ಮನೆ Latest News ಸಿಎಂ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ವೇಣುಗೋಪಾಲ್ ಅಣತಿಯಂತೆ ಕುಣಿಯುತ್ತಿದ್ದಾರೆ: ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ...

ಸಿಎಂ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ವೇಣುಗೋಪಾಲ್ ಅಣತಿಯಂತೆ ಕುಣಿಯುತ್ತಿದ್ದಾರೆ: ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ

0

 

ಬೆಳಗಾವಿ; ಸಿಎಂ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ  ವೇಣುಗೋಪಾಲ್ ಅಣತಿಯಂತೆ ಕುಣಿಯುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.

 

ಬೆಂಗಳೂರು ಕೋಗಿಲು ಬಡಾವಣೆಯಲ್ಲಿ ಮೊದಲು ಕೇರಳದ ಅಕ್ರಮ ವಲಸಿಗರು ನೆಲೆಸಿದ್ದರು. ಹಿಂದೆ ಮುಂದೆ ನೋಡದೇ ಅಕ್ರಮ ವಲಸಿಗರ ಮನೆಗಳನ್ನ ಈ ಸರ್ಕಾರ ನೆಲೆಸಮ ಮಾಡಿತು. ತದನಂತರ ‌ಈ ಪ್ರಕರಣ ಸಂಬಂಧ ಕೇರಳ ಸಿಎಂ ಹೇಳಿಕೆ ನೀಡಿದರು.ಅದಾದ ಬಳಿಕ ಎಐಸಿಸಿ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ ಸಿಎಂಗೆ ಸಿಎಂ, ಡಿಸಿಎಂಗೆ ಬೆದರಿಕೆ ಹಾಕುವ ಕೆಲಸ ಮಾಡಿದರು.ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಸಿಎಂ ಖುರ್ಚಿ ಪಡೆಯಲು ಡಿಕೆಶಿ ಪ್ರಯತ್ನ ಮಾಡ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ವೇಣುಗೋಪಾಲ ಬೆದರಿಕೆ ಬೆನ್ನಲ್ಲೇ ಮೂರು ದಿನಗಳ ನಂತರ ಸಿಎಂ, ಡಿಸಿಎಂ ಊಲ್ಟಾ ಹೊಡೆದರು.ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯಲ್ಲಿ ಮನೆ ಕೊಡುವುದಾಗಿ ಸಿಎಂ ಘೋಷಣೆ ಮಾಡಿದರು.ರಾಜ್ಯದ ಹಿತಾಸಕ್ತಿಗೆ ಪೂರಕವಾಗಿ ಸಿದ್ದರಾಮಯ್ಯರೇ ರಾಜ್ಯದ ನಿರ್ಧಾರ ತೆಗೆದುಕೊಳ್ಳಬೇಕು.

ಯಾರದೋ ಮಾತು ಕೇಳಿ ಮನಸೋ ಇಚ್ಛೆ ತೀರ್ಮಾನ ಮಾಡಲು ಸಾಧ್ಯವೇ? ಬೈಯಪನಹಳ್ಳಿ ನಿರ್ಮಿಸಿರುವ ಮನೆಗಳು ರಾಜ್ಯದ ಬಡವರು, ಕನ್ನಡಿಗರಿಗೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ವಲಸಿಗರಿಗೆ ಮನೆ ಕೊಡಲು ಹೊರಟಿದ್ದಾರೆ.ಕೇರಳದ ಅಕ್ರಮ ವಲಸಿಗರಿಗೆ ಅಕ್ರಮವಾಗಿ ಮನೆ ಕೊಡುವ ನಿರ್ಧಾರವೇ ಅಕ್ರಮ ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ತೆಗೆದುಕೊಂಡಿರುವ ಈ ನಿರ್ಧಾರ ಕಾನೂನು ವಿರುದ್ಧ ಕ್ರಮ.ರಾಜ್ಯದ ಜನರ ತೆರಿಗೆ ಹಣದಿಂದ ಕಟ್ಟಿದ ಮನೆಗಳು ಇವು. ಸಿದ್ದರಾಮಯ್ಯನವರೇ ತಮ್ಮ ಮನಸ್ಸಿಗೆ ಬಂದಂತೆ ನಿರ್ಧಾರ ಮಾಡ್ತಿರಾ? ವಯಾನಾಡು 100 ಮನೆ ಕಟ್ಟುತ್ತೇನೆ ಅಂದ್ರಿ, ಆನೆ ದಾಳಿಗೆ ಪರಿಹಾರ ಕೊಟ್ರಿ.ರಾಜ್ಯದಲ್ಲಿ ಅತಿವೃಷ್ಠಿಯಿಂದ ಹಾನಿ ಆಗಿದೆ, ರೈತರು ಪರಿಹಾರ ನಿರೀಕ್ಷೆಯಲ್ಲಿದ್ದರು.ಪರಿಹಾರ ಘೋಷಣೆ ಮಾಡದೇ ಕೇಂದ್ರದತ್ತ ಸಿಎಂ ಬೊಟ್ಟು ಮಾಡಿದರು. ಪರಿಹಾರ ಕೊಡಿ ಅಂದ್ರೆ ಪ್ರಧಾನಿಗೆ ಪತ್ರ ಬರೆದಿದ್ದೇ ಸಿದ್ದರಾಮಯ್ಯನವರ ಸಾಧನೆ. ಬಡವರು, ರೈತರ, ದೀನದಲಿತರ ಪರಿಹಾರ ಕೊಡುವ ವಿಚಾರದಲ್ಲಿ ಕೇಂದ್ರದತ್ತ ಬೊಟ್ಟು ‌ಮಾಡ್ತಿರಿ. ತನ್ನ ಕುರ್ಚಿಯನ್ನು ‌ಉಳಿಸಲು ಸಿದ್ದರಾಮಯ್ಯ, ಸಿಎಂ ಸ್ಥಾನ ಪಡೆಯಲು ಡಿಕೆಶಿ ರಾಜ್ಯಕ್ಕೆ ಅನ್ಯಾಯ ಮಾಡ್ತಿದ್ದಾರೆ.ಈ ಮನೆಗಳು ಕನ್ನಡಿಗರ ಪಾಲಾಗಬೇಕಿತ್ತು, ಬದಲಾಗಿ ವಲಸಿಗರಿಗೆ ಮನೆ ಕೊಟ್ಟು ಸಿಎಂ ಅನ್ಯಾಯ ಮಾಡ್ತಿದ್ದಾರೆ.2013-18 ಬಜೆಟ್‌ನಲ್ಲಿ 14.5 ಮನೆ ನಿರ್ಮಿಸಿ ಬಡವರಿಗೆ ‌ಸೂರು ಎಂದು ಘೋಷಣೆ ಮಾಡಿದ್ದು ಸುಳ್ಳು. ಈ ಸರ್ಕಾರ ಬಂದು ಎರಡೂವರೆ ವರ್ಷ ಆಗಿದೆ, ಸ್ಮಂ ಬೋರ್ಡ್‌ನಲ್ಲಿ ಮನೆ ಕಟ್ಟಿದ್ದಷ್ಟೇ ಸಾಧನೆ.ಬಡವರಿಗೆ ಎಷ್ಟು ಮನೆ ಕಟ್ಟಿತ್ತಿದ್ದಿರಿ ಉತ್ತರ ಕೊಡಿ ಎಂದು ಆಗ್ರಹಿಸಿದ್ದಾರೆ.

ಕನ್ನಡಿಗರು, ಬಡವರಿಗೆ ಮೊದಲು ಮನೆ ಕೊಡಿ, ಬಳಿಕ ಅಕ್ಕಪಕ್ಕದ ‌ರಾಜ್ಯದ ಬಡವರ ವಿಚಾರ ಮಾಡಿ. ಸಿದ್ದರಾಮಯ್ಯನವರು ‌ಕನ್ನಡ ನಾಡಿನ ಮುಖ್ಯಮಂತ್ರಿಗಳು. ನಮ್ಮ ರಾಜ್ಯದ ಬಡವರ ಬಗ್ಗೆ ನಿಮಗೆ ಕಾಳಜಿ ಇಲ್ಲ ಅಂದ್ರೆ ಹೇಗೆ? ಸಿದ್ದರಾಮಯ್ಯ ಕನ್ನಡಿಗರ ಹೊಟ್ಟೆ ಮೇಲೆ ಹೊಡೆಯುತ್ತಿರುವುದು ದುರ್ದೈವ ಎಂದಿದ್ದಾರೆ.