ಮನೆ ಪ್ರಸ್ತುತ ವಿದ್ಯಮಾನ ತಂದೆಯ ಪರವಾಗಿ ಧ್ವನಿ ಎತ್ತಿದ ದರ್ಶನ್ ಪುತ್ರ; ಕೆಟ್ಟ ಕಮೆಂಟ್ ಹಾಕೋರಿಗೆ ಥ್ಯಾಂಕ್ಸ್ ಎಂದ ವಿನೀಶ್

ತಂದೆಯ ಪರವಾಗಿ ಧ್ವನಿ ಎತ್ತಿದ ದರ್ಶನ್ ಪುತ್ರ; ಕೆಟ್ಟ ಕಮೆಂಟ್ ಹಾಕೋರಿಗೆ ಥ್ಯಾಂಕ್ಸ್ ಎಂದ ವಿನೀಶ್

0

ಬೆಂಗಳೂರು;  ತನ್ನ ಅಭಿಮಾನಿಯನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ದರ್ಶನ್ , ಅವರ ಸ್ನೇಹಿತೆ ಪವಿತ್ರ ಗೌಡ ಸೇರಿ ಒಟ್ಟು 15 ಮಂದಿಯನ್ನು ಬಂಧಿಸಲಾಗಿದ್ದು, ಕಳೆದ ಮೂರು ದಿನಗಳಿಂದ ಅವರನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾ ದರ್ಶನ್ ಒಂದಷ್ಟು ಅಭಿಮಾನಿಗಳು ನಮ್ಮ ಬಾಸ್ ಮಾಡಿದ್ದು ಸರಿ ಅವರದ್ದೇನು ತಪ್ಪಿಲ್ಲ ಅಂತಿದ್ರೆ ಇನ್ನೊಂದಷ್ಟು ಮಂದಿ ಅಶ್ಲೀಲ ಕಮೆಂಟ್ ಗಳ ಮೂಲಕ ದರ್ಶನ್ ಅವರನ್ನು ನಿಂದಿಸುತ್ತಿದ್ದಾರೆ.

ಇದರ ಬೆನ್ನಲ್ಲೇ ಇದೀಗ ತಮ್ಮ ತಂದೆಯ ಪರವಾಗಿ ದರ್ಶನ್ ಪುತ್ರ ವಿನೀಶ್ ಧ್ವನಿ ಎತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ವಿನೀಶ್ ನನ್ನ ತಂದೆಯ ಬಗ್ಗೆ ಕೆಟ್ಟ ಕಮೆಂಟ್ ಗಳನ್ನು ಮಾಡುತ್ತಿರುವವರಿಗೆ ಹಾಗೇ ತಂದೆಯ ಬಗ್ಗೆ ಅಶ್ಲೀಲ ಭಾಷೆ ಬಳಸುತ್ತಿರುವವರಿಗೆ ಧನ್ಯವಾದಗಳು. ನನಗೆ 15 ವರ್ಷ. ನನಗೂ ಮನಸ್ಸಿದೆ.ಇಂತಹ ನಮ್ಮ ಕಷ್ಟದ ಸಮಯದಲ್ಲಿ ನನ್ನ ತಾಯಿ ಹಾಗೂ ತಂದೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ.ನೀವು ನನಗೆ ಶಾಪ ಹಾಕೋದರಿಂದ ಯಾವುದೇ ಬದಲಾವಣೆ ಆಗೋದಿಲ್ಲ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇನ್ನು ನಿಮಗೆಲ್ಲಾ ಗೊತ್ತಿರೋ ಹಾಗೇ ಘಟನೆ ನಡೆದ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಡಿಪಿಯನ್ನು ತೆಗೆದು ಹಾಕಿದ್ದರು. ಅಲ್ಲದೇ ದರ್ಶನ್ ಸೇರಿದಂತೆ ಎಲ್ಲರನ್ನೂ ಅನ್ ಫಾಲೋ ಮಾಡಿದ್ದರು. ಇದೆಲ್ಲಾ ಆದ ಬಳಿಕ ಇದೀಗ ದರ್ಶನ್ ಪುತ್ರ ವಿನೀಶ್ ಅಪ್ಪನ ಪರವಾಗಿ ಪೋಸ್ಟ್ ಮೂಲಕ ಧ್ವನಿಯೆತ್ತಿದ್ದಾರೆ. ಇನ್ನು ವಿಜಯಲಕ್ಷ್ಮೀ ಅವ್ರು ಏನಾದ್ರು ಈ ಬಗ್ಗೆ ಮಾತನಾಡುತ್ತಾರಾ ಅನ್ನೋದು ಕಾದು ನೋಡಬೇಕಿದೆ.

ಕೊಲೆ ಪ್ರಕರಣದಲ್ಲಿ ದರ್ಶನ್ ಬಚಾವ್ ಮಾಡಲು ನಡಿತಿದ್ಯಾ ಹುನ್ನಾರ?

ಇನ್ನು ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಬಚಾವ್ ಮಾಡಲು ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಕೂಡ ಕೇಳಿ ಬರ್ತಿದೆ. ಇದರ ಬೆನ್ನಲ್ಲೇ ಆರೋಪಿಗಳು ಇರುವ ಅನ್ನಪೂರ್ಣೇಶ್ವರಿ ಠಾಣೆಯ ಸುತ್ತಮುತ್ತ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರ ಆದೇಶದಂತೆ ಶಾಮಿಯಾನ ಹಾಗೂ ಸೈಡ್ ವಾಲ್ ಗಳನ್ನು ಹಾಕಲಾಗಿದ್ದು ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇನ್ನು ಆರೋಪಿಗಳನ್ನು ಅರೆಸ್ಟ್ ಮಾಡಿ ಠಾಣೆಗೆ ತರುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ದರ್ಶನ್ ಅವರ ಅಭಿಮಾನಿಗಳು ಠಾಣೆಯ ಬಳಿ ಜಮಾಯಿಸಿದ್ದರು. ಹಾಗಾಗಿ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು. ಆದರೆ ಇಂದು ಅಭಿಮಾನಿಗಳು ಯಾರೂ ಕೂಡ ಮುಖ ಮಾಡಿಲ್ಲ. ಹೀಗಿದ್ದರೂ ಸಹ ಅಲ್ಲಿ ಶಾಮಿಯಾನ ಹಾಕಿರೋದು ಸಾಕಷ್ಟು ಅನುಮಾನಗಳನ್ನು ಮೂಡಿದೆ. ಆರೋಪಿಗಳನ್ನು ಮಾಧ್ಯಮದವರ ಕಣ್ಣಿಂದ ತಪ್ಪಿಸೋದಕ್ಕೆ ಈ ರೀತಿ ಮಾಡಲಾಗಿದ್ಯಾ ಅಥವಾ ಆರೋಪಿಗಳನ್ನು ಬಚಾವ್ ಮಾಡೋದಕ್ಕೆ ಈ ರೀತಿ ಪ್ಲ್ಯಾನ್ ಮಾಡಲಾಗಿದೆಯಾ ಅನ್ನೋ ಅನುಮಾನ ವ್ಯಕ್ತವಾಗಿದೆ.

ಪೊಲೀಸ್ ಠಾಣೆ ಅನ್ನೋದು ಸಾರ್ವಜನಿಕ ಆಸ್ತಿ. ಸಾರ್ವಜನಿಕರು ತೊಂದರೆಯಾದಾಗ ಪೊಲೀಸ್ ಠಾಣೆಗೆ ಬರಬೇಕಾದ ಸನ್ನಿವೇಶ ಬಂದಾಗ ಬರಬೇಕಾಗುತ್ತದೆ. ಹೀಗಿರುವಾಗ ಯಾಕೆ ಈ ಥರಾ ಮಾಡಲಾಗಿದೆ. ಸಾರ್ವಜನಿಕ ಆಸ್ತಿಯಾಗಿರೋ ಪೊಲೀಸ್ ಠಾಣೆಯನ್ನು ಯಾರಿಗೋ ಅನುಕೂಲವಾಗೋ ರೀತಿ ಯಾಕೆ ಬಳಕೆ ಮಾಡಲಾಗುತ್ತಿದೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಪೋಸ್ಟ್ ಮಾರ್ಟಂ ವರದಿ ತಿರುಚಲು ವೈದ್ಯರಿಗೆ ಆಫರ್

ಪ್ರಕರಣದಲ್ಲಿ ದರ್ಶನ್ ಅವರನ್ನು ಬಚಾವ್ ಮಾಡಲು ಮೃತದೇಹದ ಪರೀಕ್ಷೆ ಮೇಲೆ ಹಾರ್ಟ್ ಅಟ್ಯಾಕ್ ನಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ ಎಂದು ರಿಪೋರ್ಟ್ ನೀಡಲು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಗೆ ಪ್ರಭಾವಿ ರಾಜಕಾರಣಿಯೊಬ್ಬರು ಒತ್ತಡ ಹಾಕಿದ್ರು ಎನ್ನಲಾಗಿದೆ. ಅಲ್ಲದೇ ವೈದ್ಯರಿಗೆ ಅದಕ್ಕಾಗಿ 1 ಕೋಟಿ ರೂಪಾಯಿಗಳ ಆಫರ್ ನೀಡಲಾಗಿತ್ತಂತೆ.ಆದರೆ ವೈದ್ಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.