿದ್ದಾರೆ.
ನಾಯಿಗಳು ಎಂಬ ಮಹದೇವಪ್ಪ ಹೇಳಿಕೆಗೆ ರಂಗನಾಥ್ ಗರಂ ಆದ ಎಂದು ಶಾಸಕ ಕುಣಿಗಲ್ ರಂಗನಾಥ್ ಹೌದಲ್ವಾ ಮಹದೇವಪ್ಪ ತಾನೇ ೨೦೧೮ ರಲ್ಲಿ ಸಿದ್ದರಾಮಯ್ಯ ಜೊತೆಗೆ ಪಕ್ಷವನ್ನು ಮುನ್ನಡೆಸಿದ್ದು, ಅವರ ಶ್ರಮದಿಂದ ತನು ಮನ ಧನದಿಂದ ೮೦ ಸೀಟು ಬಂದಿತ್ತು. ಅವರ ಲೀಡರ್ ಶೀಪ್ ನಲ್ಲಿಯೇ ನಾವು ೨೦೧೮ ರಲ್ಲಿ ಚುನಾವಣೆ ಗೆದ್ದಿದ್ದು ೮೦ ಸ್ಥಾನ. ಇನ್ನು ಮುಂದೆಯೂ ಅವರೇ ಲೀಡ್ ತೆಗೆದುಕೊಳ್ಳುತ್ತಾರೆ ಎಂದರೆ ನಾವು ಅವರ ಹಿಂದೆ ಹೋಗೋದಕ್ಕೆ ರೆಡಿ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ. ಆದರೆ ಹಿರಿಯ ನಾಯಕರು ಹಿರಿಯ ಸಚಿವರು.ಅವರಿಂದ ಇಂಥ ಮಾತುಗಳು ಬರಬಾರದು. ಕಾರ್ಯಕರ್ತರು ಇಂಥ ಮಾತುಗಳನ್ನು ಅಪೇಕ್ಷೆ ಪಡುವುದಿಲ್ಲ ಎಂದಿದ್ದಾರೆ.
ಇನ್ನು ಸರ್ಕಾರದ ಮುಂದೆ ಶಾಸಕ ಕುಣಿಗಲ್ ರಂಗನಾಥ್ ಹೊಸ ಪ್ರಪೋಸಲ್ ಇಟ್ಟಿದಾರೆ. ಮದುವೆಯಾಗದ ರೈತರ ಸಮಸ್ಯೆಗೆ ಪ್ರಸ್ತಾಪ ಇಟ್ಟಿದ್ದಾರೆ ಕುಣಿಗಲ್ ರಂಗನಾಥ್. ಇನ್ನು ಬಜೆಟ್ ನಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಕೇಳಿದ್ದೇವೆ. ನಮಗೆ ಆಶೀರ್ವಾದ ಮಾಡ್ತಾರೆ. ನಮ್ಮ ತಾಲೂಕಿಗೆ ಮೆಡಿಕಲ್ ಕಾಲೇಜು ಕೇಳಿದ್ದೇನೆ. ಅದು ನನ್ನ ಆಸೆಯಾಗಿದೆ.
ಸರ್ಕಾರದಿಂದ ಆಗಿಲ್ಲ ಎಂದರೂ PPP ಮಾಡೆಲ್ ನಲ್ಲಿ ಮಾಡಬಹುದು. ರೈತರ ಮಕ್ಕಳ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಹಾಗಾಗಿ ರೈತರ ಮನೆ ಸೊಸೆ ಆಗುವವರಿಗೆ ಭತ್ಯೆ ಕೊಡಬೇಕು. ಹೆಣ್ಣು ಮಕ್ಕಳು ರೈತರನ್ನು ಮದುವೆ ಆಗುವವರಿಗೆ ಅಥವಾ ಅವರ ಮಕ್ಕಳಿಗೆ ಕೊಡಬೇಕು. ಕಾನೂನು ಅಡಿಯಲ್ಲಿ ಭತ್ಯೆ ಕೊಡಬೇಕು ಎಂದು ಸರ್ಕಾರಕ್ಕೆ ಕಾಂಗ್ರೆಸ್ ಶಾಸಕ ರಂಗನಾಥ್ ಮನವಿ ಮಾಡಿದ್ದಾರೆ.ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವುದು ತಪ್ಪು. ಮಾಧ್ಯಮಗಳಿಂದಾಗಿ ನಮ್ಮ ಅನಿಸಿಕೆ ಅಭಿಪ್ರಾಯಗಳನ್ನ ನಮ್ಮ ಸಮಸ್ಯೆಗಳನ್ನ ತಲುಪಿಸುವ ಕೆಲಸ ಮಾಡುತ್ತಿದ್ದಾರೆ . ಮಾಧ್ಯಮಗಳಿಗೆ ಸ್ವಾತಂತ್ರ್ಯ ನೀಡಬೇಕು ಎಂಬುದೆ ನಮ್ಮ ಧ್ಯೇಯ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.











