ಬೆಳಗಾವಿ; ವಕ್ಫ್ ಆಸ್ತಿ ವಿಚಾರವಾಗಿ ಶಾಸಕ ವಿಜಯೇಂದ್ರ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ ವಿಚಾರಕ್ಕೆ ಶಾಸಕ ವಿಜಯೇಂದ್ರ ಸ್ಪಷ್ಟನೆಗೆ ಅವಕಾಶ ಕೊಡುವಂತೆ ವಿಪಕ್ಷ ಶಾಸಕರು ಆಗ್ರಹಿಸಿದ್ರು.
ಬಳಿಕ ಸದನದಲ್ಲಿ ಶಾಸಕ ವಿಜಯೇಂದ್ರ ಸ್ಪಷ್ಟನೆ ನೀಡಿದ್ರು. ತಮ್ಮ ಆರೋಪದ ಬಗ್ಗೆ ಇಂದು ಮತ್ತೆ ಸದನದಲ್ಲಿ ಸಚಿವ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ನಾನು ಆರೋಪ ಮಾಡಿಲ್ಲ, ಪತ್ರಿಕಾ ವರದಿ ಉಲ್ಲೇಖ ಮಾಡಿದ್ದೇನೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಬಳಿರ ತಮ್ಮ ಅನುಪಸ್ಥಿತಿಯಲ್ಲಿ ಮಾಡಿದ್ದ ಆರೋಪದ ಬಗ್ಗೆ ಸದನದಲ್ಲಿ ಶಾಸಕ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಸದನದಲ್ಲಿ ಆಡಳಿತ ಪಕ್ಷದ ಶಾಸಕರಿಂದ ವಿರೋಧ ವ್ಯಕ್ತವಾಯಿತು. ಸದನದಲ್ಲಿ ಗದ್ದಲದ ವಾತಾವರಣ. ನಿರ್ಮಾಣವಾಯ್ತು.150 ಕೋಟಿ ಆರೋಪದ ವಿಚಾರದಲ್ಲಿ ಸದನದಲ್ಲಿ ತೀವ್ರ ಗದ್ದಲ ಉಂಟಾಯಿತು. ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು.
ಈ ವೇಳೆ ಶಾಸಕ ವಿಪಕ್ಷ ನಾಯಕ ಅಶೋಕ್ ಮತ್ತು ಬಿಜೆಪಿ ಶಾಸಕರು ವಿಜಯೇಂದ್ರ ಬೆನ್ನಿಗೆ ನಿಂತಿದ್ದಾರೆ. ಒಂದು ಹಂತದಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ಮತ್ತು ಸಚಿವ ಪ್ರಿಯಾಂಕ ಖರ್ಗೆ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕತ್ತೆ ಕಾಯುತ್ತಿದ್ರಾ ಎಂದು ಪದ ಪ್ರಯೋಗಿಸಿದ್ದಾರೆ ಸಚಿವ ಪ್ರಿಯಾಂಕ ಖರ್ಗೆ.
150 ಕೋಟಿ ಆರೋಪ, ಮಾಣಿಪ್ಪಾಡಿ ವರದಿ ಮತ್ತು ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸದನದಲ್ಲಿ ಶಾಸಕ ವಿಜಯೇಂದ್ರ ಒತ್ತಾಯಿಸಿದ್ದಾರೆ. ೧೫೦ ಕೋಟಿ ಆರೋಪದ ವಗ್ಗೆ ಸಚಿವ ಖರ್ಗೆ ಕ್ಷಮೆಗೆ ಸದನದಲ್ಲಿ ಶಾಸಕ ವಿಜಯೇಂದ್ರ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸದನದಲ್ಲಿ ತೀವ್ರ ಗದ್ದಲದ ವಾತಾವರಣ ನಿರ್ಮಾಣವಾಯ್ತು.