ಬೆಂಗಳೂರು : ಅನ್ವರ್ ಮಾಣಿಪ್ಪಾಡಿ ಹೇಳಿಕೆ ವಿಚಾರದ ಬಗ್ಗೆ ನಾಳೆ ಸದನದಲ್ಲಿ ಈ ಬಗ್ಗೆ ಸಿಎಂ ಪ್ರಸ್ತಾಪ ಮಾಡಲಿದ್ದಾರೆ ಎಂಬ ಪರಮೇಶ್ವರ್ ಹೇಳಿಕೆಗೆ ಬಿ ವೈ ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ.
ಚರ್ಚೆ ಮಾಡಲಿ, ನಾವೂ ತಯಾರಿದ್ದೇವೆ ಎಂದಿದ್ದಾರೆ. ಲಜ್ಜೆಗೆಟ್ಟ ಸರ್ಕಾರ ಇದೆ. ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಗಮನಿಸಿದ್ದೇನೆ.ಬುದ್ದಿ ಭ್ರಮಣೆ ಆದವರಂತೆ ವರ್ತಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಅನ್ವರ್ ಮಾಣಿಪ್ಪಾಡಿ ವರದಿ ನೀಡಿದ್ದಾರೆ.
ವಕ್ಫ್ ಹಗರಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಅವ್ಯವಹಾರ ಮಾಡಿರುವ ಬಗ್ಗೆ ಉಲ್ಲೇಖ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗನಾಗಿ ನಾನ್ಯಾಕೆ ಅನ್ವರ್ ಮಾಣಿಪ್ಪಾಡಿ ಮನೆಗೆ ಹೋಗಬೇಕು? 150 ಕೋಟಿ ಆಫರ್ ಯಾಕೆ ಮಾಡಬೇಕು?. ಅದು ಕಾಂಗ್ರೆಸ್ ಮುಖಂಡರನ್ನು ಬಚಾವ್ ಮಾಡೋದಕ್ಕೆ? ಇದೇನಾದ್ರೂ ತರ್ಕ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನು ಮುಂದಿಟ್ಟುಕೊಂಡು ಸದನದ ಸಮಯವನ್ನ ವರ್ಥ ಮಾಡ್ತಾರೆ ಅಂದ್ರೆ ಇದು ಮೂರ್ಖತನದ ಪರಮಾವಧಿ. ಹಗರಣದ ಸುಳಿಯಲ್ಲಿ ಸಿಲುಕಿಕೊಂಡಿರುವ ಸರ್ಕಾರ
ಸದನದ ಸಮಯ ವ್ಯರ್ಥ ಮಾಡ್ತಿದೆ ಉಕ್ಕಿ ಎಂದಿದ್ದಾರೆ.
ಗೃಹಸಚಿವ ಪರಮೇಶ್ವರ್ ವೀಡಿಯೋ ದಾಖಲೆ ಇದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅನ್ವರ್ ಮಾಣಿಪ್ಪಾಡಿ ಹಿಂದೆ ಏನು ಹೇಳಿದ್ದಾರೆ, ಈಗ ಏನು ಹೇಳಿದ್ದಾರೆ ಗೊತ್ತಿಲ್ಲ.ಬಿಜೆಪಿ ಸರ್ಕಾರ ಇದ್ದಾಗ, ಕಾಂಗ್ರೆಸ್ ಪಕ್ಷದ ಮುಖಂಡರನ್ನ ಕಾಪಾಡಿ ಅಂತ ಅವರ ಮನೆಗೆ ಯಾಕೆ ಹೋಗಬೇಕು? ಏನಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳಿದ್ದಾರಾ?. ಪ್ರಿಯಾಂಕ್ ಖರ್ಗೆ ಅವರು ಮಾತಾಡಿರೋದು ಕೂಡ ಅರ್ಥ ಹೀನ.ಅದನ್ನು ಬಂಡವಾಳವಾಗಿಟ್ಟುಕೊಂಡು ಸಿಎಂ ಮಾತಾಡ್ತೀನಿ ಅಂದ್ರೆ ಏನು ಹೇಳಬೇಕು?ಮುಖ್ಯಮಂತ್ರಿಗಳು ವಿಚಲಿತರಾಗಿದ್ದಾರೆ.ಇದಕ್ಕೆ ಸದನದಲ್ಲೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.
ಕಪೋಲ ಕಲ್ಪಿತ ಕಥೆ ಸೃಷ್ಟಿ ಮಾಡಿಕೊಂಡು, ವಿಪಕ್ಷದವರನ್ನು, ವಿಜಯೇಂದ್ರನನ್ನು ಹಣಿಯಬಹುದು ಅಂದುಕೊಂಡಿದ್ದಾರೆ. ಸದನದಲ್ಲಿ ಅವರ ಸವಾಲಿಗೆ ನಾವೂ ತೊಡೆ ತಟ್ಟುತ್ತೇವೆ.
ಅವರ ಸವಾಲಿಗೆ, ನಾವೂ ಉತ್ತರ ಕೊಡ್ತೇವೆ ಎಂದಿದ್ದಾರೆ.
ಅನ್ವರ್ ಮಾಣಿಪ್ಪಾಡಿ ಯಾವ ರೀತಿ ಮಾತಾಡಿದ್ದಾರೆ ಅಂತ ವೀಡಿಯೋ ಫೂಟೇಜ್ ಇದೆ: ಗೃಹಸಚಿವ ಪರಮೇಶ್ವರ್ ಹೇಳಿಕೆ
ಬೆಂಗಳೂರು: ಅನ್ವರ್ ಮಾಣಿಪ್ಪಾಡಿ ಕಾಂಗ್ರೆಸ್ ನವರು ಹಣ ಕೇಳಿದ್ರು ಅನ್ನೋ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಅನ್ವರ್ ಮಾಣಿಪ್ಪಾಡಿ ಯಾವ ರೀತಿ ಮಾತಾಡಿದ್ದಾರೆ ಅಂತ ವೀಡಿಯೋ ಫೂಟೇಜ್ ಇದೆ. ಈಗ ಅವರು ಮಾತು ಬದಲಿಸೊರೋದು ಯಾವ ರೀತಿ ಸ್ವೀಕಾರ ಮಾಡಬೇಕು ಗೊತ್ತಿಲ್ಲ.ವಿಜಯೇಂದ್ರ ಅವರ ಮನೆಗೆ ಹೋಗಿದ್ದರ ಬಗ್ಗೆ ಅವರೇ ಹೇಳಿದ್ರು.
ಈಗ ಆ ರೀತಿ ಅಲ್ಲ, ಕಾಂಗ್ರೆಸ್ ಅವರು ಅನ್ನೋದು, ಅವರ ಮೇಲೆ ನಂಬಿಕೆ ಹೋಗುತ್ತೆ. ನಾಳೆ ಸದನದಲ್ಲಿ ಈ ಬಗ್ಗೆ ಸಿಎಂ ಪ್ರಸ್ತಾಪ ಮಾಡಲಿದ್ದಾರೆ ಎಂದಿದ್ದಾರೆ.
ಅನ್ವರ್ ಮಾಣಿಪ್ಪಾಡಿ ಹೇಳಿಕೆ ವಿಚಾರ
ನಾಳೆ ಸದನದಲ್ಲಿ ಈ ಬಗ್ಗೆ ಸಿಎಂ ಪ್ರಸ್ತಾಪ ಮಾಡಲಿದ್ದಾರೆ ಎಂದಿದ್ದಾರೆ.