ಮನೆ Latest News ಬಿಜೆಪಿ ನೈತಿಕ ಅಧಿಪತನಕ್ಕೆ ವಿಜಯೇಂದ್ರ ಕಾರಣ; ವಿಜಯಪುರದಲ್ಲಿ ಯತ್ನಾಳ್ ಆಕ್ರೋಶ

ಬಿಜೆಪಿ ನೈತಿಕ ಅಧಿಪತನಕ್ಕೆ ವಿಜಯೇಂದ್ರ ಕಾರಣ; ವಿಜಯಪುರದಲ್ಲಿ ಯತ್ನಾಳ್ ಆಕ್ರೋಶ

0

 

ಬೆಂಗಳೂರು: ಬಿಜೆಪಿ ನೈತಿಕ ಅಧಿಪತನಕ್ಕೆ ವಿಜಯೇಂದ್ರ ಕಾರಣ ಎಂದು ವಿಜಯಪುರದಲ್ಲಿ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.

ಬಿಜೆಪಿ ನೈತಿಕ ಅಧಿಪತನಕ್ಕೆ ವಿಜಯೇಂದ್ರ ಕಾರಣ ಅನ್ನೋದನ್ನು ಹೈಕಮಾಂಡ್ ತಿಳಿದುಕೊಳ್ಳಬೇಕು.ಜನರ ಅಭಿಪ್ರಾಯವನ್ನು ನಾವು ಸರ್ವೇ ಮಾಡಿ ನಿರ್ಧಾರ ಮಾಡುತ್ತೇವೆ. ಅಭಿವೃದ್ಧಿ ಪರ, ಭ್ರಷ್ಟಾಚಾರ ರಹಿತ, ಹಿಂದೂ ಪರ ಪಕ್ಷ ಬೇಕಾ ಎಂದು ಅಭಿಪ್ರಾಯ ಸಂಗ್ರಹಿಸಿಲಿದ್ದೇವೆ ಎಂದು ಯತ್ನಾಳ್ ಹೇಳಿದ್ದಾರೆ.

ಹಣ ಕೊಡೊದಾಗಿ ವಿದೇಶಗಳಿಂದ ಕಾಲ್ ಬರುತ್ತಿವೆ.ಬೆಂಗಳೂರಲ್ಲಿ ಹೊಸ ಪಕ್ಷ ಕಟ್ಟಲು 11 ಲಕ್ಷ ಹಣ ದೇಣಿಗೆ ಕೊಡುತ್ತೇವೆಂದು ಓರ್ವ ವ್ಯಕ್ತಿ ಹೇಳಿದ್ದಾರೆ.ಜನರು ದೇಣಿಗೆ ನೀಡಲು ತಯಾರಾಗಿದ್ದಾರೆ.ಮತ್ತೆ ಯಡಿಯೂರಪ್ಪ ಎಂದರೆ ಜನರ ನಿರ್ಧಾರದಂತೆ ನಾವು ಹೋಗಬೇಕಾಗುತ್ತದೆ.ಜನರು ಏನ್ ಹೇಳುತ್ತಾರೆ ಅದನ್ನ ನಾನು ಕೇಳುತ್ತೇನೆ.  ಬಿಜೆಪಿಯಲ್ಲಿ ಭವಿಷ್ಯ ಕಾಣುತ್ತಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

ನಮ್ಮನ್ನ ಮೂಲೆ ಗುಂಪು ಮಾಡುವ ಕೆಲಸ ಯಡಿಯೂರಪ್ಪ ಕುಟುಂಬ ಮಾಡುತ್ತಿದೆ. ಇದೇ ಮುಂದುವರೆದರೆ ವಿಜಯದಶಮಿಗೆ ಹೊಸ ಪಕ್ಷ ಕಟ್ಟುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ. ಸಿಡಿ ಹಿಂದೆ ಮಹಾನಾಯಕ, ರಾಜ್ಯದಲ್ಲಿ ಎರಡು ಸಿಡಿ ಪ್ಯಾಕ್ಟರಿ ಇವೆ. 48 ಜನರ ಸಿಡಿ ಇವೆ, ಹೈಕೋರ್ಟ್ ಜಡ್ಜ್‌ಗಳ ಸಿಡಿ ಸಹ ಇವೆ. ಇದನ್ನ ಕಾಂಗ್ರೆಸ್ ತನಿಖೆ ಮಾಡುತ್ತಿಲ್ಲ. ತನಿಖೆ ನಡೆಸಲು ಏನು ರೋಗ ಎಂದು ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.ಎಸ್ ಎಸ್ಟಿ ಮುಖಂಡರನ್ನ ಬಲಿ ಕೊಡಲಾಗುತ್ತಿದೆ.ರಮೇಶ ಜಾರಕಿಹೊಳಿ, ರಾಜಣ್ಣ ಹನಿ ಟ್ರ್ಯಾಪ್ ವಿಚಾರದಲ್ಲಿ ಬಿಜೆಪಿ‌ ಕಾಂಗ್ರೆಸ್ ಮಹಾ ನಾಯಕರ ಹೆಸರಿದೆ. ಬಿಜೆಪಿ ಕಾಂಗ್ರೆಸ್ ನಾಯಕರು ಎಂದು ಪರೋಕ್ಷವಾಗಿ ಡಿಕೆಶಿ ವಿಜಯೇಂದ್ರ ವಿರುದ್ದ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ವಿರುದ್ಧವು ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ. ಸಿಡಿ ವಿಚಾರ ಸಿಬಿಐ ತನಿಖೆಗೆ ನೀಡಬೇಕು.ರಾಜಕಾರಣಿಗಳನ್ನ ನೈತಿಕ, ಮಾನಸಿಕವಾಗಿ ವಿಚಲಿತರನ್ನಾಗಿ ಮಾಡಲಾಗುತ್ತಿದೆ. 48 ಸಿಡಿ ಇವೆ ಎಂದಾಗ ಎಲ್ಲರಿಗೂ ಭಯವಾಗುತ್ತಿದೆ, ನಂದಾ ನಿಂದಾ ಎಂದೂ ಭಯ ಪಡುತ್ತಿದ್ದಾರೆ. ಅವರೂ ಸಹ ಸರಿಯಾಗಿರಬೇಕೆಂದು ಯತ್ನಾಳ್ ಹೇಳಿದ್ದಾರೆ. ನಾನು ಬಿಜೆಪಿ ವಿರುದ್ಧ ಮಾತನಾಡಿಲ್ಲ. ಮೋದಿ, ಅಮಿತ್ ಶಾ ಬಗ್ಗೆ ಮಾತನಾಡಿಲ್ಲ.ನಾನು ಕಾಂಗ್ರೆಸ್ ನವರ ಸಭೆಗೆ ಹೋಗಿಲ್ಲ, ಔತನಕೂಟಕ್ಕೆ ಹೋಗಿಲ್ಲ, ಅವರ ಜೊತೆಗೆ ಕಾಣಿಸಿಕೊಂಡಿಲ್ಲ. ನಾನು ಪಕ್ಷ ವಿರೋಧಿ ಅಲ್ಲ, ಯಡಿಯೂರಪ್ಪ ವಿರೋಧಿ.ಯಡಿಯೂರಪ್ಪ ಉ.ಕರ್ನಾಟಕ, ನೀರಾವರಿ, ನನ್ನ ಕ್ಷೇತ್ರಕ್ಕೆ ಮೋಸ ಮಾಡಿದ್ದಾರೆ. ಬಿಜೆಪಿಯನ್ನ ನಮ್ಮ ತಾಯಿ ಎಂದು ತಿಳಿದುಕೊಂಡಿದ್ದೇವೆಂದು ಯತ್ನಾಳ್ ಹೇಳಿದ್ದಾರೆ.

ನನ್ನ ಉಚ್ಚಾಟನೆ ಮಾಡಿದ್ದೇ  ವಿಜಯೇಂದ್ರನನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯಲು. ವಿಜಯೇಂದ್ರ ಕೆಳಗಿಳಿಸೋಕೆ ನನ್ನ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. ವಿಜಯಪುರದಲ್ಲಿ ನಗರ ಶಾಸಕ ಯತ್ನಾಳ ಹೇಳಿದ್ದಾರೆ. ವಿಜಯೇಂದ್ರನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸೋಕೆ ನನ್ನ ಉಚ್ಛಾಟನೆ ಮಾಡಲಾಗಿದೆ.ನ್ಯೂಟ್ರಲ್  ಇದ್ದವರನ್ನು ಅಧ್ಯಕ್ಷ ಮಾಡಿ .ಯಾರು ಪಕ್ಷಕ್ಕೆ ನಿಷ್ಠುರ ಇದ್ದಾರೆ ಅವರನ್ನು ವಾಪಸ್ ಬಿಜೆಪಿಗೆ ತೆಗೆದುಕೊಳ್ಳಬೇಕು ಎಂಬ ನಿರ್ಣಯ ಆಗಿದೆ.ಎಂದು ಒಬ್ಬರು ಹೇಳುತ್ತಾರೆ.ಯಾರು ಹೇಳಿದ್ದಾರೆ ಎಂದು ಯತ್ನಾಳ್ ಬಾಯಿ ಬಿಟ್ಟಿಲ್ಲ.

ನನ್ನನ್ನ ಬಿಜೆಪಿಯಿಂದ ಹೊರ ಹಾಕಿರೋ ಕಾರಣ ಕೆಲವರು ಪಟಾಕಿ ಸೇರಿಸಿ ಸಿಹಿ ಹಂಚಿ ಕುಡಿದು ಕುಪ್ಪಳಿಸಿರಬಹುದು.ಕಥಕಲಿ ಡ್ಯಾನ್ಸ್ ಡಿಸ್ಕೋ ಡ್ಯಾನ್ಸ್ ಮಾಡಿರಬಹುದು.ಡ್ಯಾನ್ಸ್ ಮಾಡಿ ಎರಡೇ ಗಂಟೆಗಳಲ್ಲಿ ಅವರಿಗೆ ಗಾಬರಿಯಾಗಿದೆ.ವಿಜಯೇಂದ್ರ ನನ್ನ ರಾಜ್ಯಾಧ್ಯಕ್ಚ ಸ್ಥಾನದಿಂದ ಕೇಂದ್ರದವರು ಕೆಳಗಿಳಿಸಿದರೆ ಸೇಮ್ ಟು ಸೇಮ್ ಆಗುತ್ತದೆ ಆಗ ಮ್ಯಾಚ್ ಟೈ ಆಗುತ್ತದೆ.ಹೀಗಾಗಿ ಅವರು ಗಾಬರಿಯಾಗಿ ಡಾನ್ಸ್ ಮಾಡುವಾಗಲೇ ನಿಂತು ಬಿಟ್ಟರು.ಯತ್ನಾಳಗೆ ಕೈ ಹೆಚ್ಚಿದ್ದಾರೆಂದರೆ ನನಗೂ ಕೈ ಹೆಚ್ಚುತ್ತಾರೆಂದು ವಿಜಯೇಂದ್ರಗೆ ಅನಿಸಿದೆ.ಭ್ರಷ್ಟ ಹಾಗೂ ಅವರಪ್ಪನ ನಕಲಿ ಸಹಿ ಮಾಡಿದಂತ.ಅವರಪ್ಪನನ ಜೈಲಿಗೆ ಕಳುಹಿಸಿದ ವಿಜಯೇಂದ್ರಗೆ ಭಯ ಬಂದಿದೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಬಿಜೆಪಿಯಿಂದ ತಾವು ಉಚ್ಚಾಟನೆಯಾಗ ವಿಜಯಪುರದಲ್ಲಿ  ಸಂಭ್ರಮಿಸಿದವರಿಗೆ ನೇರವಾಗಿ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.