ಮನೆ Latest News ಬಿ.ವೈ. ವಿಜಯೇಂದ್ರ ಔತಣಕೂಟಕ್ಕೆ ಆಹ್ವಾನ ಇದ್ರೂ ನಾನು ಹೋಗಿಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್...

ಬಿ.ವೈ. ವಿಜಯೇಂದ್ರ ಔತಣಕೂಟಕ್ಕೆ ಆಹ್ವಾನ ಇದ್ರೂ ನಾನು ಹೋಗಿಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

0

ಬೆಳಗಾವಿ: ಬಿ.ವೈ. ವಿಜಯೇಂದ್ರ ಔತಣಕೂಟಕ್ಕೆ ಆಹ್ವಾನ ಇದ್ರೂ ನಾನು ಹೋಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ನಾನು ಹೊಗಿಲ್ಲ, ರಮೇಶ್ ಜಾರಕಿಹೊಳಿ ಸಹ ಹೋಗುವುದೇ ಇಲ್ಲ. ಆಹ್ವಾನ ಇತ್ತು, ಹೋಗಲ್ಲ. ಇಲ್ಲಿ ಕರೆಯುತ್ತಾರೆ, ದಾವಣಗೆರೆಯಲ್ಲಿ ಅವರ ಚೇಳಾಗಳನ್ನ ಬಿಟ್ಟು ಯಡಿಯೂರಪ್ಪ, ವಿಜಯೇಂದ್ರರ ನಿರಂತರವಾಗಿ‌ ದಾವಣಗೆರೆ ಸಭೆಯನ್ನ ಮಾನಿಟರ್ ಮಾಡುತ್ತಿದ್ದಾರೆ. ಅವರ ಗನ್ ಮ್ಯಾನ್ ಗಳಿಂದ ಮಾಹಿತಿ ಪಡೆದುಕೊಳ್ತಿದ್ದಾರೆ.
ಯತ್ನಾಳ್‌ ಉಚ್ಚಾಟನೆ ಮಾಡಿ ಅಂತ ಯಡಿಯೂರಪ್ಪ ಸೇರಿ ಕೆಲ ಶಾಸಕರು ಮಾತಾಡಿದ್ದನ್ನ ಸ್ವತಂ ಮಾಜಿ‌ ಶಾಸಕರೇ ನಮಗೆ ಮಾಹಿತಿ ನೀಡಿದ್ದಾರೆ. ಇವರು ವಯೋವೃದ್ದ, ಯತ್ನಾಳ್ ನಮ್ಮವರೇ ಕೂತು ಬಗೆಹರಿಸಿಕೊಳ್ತೀವಿ ಅಂತಾರೆ. ಇದರ ಹಿಂದೆ ಯಡಿಯೂರಪ್ಪ ಕುತಂತ್ರ ಯಾವಾಗಲೂ ಇದ್ದೇ ಇರುತ್ತೆ. ಹಿಂದೆಯೂ ವಿಜಯೇಂದ್ರ ಇದೇ ರೀತಿ ಹೇಳಿಕೆ ಕೊಟ್ಟಿದ್ದ. ಯತ್ನಾಳ್ ವಿಪಕ್ಷ ನಾಯಕ, ಶೋಭಾ ಕರಂದ್ಲಾಜೆ‌ ರಾಜ್ಯಾಧ್ಯಕ್ಷರಾಗೋಕೆ ನಮ್ಮದೇನು ತಕರಾರು ಅಂದ್ರು. ಆದರೇ ಎರಡೇ ದಿನಕ್ಕೆ ರಾಜ್ಯಾಧ್ಯಕ್ಷರ ಘೋಷಣೆ ಆಯ್ತು ಎಂದಿದ್ದಾರೆ.

ಇವರು ಮ್ಯಾನೇಜ್ ಮಾಡ್ತಾರೆ, ಯಡಿಯೂರಪ್ಪರ ಈ ಹೇಳಿಕೆ ಹಿಂದೆ ದೊಡ್ಡ ಮ್ಯಾನೇಜ್ಮೆಂಟ್ ಇದೆ. ಆಮೇಲೆ ನಾವು ಮಾಡಿಲ್ಲ, ಹೈಕಮಾಂಡ್ ಮಾಡಿದೆ. ನಾನು ನಮ್ಮ ಮಗ ಇಬ್ಬರೂ ಪ್ರಾಮಾಣಿಕರು ಅಂತ ಹೇಳ್ತಾರೆ. ಸಭೆ ಮಾಡಿದ್ದಕ್ಕೆ ನನ್ನ ಮೇಲೆ ಬಹಳ ವಿರೋಧ ಇದೆ ಅಂತ ವಿಜಯೇಂದ್ರ ಹೇಳ್ತಾನೆ. ಇವರದ್ದು ನಾಟಕದ ಕಂಪನಿ ಅಂತ ಗೊತ್ತಾಗುವುದಿಲ್ವಾ ?.ನಾವು 35-40 ವರ್ಷ ಯಡಿಯೂರಪ್ಪ ಜೊತೆಗೇ ಜೀವನ ಮಾಡಿದ್ದಲ್ವಾ. ಯಡಿಯೂರಪ್ಪ ಒಬ್ಬರೇ ಬಿಜೆಪಿ ಕಟ್ಟಿದ್ದಾರಾ?.ನಾವೇ ಪೆಟ್ರೋಲ್ ಹಾಕಿ ಬಸ್ ಗೆ ಟಿಕೆಟ್ ಕೊಡಿಸಿ ಕಳುಹಿಸಿ ಕೊಟ್ಟಿವಿ. ಈಗ ನಮಗೆ ಸೈಕಲ್ ಹೊಡೆದದ್ದು ಹೇಳ್ತಾರೆ ಅವರ ಶಿಷ್ಯಂದಿರು.ಪಕ್ಷದಲ್ಲಿ‌ ಸಂಘಟನೆ ಮಾಡಬೇಕಿದ್ರೆ ದಾವಣಗೆರೆ ಸಭೆ ಮಾಡ್ತಾ ಇರಲಿಲ್ಲ. ಸ್ವತಃ ಯಡಿಯೂರಪ್ಪ ಮನೆಯಲ್ಲೇ ಭಿನ್ನಮತಿಯರ ಸಭೆ ಆಗುತ್ತೆ. ರಾಜ್ಯಾಧ್ಯಕ್ಷ ಆ ಸಭೆಯಲ್ಲಿ ಪಾಲ್ಗೊಳ್ಳುತ್ತಾನೆ, ಇದು ಗುಂಪಿನ ನಾಯಕ. ಔತಣಕೂಟ ಮಾಡೋದು, ಅಲ್ಲಿಂದ ಬೆನ್ನಿಗೆ ಚಾಕು ಹಾಕೋದು ಅಲ್ಲ. ನಾವು ಉತ್ತರ ಕರ್ನಾಟಕದವರು ಅ ರೀತಿ ಮಾಡೊಲ್ಲ. ನಾವು ಉತ್ತರ ಕರ್ನಾಟಕದವರು ಏಕ್ ಮಾರ್ ದೋ ತುಕ್ಡಾ, ಮುಂದೆ ಮಾತಾಡೋದು ಎಂದು ತಿರುಗೇಟು ಕೊಟ್ಟಿದ್ದಾರೆ.

ವಿಜಯೇಂದ್ರರ ಮಾತನಾಡೋದನ್ನ ಮೊದಲು‌ ಕಲಿಯಬೇಕು: ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಶಾಸಕ ಯತ್ನಾಳ್ ಹೇಳಿಕೆ

ಬೆಳಗಾವಿ: ವಿಜಯೇಂದ್ರರ ಮಾತನಾಡೋದನ್ನ ಮೊದಲು‌ ಕಲಿಯಬೇಕು ಎಂದು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ನಾವು ಸದನದಲ್ಲಿ ಒಳ್ಳೆಯ ಪರ್ಫಾಮೆನ್ಸ್ ಕೊಡ್ತಿದ್ದೀವಿ.ಇದನ್ನೆಲ್ಲ ಕೇಂದ್ರ ನೋಡಬೇಕು, ಇಂಟಲಿಜನ್ಸ್ ಇರುತ್ತೆ. ನಾವು ಏನೇನು ಚರ್ಚೆ ನಡೆಸಿದ್ದೇವೆ ಅಂತ ಗೊತ್ತಾಗುತ್ತದೆ. ಯಾರು ಯಾರಿಗೆ ಫೋನ್ ಮಾಡಿ ಏನು ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಯಾವ ಮಾಜಿ ಶಾಸಕರಿಗೆ ಫೋನ್ ಮಾಡಿದ್ದಾರೆ? ರಾತ್ರಿ 12 ಗಂಟೆಗೆ ಯಡಿಯೂರಪ್ಪ ಒಬ್ಬ ಮಾಜಿ ಎಂಎಲ್ ಎಗೆ ಫೋನ್ ಮಾಡ್ತಾರೆ. ಐದು ವರ್ಷ ಆತ ಎಂಎಲ್ ಎ ಆಗಿದ್ದಾಗ ಆತನ ಮುಖವನ್ನೇ ಯಡಿಯೂರಪ್ಪ ನೋಡಿಲ್ಲ, ಫೋನ್ ಮಾಡಿಲ್ಲ.ಈಗ ನೀವೆಲ್ಲ ವಿಜಯೇಂದ್ರ ಜೊತೆಗಿರಬೇಕು. ಮುಂದೆ ನಮ್ಮ ಸರ್ಕಾರ ಬರುತ್ತೆ ಅಂತ ಫೋನ್ ಮಾಡ್ತಿದ್ದಾರೆ. ನಿಮ್ಮನ್ನ ಮಂತ್ರಿ ಮಾಡ್ತೀವಿ ಅಂತ ಹೇಳ್ತಿದ್ದಾರಂತೆ ಎಂದು ಬಾಂಬ್ ಸಿಡಿಸಿದ್ದಾರೆ. ಮುಂದಿನ‌ ಆಪರೇಷನ್ ಈಗಲೇ ಶುರುವಾಗಿದೆ ಎಂದಿದ್ದಾರೆ.