ಮನೆ Latest News ಕೊನೆಗೂ ದರ್ಶನ್ ರನ್ನು ನೋಡಲು ಠಾಣೆಗೆ ಬಂದೇ ಬಿಟ್ರು ವಿಜಯಲಕ್ಷ್ಮೀ ದರ್ಶನ್

ಕೊನೆಗೂ ದರ್ಶನ್ ರನ್ನು ನೋಡಲು ಠಾಣೆಗೆ ಬಂದೇ ಬಿಟ್ರು ವಿಜಯಲಕ್ಷ್ಮೀ ದರ್ಶನ್

0

ಬೆಂಗಳೂರು; ತನ್ನ ಅಭಿಮಾನಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ದರ್ಶನ್ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ದರ್ಶನ್ ಅವರನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೂನ್ 11 ರಂದು ಅರೆಸ್ಟ್ ಮಾಡಲಾಗಿತ್ತು. ಇಂದಿಗೆ ಅರೆಸ್ಟ್ ಮಾಡಿ 9 ನೇ ದಿನ. ದರ್ಶನ್ ಅವರು ಅರೆಸ್ಟ್ ಆದ ಬಗ್ಗೆ ಅವರ ಪುತ್ರ ವಿನೀಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದನ್ನು ಹೊರತುಪಡಿಸಿ ಯಾರೊಬ್ಬರು ಅವರ ಕುಟುಂಬದವರು ರಿಯಾಕ್ಟ್ ಮಾಡಿರಲಿಲ್ಲ. ಇದೀಗ ಡಿ ಬಾಸ್ ಅರೆಸ್ಟ್ ಆದ 9 ದಿನಗಳ ಬಳಿಕ ಅವರ ಪತ್ನಿ ವಿಜಯಲಕ್ಷ್ಮೀ ಅವರು ಠಾಣೆಗೆ ಆಗಮಿಸಿದ್ದಾರೆ.

ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿರುವ ಅನ್ನಪೂರ್ಣೇಶ್ವರ  ನಗರ ಪೊಲೀಸ್ ಠಾಣೆಗೆ  ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಪೊಲೀಸರು ದರ್ಶನ್ ಅವರನ್ನು ಭೇಟಿಯಾಗಲು ವಿಜಯಲಕ್ಷ್ಮೀ ಅವರಿಗೆ ಅವಕಾಶ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ವಿಜಯಲಕ್ಷ್ಮೀ ಅವರು ದರ್ಶನ್ ಅವರ ಪರವಾಗಿ ಕಾನೂನು ಹೋರಾಟ ಮಾಡಲು ಹಿರಿಯ ಲಾಯರ್ ಒಬ್ಬರ ಬಳಿ ಮಾತನಾಡಿದ್ದಾರೆ ಎನ್ನಲಾಗಿದೆ.

ಒಂದು ಕಡೆ ವಿಜಯಲಕ್ಷ್ಮೀ ಅವರು ದರ್ಶನ್ ಅವರನ್ನು ಭೇಟಿಯಾಗಲು ಬಂದಿದ್ದಾರೆ ಎನ್ನಲಾಗುತ್ತಿದ್ದರೆ ಮತ್ತೊಂದು ಕಡೆ ಕೊಲೆ ನಡೆದ ದಿನ ದರ್ಶನ್ ಅವರು ಧರಿಸಿದ್ದ ಶೂ, ಬಟ್ಟೆ ವಿಜಯಲಕ್ಷ್ಮೀ ಅವರ ಮನೆಯಲ್ಲಿ ಪತ್ತೆಯಾಗಿತ್ತು.ಹಾಗಾಗಿ ಠಾಣೆಗೆ ಬಂದು ಹೇಳಿಕೆ ನೀಡುವಂತೆ ಪೊಲೀಸರು ಸೂಚಿಸಿದ್ದರು. ಹಾಗಾಗಿ ವಿಜಯಲಕ್ಷ್ಮೀ ಹೇಳಿಕೆ ನೀಡೋದಕ್ಕಾಗಿ ಠಾಣೆಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.