ಬೆಂಗಳೂರು; ವಿಧಾನಸಭೆಯಲ್ಲಿ ಇಂದು ತುಂಗಭದ್ರಾ ಅಣೆಕಟ್ಟು ಬಗ್ಗೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಮಾತನಾಡಿದರು.
ಈ ವೇಳೆ ಅವರು 1945 ರಲ್ಲಿ ತುಂಗಭದ್ರಾ ಅಣೆಕಟ್ಟು ಬಗ್ಗೆ ವಿವರಿಸಿದರು.1953 ರಲ್ಲಿ ಕಾಲುವೆಗೆ ನೀರು ಹರಿಯಿತು.230 ಟಿಎಂಸಿ ನೀರು ನಿಲ್ಲಿಸುವ ಅವಕಾಶ ಇದೆ. ನಮಗೆ 138 ಟಿಎಂಸಿ ನೀರು ಹಂಚಿಕೆಯಾಗುತ್ತದೆ.ಆಂಧ್ರ,ತೆಲಂಗಾಣಕ್ಕೆ 73ಟಿಎಂಸಿ ನೀರು ಹಂಚಿಕೆಯಾಗುತ್ತೆ.ಈಗ ಗೇಟ್ ಬದಲಾವಣೆಗೆ ಬೇಡಿಕೆ ಇದೆ.ಹಿಂದೆ ಒಂದು ಗೇಟ್ ಬಿದ್ದು ಹೋಗಿತ್ತು.ಒಂದು ವಾರದಲ್ಲಿ ನಾವು ಬಗೆಹರಿಸಿದ್ದೆವು.ಆಗ ಹಲವರು ಟೀಕೆ ಮಾಡಿದ್ರು.ಟೀಕೆಗಳು ನಾವು ಸಂತಸದಿಂದ ಸ್ವೀಕರಿಸಿದ್ದೆ.ಶಾರ್ಟ್ ಟೈಮ್ ನಲ್ಲಿ ಗೇಟ್ ರೆಸ್ಟೋರ್ ಮಾಡಿಸಿದ್ದೆವು.ನೀರನ್ನ ತಡೆದು ರೈತರಿಗೆ ನೀರು ಕೊಟ್ಟಿದ್ದೆವು.ಜಿಲ್ಲಾ ಉಸ್ತುವಾರಿ ಸಚಿವರು ಡ್ಯಾಂ ಶೇಖ್ ಅಗ್ತಿದೆ ಅಂದಿದ್ರು.ನಾನು ಬೆಳಗ್ಗೆಯೇ ಅಲ್ಲಿಗೆ ತೆರಳಿದ್ದೆ.ಅಷ್ಟರೊಳಗೆ ಆಂಧ್ರದಿಂದ ಟೀಂ ಬಂದಿತ್ತು.ಅವರು,ನಾವು ಸೇರಿ ಒಂದು ಸಮಿತಿ ರಚಿಸಿದ್ದೆವು.33 ಗೇಟ್ ಬದಲಾಯಿಸಬೇಕು ಅಂತ ಸಲಹೆ ನೀಡಿತ್ತು. ಒಂದೆರಡು ಬೆಳೆ ಬಗ್ಗೆ ನೋಡಬೇಡಿ.ಡ್ಯಾಂಗೆ ಅನಾಹುತ ಆಗುತ್ತೆ ಅಂದಿದ್ದರು.ತುಂಗಭದ್ರಾ ಪ್ರಾಧಿಕಾರ ಕೂಡ ಹೇಳಿತ್ತು.ಸೆಂಟ್ರಲ್ ಕೂಡ ಒಂದು ಟೀಂ ಕಳಿಸಿತ್ತು. ಕನ್ನಯ್ಯ ನಾಯ್ಡು ಅವರು ನೀರು ನಿಲ್ಲಿಸಿದ್ದರು.ಅವರಿಗೆ ರಾಜ್ಯೋತ್ಸವ ಅವಾರ್ಡ್ ಕೊಟ್ಟಿದ್ದೆವು. .೬೩೬ ಅಡಿವರೆಗೆ ನೀರು ನಿಲ್ಲಿಸುತ್ತೇವೆ.೮೩ ಟಿಎಂಸಿ ನೀರು ಸಂಗ್ರಹಕ್ಕೆ ಅವರು ಸಲಹೆ ಕೊಟ್ಟಿದ್ರು ಎಂದರು.
ನಮ್ಮ ರೈತರು ಆತಂಕ ದಲ್ಲಿದ್ದಾರೆ. ರೈತರಿಗೆ ಬೆಳೆ ಬೇಕಾ,ಡ್ಯಾಂ ಬೇಕಾ ನೋಡಬೇಕು. ಹೊಸ ಗೇಟ್ ಅಳವಡಿಕೆಗೆ ಟೆಂಡರ್ ಕರೆದಿದ್ದೇವೆ.ಆಂಧ್ರ ಸಿಎಂ ಜೊತೆ ಮಾತುಕತೆಗೆ ಪ್ರಯತ್ನಿಸಿದ್ದೆ.ನವಿಲೆ ಬಳಿ ಜಲಾಶಯಕ್ಕೆ ಪ್ರಯತ್ನಿಸಿದ್ದೆವು.ಆದರೆ ಆಂಧ್ರ ಸಿಎಂ ನಮಗೆ ಸಿಗಲಿಲ್ಲ.ಅವರು ಬಜೆಟ್ ನಲ್ಲೂ ಹಣ ಇಟ್ಟಿರಲಿಲ್ಲ.ಹಾಗಾಗಿ ನಾವೇ ಹಣ ಕೊಡೋಕೆ ರೆಡಿಯಾದ್ವಿ.ಆದರೆ ಆಂಧ್ರ ಸರ್ಕಾರವೂ ಹಣ ಪಡೆಯುತ್ತಿಲ್ಲ .ನಾವೇ ಹಣ ಕೊಡ್ತೇವೆ ಅಂದ್ರೂ ಅವರು ಪಡೆಯಲಿಲ್ಲ.ನಾವು ಕೆಲಸ ಪ್ರಾರಂಬಕ್ಕೆ ಹೊರಟಿದ್ದೇವೆ. ಆರು ಗೇಟ್ ಗೆ ಮೆಟಿರಿಯಲ್ಸ್ ಬರ್ತಿದೆ.ಅಹ್ಮದಾಬಾದ್ ಸಂಸ್ಥೆಗೆ ಆರ್ಡರ್ ಕೊಡಲಾಗಿದೆ.ಮೂರು ಕಡೆ ಹೊಸ ಗೇಟ್ ಗೆ ಕೆಲಸ ನಡೆದಿದೆ.ಬೇರೆ ಬೇರೆ ಕಡೆ ಗೇಟ್ ರೆಡಿಯಾಗ್ತಿವೆ.ಜಿಂದಾಲ್ ನವರು ಅದಕ್ಕೆ ಕಬ್ಬಿಣ ಕೊಟ್ಟಿದ್ದಾರೆ.ನವಿಲೆ ಜಲಾಶಯ ನಿರ್ಮಾಣ ನಮ್ಮ ಮುಂದಿದೆ ಎಂದರು,
ಇದೇ ವೇಳೆ ತುಂಗಭದ್ರಾ ಡ್ಯಾಂ ಗೇಟ್ ಕಟ್ ಆಗಿದ್ದ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ ನಾನು ಸಾಮಾನ್ಯವಾಗಿ ರಾತ್ರಿ ಮೂರು ಗಂಟೆ ಸಮಯದಲ್ಲಿ ಕರೆ ಬಂದರು ಸ್ವೀಕಾರ ಮಾಡುತ್ತೇನೆ.ನಾನು ಸಾಮಾನ್ಯವಾಗಿ ರಾತ್ರಿ ಎರಡು ಗಂಟೆ ತನಕ ಎಚ್ಚರ ಇರುತ್ತೇನೆ.ಅಂದು ಮಧ್ಯರಾತ್ರಿ ಜಲಾಶಯದ ಗೇಟ್ ಕಟ್ ಆಗಿದ್ದ ವಿಷಯ ತಿಳಿಸಿದರು.ಕೂಡಲೇ ನಾನು ಸಂಬಂಧ ಪಟ್ಟವರಿಗೆ ಮಾತಾಡಿದೆ ಎಂದರು. ತುಂಗಭದ್ರಾ ಅಣೆಕಟ್ಟು ಬಗ್ಗೆ ಡಿ.ಕೆ.ಶಿವಕುಮಾರ್ ಉತ್ತರಿಸಿ 132ಟಿಎಂಸಿ ಸಾಮರ್ಥ್ಯ ಮಾತ್ರ ಡ್ಯಾಂಗಿದೆ. ಬಹಳಷ್ಟು ಹೂಳು ತುಂಬಿದೆ.ಪರ್ಯಾಯ ಜಲಾಶಯಕ್ಕೆ ನಾವು ಪ್ಲಾನ್ ಮಾಡಿದ್ದೆವು. ಸಿವಿಲ್ ವರ್ಕ್ 11ಸಾವಿರ ಕೋಟಿ ಮಾಡಿದ್ದೆವು.ತುಂಗಭದ್ರಾ ಬೋರ್ಡ್ ನಲ್ಲಿ ಸಬ್ಜೆಕ್ಟ್ ಇಟ್ಟಿದ್ದೇವೆ.ಅವರಿಂದ ಯಾವುದೇ ವಿವರಣೆ ಬಂದಿಲ್ಲ.ಇನ್ನು ಗೇಟ್ ಬದಲಾವಣೆಗೆ 250 ಕೋಟಿ ಬೇಕಿದೆ.ರೈತರಿಗೆ ಹಿಂದೆ ಆಗ್ತಿದೆ ನನಗೆ ಗೊತ್ತಿದೆ.ಎರಡನೇ ಬೆಳೆಗೆ ನೀರು ಕೊಡಲು ಆಗ್ತಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಕೂಡ ಸಹಕಾರ ಕೊಡ್ತಿದೆ.ಅವರದೇ ಕೇಂದ್ರ ತಂಡವನ್ನ ಕಳಿಸಿದೆ.ರೈತರ ಹಿತ ಕಾಪಾಡಲು ನಾವು ಬದ್ಧ.ನಮ್ಮ ರಾಜ್ಯದ ಜೊತೆ ಆಂಧ್ರದ ರೈತ ಹಿತ ಕಾಪಾಡಲು ಸಿದ್ಧ.ಅದಕ್ಕೆ ಬೇಕಾದ ಹಣ ನಾವೇ ಕೊಡೋಕೆ ರೆಡಿ.ಅವರು ಹಣ ಕೊಡದಿದ್ರೂ ನಾವೇ ಕೊಡಲು ಸಿದ್ಧ.ಒಟ್ನಲ್ಲಿ ರೈತರ ಹಿತ ಕಾಪಾಡ್ತೇವೆ ಎಂದರು.











