ಬೆಂಗಳೂರು; ಶಾಸಕ ಮುನಿರತ್ನ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ ಹಿನ್ನೆಲೆ ಮಾಜಿ ಕಾರ್ಪೋರೇಟರ್ ವೇಲು ನಾಯಕ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.ಶಾಸಕ ಮುನಿರತ್ನ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ ಹಿನ್ನೆಲೆ ವೇಲು ನಾಯಕ್ ಹಾಗೂ ದಲಿತ ಸಂಘಟನೆ ಮುಖಂಡರು ರಕ್ಷಣೆ ಕೋರಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ.
ದೂರು ನೀಡಿದವರು ಹಾಗೂ ನಮ್ಮ ಮೇಲೆ ಜೀವ ಬೆದರಿಕೆ ಬರ್ತಿವೆ.ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ತೊಂದ್ರೆ ಕೊಡ್ತಿದ್ದಾರೆ. ಮುನಿರತ್ನ ಆಪ್ತ ಹೆಬ್ಬುಗೂಡಿ ಠಾಣೆ ಇನ್ಸ್ಪೆಕ್ಟರ್ ಐಎನ್ ರೆಡ್ಡಿ ಸಸ್ಪೆಂಡ್ ಮಾಡಬೇಕು ಎಂದು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಭೇಟಿ ಬಳಿಕ ಮಾತನಾಡಿದ ಮಾಜಿ ಕಾರ್ಪೋರೇಟರ್ ವೇಲು ನಾಯಕ್ ಸಾಕ್ಷಿ ನಾಶ ಮಾಡೋದಕ್ಕೆ ಇನ್ಸ್ಪೆಕ್ಟರ್ ಐ ಎನ್ ರೆಡ್ಡಿ ಮುಂದಾಗ್ತಿದ್ದಾರೆ.ಆತನ ಬಗ್ಗೆ ಎಲ್ಲಾ ಕಡೆ ಪ್ರಚಾರ ಆಗಿದೆ.ಮುನಿರತ್ನ ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ.ವಿರೋಧಿಗಳ ಫೋನ್ ಟ್ಯಾಪ್ ರೀತಿಯ ಸಹಾಯ ಮಾಡಿದ್ದಾನೆ.ಈಗ ಮುನಿರತ್ನ ವಿರುದ್ದ ಇರುವ ಸಾಕ್ಷಿ ನಾಶ ಮಾಡುವ ಪ್ರಯತ್ನ ಆಗುವ ಸಾಧ್ಯತೆ ಇದೆ.ನಿನ್ನೆ ಮುನಿರತ್ನ ಆಪ್ತೆ ಸುನಂದಮ್ಮ ಅನ್ನೋರು ಸಾಕ್ಷಿ ಹೇಳೋರ ಮನೆಗೆ ಹೋಗಿ ಬೆದರಿಕೆ ಹಾಕಿದ್ದಾರೆ.ಬೆದರಿಕೆ ಹಾಕುವ ದೃಶ್ಯವನ್ನ ಸಿಸಿ ಕ್ಯಾಮರಾ ಸಹಿತ ದೂರು ಕೊಟ್ಟಿದ್ದೇವೆ.ಅವರ ಬೆಂಬಲಿಗರು ಸಾಕ್ಷಿ ನಾಶಕ್ಕೆ ಮುಂದಾಗ್ತಿದ್ದಾರೆ ಎಂದಿದ್ದಾರೆ.
ಅದರಲ್ಲಿ ಪ್ರಮುಖವಾಗಿ ಐ ಎನ್ ರೆಡ್ಡಿಯವರು ಅವರು ಸಾಕ್ಷಿ ನಾಶ ಮಾಡೋದರಲ್ಲಿ ತೊಡಗಿಸಿಕೊಳ್ತಿದ್ದಾರೆ.ಹೀಗಾಗಿ ಅವರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು ಹಾಗೂ ಮುನಿರತ್ನ ತನಿಖೆಯನ್ನು ತೀವ್ರ ಗೊಳಿಸಬೇಕು ಎಂದು ಸಿಎಂ ಅವರನ್ನ ಒತ್ತಾಯ ಮಾಡುತ್ತೇವೆ.ನಮಗೆ ರಕ್ಷಣೆ ಕೊಡಿ ಎಂದಿದ್ದಾರೆ. ಇನ್ನು ಎಂ ಸಿದ್ದರಾಮಯ್ಯಗೆ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಮನವಿ ಸಲ್ಲಿಸಿದ ಸಲ್ಲಿಸಿದ್ದಾರೆ. ಮುನಿರತ್ನ ಕೇಸ್ ನಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಮಾಜಿ ಕಾರ್ಪೋರೇಟರ್ ವೇಲುನಾಯ್ಕರ್ ಪೊಲೀಸರಿಗೆ ಹೇಳಿ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ.ಸುನಂದಮ್ಮ ಅನ್ನೋರಿಗೆ ಬೆದರಿಕೆ ಹಾಕಿದ್ದಾರೆ.ಹಾಗೇ ಬೆಂಬಲಿಗರು ಕೂಡ ಹೆದರಿಸುತ್ತಿದ್ದಾರೆ.ಐ ಎನ್ ರೆಡ್ಡಿ ಈಗಲೂ ಪೊಲೀಸ್ ಕರ್ತವ್ಯದಲ್ಲಿದ್ದಾರೆ.ಅಂತವರಿಗೆ ಒಂದು ಗಂಟೆ ಸಿಕ್ಕಿದ್ರೂ ಸಾಕು ಒಂದೇ ಗಂಟೆಯಲ್ಲಿ ಸಾಕ್ಷ್ಯ ನಾಶ ಮಾಡ್ತಾರೆ.ಆರ್ ಅಶೋಕ್ ಗೆ ಬ್ಲೇಡ್ ಚುಚ್ಚಿ ಹೆಚ್ ಐವಿ ಇಂಜೆಕ್ಟ್ ಮಾಡಲು ಐಡಿಯಾ ಕೊಟ್ಟವರೇ ಐ ಎನ್ ರೆಡ್ಡಿ. ಬೇರೆ ಯಾವ ಇನ್ ಪೆಕ್ಟರ್ ಆದ್ರೂ ಕೂಡ ಸಸ್ಪೆಂಡ್ ಆಗ್ತಿದ್ರು.ಆದ್ರೆ ಇವರು ಪ್ರಭಾವಿ ಇದ್ದಾರೆ.ಅದಕ್ಕೆ ಸಿಎಂಗೆ ,ಪೊಲೀಸ್ ಕಮೀಷನರ್ ಗೂ ದೂರು ಕೊಟ್ಟಿದ್ದೇವೆ.ಕ್ತ ಕ್ರಮ ತಗೆದುಕೊಳ್ಳೊದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ
ಎಂದಿದ್ದಾರೆ.