ಮನೆ Latest News ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ವಕ್ಪ್ ಆಸ್ತಿ ವಿಚಾರ ಚರ್ಚೆ; ಆರ್ ಅಶೋಕ್, ಜಮೀರ್ ಅಹ್ಮದ್,...

ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ವಕ್ಪ್ ಆಸ್ತಿ ವಿಚಾರ ಚರ್ಚೆ; ಆರ್ ಅಶೋಕ್, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಶಿವಲಿಂಗೇ ಗೌಡ ಮಧ್ಯೆ ವಾಗ್ಯುದ್ಧ

0

ಬೆಳಗಾವಿ; ವಿಧಾನಸಭೆಯಲ್ಲಿ ಇಂದು ನಿಯಮ 69 ಅಡಿಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ವಕ್ಪ್ ಆಸ್ತಿ ವಿಚಾರ ಪ್ರಸ್ತಾಪ ಮಾಡಿ ಚರ್ಚೆ ಆರಂಭಿಸಿದ್ರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅಂತೂ ಇಂತೂ ಕುಂತಿ ಮಕ್ಕಳಿಗೆ ಅಧಿಕಾರ ಇಲ್ಲ ಎಂಬಂತಾಗಿದೆ ನಮ್ಮ ಸ್ಥಿತಿ. ಫೈಟ್ ಮಾಡಿ ನಾಲ್ಕು ದಿನಗಳ ನಂತರ ನಮ್ಮ ಹಕ್ಕು ಪಡೆದುಕೊಳ್ಳುವಂತಾಗಿದ್ದು ಶೋಚನೀಯ. ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು ಅಂತಾ ಗಾದೆ ಮಾತು ಇದೆ. ಸಭಾಧ್ಯಕ್ಷರೇ ಇಷ್ಟು ದಿನ ನಮಗೆ ಟೆನ್ಷನ್ ಕೊಟ್ಟಿದ್ದೀರಿ, ಇನ್ನಾದರೂ ಮಾತಾಡಲು ಬಿಡಿ.ಕೃಷ್ಣ ಭೈರೇಗೌಡರು ಮೋಸ ಮಾಡುತ್ತಾರೆ ಅಂತಾ ನೀವು ಮಾಡಬೇಡಿ. ಲವ್ ಜಿಹಾದ್ ನೋಡಿದ್ದೇವೆ, ಈಗ ಲ್ಯಾಂಡ್ ಜಿಹಾದ್ ನಡೆಯುತ್ತಿದೆ. ಕಳೆದ ಎರಡು ಮೂರು ತಿಂಗಳಿಂದ ವಕ್ಫ್ ಬೋರ್ಡ್ ಜನರಿಗೆ, ರೈತರಿಗೆ ಭಯ ಬೀಳಿಸಿದೆ ಎಂದರು.

30 ವರ್ಷಕ್ಕೆ ಲೀಸ್ ಗೆ ತೆಗೆದುಕೊಳ್ಳಲು ವಕ್ಪ್ ಬೋರ್ಡ್ ನವರು ಗನ್ ಪಾಯಿಂಟ್ ಇಟ್ಟು ರೈತರನ್ನು ಬೆದರಿಸುತ್ತಿದ್ದಾರೆ. ಯಾಕಾದರೂ ಈ ಸರ್ಕಾರ ಬಂದಿದೆ ಎಂದು ಜನರಿಗೆ ಅನ್ನಿಸಿದೆ ಎಂದು ಆರ್ ಅಶೋಕ್ ಹೇಳಿದ್ರು. ಈ ವೇಳೆ ಮೂರು ಉಪಚುನಾವಣೆಯಲ್ಲಿ ನಾವು ಗೆದ್ದು ಬಂದಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ. ಆಗ ಬಿಜೆಪಿ ಶಾಸಕ ಶರಣು ಸಲಗಾರ್ ಮಹಾರಾಷ್ಟ್ರದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ ಎಂದಿದ್ದಾರೆ.ಅಲ್ಲದೇ ಶರತ್ ಬಚ್ಚೇಗೌಡ ಹೇಳಿಕೆಗೆ ನೀವೇನು ತಾಂಬೂಲ ಕೊಟ್ಟು ಗೆದ್ದು ಬಂದ್ರಾ ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ ಅದಕ್ಕೆ ತಾಂಬೂಲ ಕೊಟ್ಟು ಗೆಲ್ಲುವ ಕಾಲ ಹೋಯಿತು ಎಂದು ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ತಿರುಗೇಟು ಕೊಟ್ಟಿದ್ದಾರೆ.
ಚರ್ಚೆ ಮುಂದುವೆರೆಸಿದ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರ ಆಸ್ತಿಯನ್ನು ವಕ್ಪ್ ಗೆ ಕೊಟ್ಟಿತು ಎಂದಿದ್ದಾರೆ. ಅಶೋಕ್ ಮಾತಿಗೆ ಸಚಿವ ದಿನೇಶ್ ಗುಂಡೂರಾವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತುಷ್ಟೀಕರಣ ಮಾಡುತ್ತಿದೆ ಅಂತಾ ಹೇಳಿದ್ದೀರಿ, ಕಾಂಗ್ರೆಸ್ ಸರ್ಕಾರ ಕೊಟ್ಟಿಲ್ಲ ಎಂದು ದಿನೇಶ್ ಗುಂಡೂರಾವ್ ಆಕ್ರೋಶ ಹೊರ ಹಾಕಿದ್ದಾರೆ.

ಅಶೋಕ್ ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಕೃಷ್ಣ ಬೈರೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಮತ್ತೆ ಗದ್ದಲ ಉಂಟಾಗಿದೆ.ಇದೇ ವೇಳೆ ಚರ್ಚೆಗೆ ಎಂಟ್ರಿ ಕೊಟ್ಟ ಸಚಿವ ಜಮೀರ್ ಅಹಮದ್ ನೀವು ಕಾಯ್ದೆ ಬಗ್ಗೆ ಸಂಸತ್ತಿನಲ್ಲಿ ಮಾತಾಡಿ, ಇಲ್ಲಿ ನೀವು ಮಾಡಿದ ಅಪಪ್ರಚಾರದ‌ ಬಗ್ಗೆ ಮಾತಾಡಿ ಎಂದಿದ್ದಾರೆ.

ಅಶೋಕ್ ಮೈಸೂರಿನಲ್ಲಿ 110 ಮನೆಗಳಿಗೆ ನೋಟೀಸ್ ಕೊಟ್ಟಿದ್ದಾರೆ ಎಂದಾಗ ಬಾಯಿಗೆ ಬಂದಂತೆ ಏನೇನೋ ಮಾತಾಡಿಬಿಡೋದಾ? ದಾಖಲೆ ಕೊಡಿ ಎಂದ ಸಚಿವ ಜಮೀರ್ ಅಹಮದ್ ಗರಂ ಆಗಿದ್ದಾರೆ. 11 ಮನೆಗಳಿಗೆ ನೋಟೀಸ್ ಕೊಡಲು ಆಗುತ್ತಾ? ವಕ್ಪ್ ಕಡೆಯಿಂದ ನೋಟೀಸ್ ಕೊಟ್ಟಿಲ್ಲ ಜಮೀರ್ ಅಹಮದ್ ಎಂದಾಗ,ದಾಖಲೆ ಕೊಡುತ್ತೇನೆ, ಸುಳ್ಳು ಅಂತಾದರೆ ನಾನು ಕಟಕಟೆಯಲ್ಲಿ ನಿಲ್ಲುತ್ತೇನೆ, ಛೀಮಾರಿ ಹಾಕಿ ಎಂದು ವಿಪಕ್ಷ ನಾಯಕ ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ. ಅದಕ್ಕೆ ನಿಮ್ಮ ಸವಾಲು ಸ್ವೀಕರಿಸಿದ್ದೇನೆ. ಮೈಸೂರಿನಲ್ಲಿ ವಕ್ಪ್ ಆಸ್ತಿ ಅಲ್ಲದೇ ಬೇರೆಯವರಿಗೆ ನೋಟೀಸ್ ಕೊಟ್ಟಿದ್ದರೆ, ವಕ್ಪ್ ಬೋರ್ಡ್ ನಿಂದ ಕೊಟ್ಟಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸದನದಲ್ಲಿ ಸಚಿವ ಜಮೀರ್ ಅಹಮದ್ ಪ್ರತಿ ಸವಾಲು ಹಾಕಿದ್ದಾರೆ.
ಈ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವೇಳೆ ಮುಸ್ಲಿಮರು ಇವರಿಗೆ ಮತ ಹಾಕಿರುತ್ತಿದ್ದರೆ ಬಿಜೆಪಿಯವರು ಈ ಚರ್ಚೆಯನ್ನೇ ಮಾಡುತ್ತಿರಲಿಲ್ಲ ಎಂದಿದ್ದಾರೆ. ಆಗ ಸ್ಪೀಕರ್ ನಿಮಗೆ ಕೇಳಲು ಆಗದೇ ಇದ್ದರೆ ಹೊರಗೆ ಹೋಗಿ ಎಂದು ಶಿವಲಿಂಗೇಗೌಡಗೆ ಸ್ಪೀಕರ್ ವಾರ್ನ್ ಮಾಡಿದ್ದಾರೆ.ಅವರ ವೋಟ್ ಬ್ಯಾಂಕ್ ಇದೆ ಅಂತಾನೇ ತಾನೇ ಶಿವಲಿಂಗೇಗೌಡ ಕಾಂಗ್ರೆಸ್ ಗೆ ಹೋಗಿದ್ದು ಎಂದು ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ತಿರುಗೇಟು ಕೊಟ್ಟಿದ್ದಾರೆ.ನೀವು ಹಿಂದೂ ಹಿಂದೂ ಹಿಂದೂ ಅಂತೀರಾ, ದೇಶಕ್ಕೆ ಬೆಂಕಿ ಹಚ್ಚಬೇಡಿ, ದೇಶ ಸುಡಬೇಡಿ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಗರಂ ಆಗಿದ್ದಾರೆ.