ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇಂದು ಮಗ ವಿನೀಶ್, ಪತ್ನಿ ವಿಜಯಲಕ್ಷ್ಮೀ ಹಾಗೂ ವಿಜಯಲಕ್ಷ್ಮೀ ಅವರ ತಂಗಿಯ ಗಂಡ ಸುಶಾಂತ್ ಭೇಟಿಯಾಗಿದ್ದಾರೆ.
ಇನ್ನು ದಸರಾ ರಜೆ ಹಿನ್ನೆಲೆ ಈ ಬಾರಿ ತಾಯಿಯೊಂದಿಗೆ ಅಪ್ಪನನ್ನು ಭೇಟಿಯಾಗಲು ವಿನೀಶ್ ಕೂಡ ಬಂದಿದ್ದಾನೆ. ಮಗ ಹಾಗೂ ಪತ್ನಿಯನ್ನು ನೋಡಲು ತಮ್ಮ ಸೆಲ್ ನಿಂದ ಸಂದರ್ಶಕರ ಕೋಣೆಗೆ ಬರುವಾಗ ನಟ ದರ್ಶನ್ ಖುಷಿಯಿಂದಲೇ ಬಂದಿದ್ದಾರೆ. ಇನ್ನು ಮಗನನ್ನು ನೋಡುತ್ತಲೇ ದರ್ಶನ್ ಭಾವುಕರಾಗಿದ್ದಾರೆ ಎನ್ನಲಾಗಿದೆ. ಮಗ ಅಪ್ಪನನ್ನು ನೋಡುತ್ತಿದ್ದಂತೆ ಕಣ್ಣೀರು ಹಾಕಿದ್ದಾನೆ.
ವಿನೀಶ್ ತಂದೆಯನ್ನು ನೋಡುತ್ತಲೇ ಭಾವುಕನಾಗಿ ಅಪ್ಪ ನಾನು ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದ್ದಾನಂತೆ. ಈ ವೇಳೆ ಧೈರ್ಯವಾಗಿರು ನಾನು ಆದಷ್ಟು ಬೇಗ ಹೊರಗಡೆ ಬರುತ್ತೇನೆ ಎಂದು ದರ್ಶನ್ ಮಗನಿಗೆ ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಮಗ ಕಣ್ಣೀರು ಹಾಕುತ್ತಲೇ ದರ್ಶನ್ ಹಾಗೂ ವಿಜಯಲಕ್ಷ್ಮೀ ಇಬ್ಬರೂ ಕೂಡ ಭಾವುಕರಾಗಿದ್ದಾರೆ ಎನ್ನಲಾಗಿದೆ. ಸುಮಾರು 45 ನಿಮಿಷಗಳ ಕಾಲ ಪತ್ನಿ ಹಾಗೂ ಮಗನ ಜೊತೆ ಮಾತನಾಡಿ ದರ್ಶನ್ ತಮ್ಮ ಸೆಲ್ ಗೆ ತೆರಳಿದ್ದಾರೆ. ಅಪ್ಪನನ್ನು ಭೇಟಿಯಾದ ಬಳಿಕ ವಿನೀಶ್ ಕಣ್ಣೀರು ಹಾಕುತ್ತಲೇ ವಾಪಾಸ್ಸಾಗಿದ್ದಾನೆ ಎನ್ನಲಾಗಿದೆ.
ಕೊನೆಗೂ ಸಿಕ್ತು ಷ್ಯೂರಿಟಿ; ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಜೈಲಿನಿಂದ ರಿಲೀಸ್
ತುಮಕೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದಿಗೆ ಮುಂದೂಡಿಕೆಯಾಗಿದೆ. ಇದರ ನಡುವೆ ಪ್ರಕರಣದ ಮೂವರು ಆರೋಪಿಗಳಿಗೆ ಸೆಪ್ಟಂಬರ್ 23 ರಂದು ಜಾಮೀನು ಮಂಜೂರಾಗಿತ್ತು. ಪ್ರಕರಣದ ಎ15, ಎ16, ಎ17 ಆರೋಪಿಗೆ ಜಾಮೀನು ಮಂಜೂರಾಗಿತ್ತು. ಆದರೆ ಜಾಮೀನು ಮಂಜೂರಾದ್ರೂ ಮೂವರು ಆರೋಪಿಗಳು ಜೈಲಿನಲ್ಲೇ ಇರುವಂತಾಗಿತ್ತು
ಪ್ರಕರಣದ ಎ15 ನಿಖಿಲ್ ನಾಯಕ್, ಎ 17 ಕಾರ್ತಿಕ್ ಗೆ 57ನೇ ಸಿಸಿಹೆಚ್ ಕೋರ್ಟ್ ಮೊನ್ನೆ ಬೇಲ್ ಮಂಜೂರು ಮಾಡಿತ್ತು. ಎ 16 ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ನೀಡುವ ವೇಳೆ ಇವರಿಗೆ ಕೋರ್ಟ್ ಷ್ಯೂರಿಟಿ ಕೇಳಿದೆ. ಆದರೆ ಷ್ಯೂರಿಟಿ ನೀಡಲು ಸಾಧ್ಯವಾಗದೇ ಇರೋದರಿಂದ ಆರೋಪಿಗಳು ಕಳೆದ 10 ದಿನಗಳಿಂದ ಜೈಲಿನಲ್ಲೇ ಇದ್ದರು. ಆದರೆ ಮೊನ್ನೆ ಅಂದರೆ ಅಕ್ಟೋಬರ್ 1 ರಂದು ಆರೋಪಿಗಳಿಗೆ ಷ್ಯೂರಿಟಿ ಸಿಕ್ಕಿದೆ. 10 ದಿನಗಳಿಂದ ಆರೋಪಿಗಳ ಕುಟುಂಬದವರು ಷ್ಯೂರಿಟಿಗಾಗಿ ಪರದಾಡುತ್ತಿದ್ದರು.ಕೊನೆಗೂ ಮೊನ್ನೆ ಷ್ಯೂರಿಟಿ ಸಿಕ್ಕಿದೆ. ಷ್ಯೂರಿಟಿ ಸಿಕ್ಕ ಬೆನ್ನಲ್ಲೇ ಕೋರ್ಟ್ ಜಾಮೀನು ಪತ್ರವನ್ನು ಮೇಲ್ ಮೂಲಕ ಜೈಲಾಧಿಕಾರಿಗಳಿಗೆ ರವಾನಿಸಿದ್ದು ಅವರು ಎಲ್ಲಾ ಕಾನೂನೂ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆರೋಪಿಗಳನ್ನು ರಿಲೀಸ್ ಮಾಡಿದ್ದಾರೆ.
ಇನ್ನು ಜೈಲಿನಿಂದ ಹೊರ ಬರುತ್ತಿದ್ದಂತೆ ಮಾಧ್ಯಮದವರ ಜೊತೆ ಮಾತನಾಡಲು ಆರೋಪಿಗಳು ನಿರಾಕರಿಸಿದ್ದಾರೆ. ನಾವು ಕೇಸ್ ಬಗ್ಗೆ ಏನು ಹೇಳಲ್ಲ. ಏನು ಹೇಳ ಬೇಕೋ ಅದನ್ನು ತನಿಖೆ ವೇಳೆ ಹೇಳಿದ್ದೇವೆ ಅಂತಾ ಆರೋಪಿಗಳು ತಿಳಿಸಿದ್ದಾರೆ. ಅಲ್ಲದೇ ಜೈಲಿನಲ್ಲಿ ನಮಗೆ ಯಾವುದೇ ತೊಂದರೆ ಆಗಿಲ್ಲ. ಆರಾಮವಾಗಿ ಇದ್ದೆವು ಎಂದು ತಿಳಿಸಿದ್ದಾರೆ.