ಬೆಂಗಳೂರು; ಬೆಂಗಳೂರಿನಲ್ಲಿ ರಾಷ್ಟ್ರೀಯ ಭೋವಿ ಸಮಾಜ ಸೇವಾ ಸಂಘದ ಅಧ್ಯಕ್ಷ ವೆಂಕಟೇಶ ಮೌರ್ಯ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಭೂ ಒಡೆತನ ಯೋಜನೆಯಡಿ ಶೇ.60 ರಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಭೋವಿ ಸಮುದಾಯದವರೇ ಆದ ರವಿಕುಮಾರ್ ಜನಾಂಗದ ಕಲ್ಯಾಣಕ್ಕೆ ಮಾರಕವಾಗುವ ರೀತಿಯಲ್ಲಿ ಪರ್ಸೆಂಟೇಜ್ ಮಾತನಾಡಿ ಲಂಚ ಸ್ವೀಕರಿಸುತ್ತಿದ್ದಾರೆ. ಭೋವಿ ಸಮಾಜಕ್ಕೆ ದ್ರೋಹ ಬಗೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ನಿಗಮದ ಅಧ್ಯಕ್ಷರು ಸರ್ಕಾರಿ ಕಚೇರಿಯಲ್ಲೇ ಮಧ್ಯವರ್ತಿಗಳೊಂದಿಗೆ 60% ಕಮಿಷನ್ ಕೊಡಬೇಕು ಎಂದು ಮಾತನಾಡಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಅದೇ ಮಧ್ಯವರ್ತಿ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಹಣ ಕೊಡುವ ವೀಡಿಯೋ ಕೂಡಾ ಸೆರೆಯಾಗಿದೆ ಎಂದರು.
ಸಿಎಂ ಕೂಡಲೇ ಸಚಿವರಾಗಿದ್ದ ರಾಜಣ್ಣರನ್ನು ಪದಚ್ಯುತಿ ಮಾಡಿದ ರೀತಿ ರವಿಕುಮಾರ್ ಅವರನ್ನು ವಜಾ ಮಾಡಬೇಕು. ರವಿಕುಮಾರ್ ಅವರನ್ನು ಬಂಧಿಸಿ, ಕೇಸ್ ದಾಖಲಿಸಬೇಕು. ರವಿಕುಮಾರ್ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನಿಗಮಕ್ಕೆ ಆಗಿರುವ ನಷ್ಟವನ್ನು ಭರಿಸಬೇಕು. ಕೇವಲ ರವಿಕುಮಾರ್ ಒಬ್ಬರೇ ಇಲ್ಲ, ಅವರ ಹಿಂದೆ ಬಲವಾದ ಶಕ್ತಿ ಇದೆ. ತೆಲಂಗಾಣ ಚುನಾವಣೆ ವೇಳೆ ವಾಲ್ಮೀಕಿ ನಿಗಮದಿಂದ ಹಣ ವರ್ಗಾವಣೆ ಆಯಿತು. ಭೋವಿ ನಿಗಮದಲ್ಲಿನ ಅಕ್ರಮದ ತನಿಖೆ ಮಾಡುತ್ತಿರುವ ಅಧಿಕಾರಿಗಳೇ ಸಸ್ಪೆಂಡ್ ಆಗುತ್ತಿದ್ದಾರೆ. ಬಿಹಾರ ಚುನಾವಣೆಗೆ ರವಿಕುಮಾರ್ ಅವರನ್ನು ಮುಂದಿಟ್ಟುಕೊಂಡು ಹಣ ಸಂಗ್ರಹ ಮಾಡುತ್ತಿದ್ದಾರಾ?. ಪ್ರಾಮಾಣಿಕರಾಗಿದ್ದರೆ ಇಂದೇ ರವಿಕುಮಾರ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ನಾಚಿಕೆ, ಮಾನ, ಮರ್ಯಾದೆ ಇಲ್ಲದೇ ರವಿಕುಮಾರ್ ಸರ್ಕಾರಿ ಕಚೇರಿಯಲ್ಲೇ ಹಣ ಬೇಡುತ್ತಿದ್ದಾರೆ. ಸಿದ್ದರಾಮಯ್ಯ ನಿಜವಾಗಿಯೂ ಅಹಿಂದ ನಾಯಕರಾಗಿದ್ದರೆ ಭೋವಿ ನಿಗಮದ ಹಗರಣವನ್ನು ಸಿಬಿಐಗೆ ವಹಿಸಬೇಕು. ಅಧ್ಯಕ್ಷ ರವಿಕುಮಾರ್ ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಇಲ್ಲದಿದ್ದರೆ ಭೋವಿ ಸಮಾಜ ರಾಜ್ಯಾದ್ಯಂತ ಪ್ರತಿಭಟನೆಗೆ ಸಿದ್ದವಾಗುತ್ತದೆ.ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಹೆಚ್.ಸಿ. ಮಹದೇವಪ್ಪ ಹೋದಲ್ಲೆಲ್ಲಾ ಭೋವಿ ಸಮಾಜದಿಂದ ಘೇರಾವ್ ಮಾಡುತ್ತೇವೆ.ಸಿಎಂ, ಸರ್ಕಾರದ ಬೆಂಬಲ ಇಲ್ಲದೇ ಒಬ್ಬ ನಿಗಮದ ಅಧ್ಯಕ್ಷ ಸರ್ಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಫಲಾನುಭವಿಗಳೇ ರವಿಕುಮಾರ್ ಲಂಚ ಕೇಳುವ ವೀಡಿಯೋ ಸೆರೆ ಹಿಡಿದಿದ್ದಾರೆ ಇದರಲ್ಲಿ ಮಧ್ಯವರ್ತಿಗಳು, ಅಧಿಕಾರಿಗಳ ಪಾತ್ರ ಕೂಡಾ ಇದೆ. ವೀಡಿಯೋದಲ್ಲಿ ರವಿಕುಮಾರ್ ಮೇಲೆ ಹಣ ಹಂಚಬೇಕು ಅಂತಾ ಹೇಳಿದ್ದಾರೆ. ಭೋವಿ ನಿಗಮ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುತ್ತದೆ. ಇದರಲ್ಲಿ ಕಾಂಗ್ರೆಸ್ ಸರ್ಕಾರ ಭಾಗಿಯಾಗಿದೆ. ಸಿಎಂಗೆ ಹಣ ಹೋಗಿದೆ ಅಂತಾ ನನ್ನ ಆರೋಪ. ಯಾಕೆಂದರೆ ನಿಗಮದ ಅಧ್ಯಕ್ಷರನ್ನು ನೇಮಕ ಮಾಡಿರುವುದು ಸಿಎಂ. ಸಿಎಂಗೆ ಭೇಟಿ ಮಾಡಿ ಇದನ್ನು ಸಿಎಂ ಗಮನಕ್ಕೆ ತರುತ್ತೇವೆ. ಪೊಲೀಸ್ ಠಾಣೆಯಲ್ಲಿ ಕೂಡಾ ದೂರು ದಾಖಲಿಸುತ್ತೇವೆ ಎಂದರು.
ರವಿಕುಮಾರ್ ವಿರುದ್ದ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ವಿಷ್ಯ ಗೊತ್ತಿಲ್ಲ. ಎಲ್ಲಾ ತಿಳಿದುಕೊಂಡು ಮಾತನಾಡುತ್ತೇವೆ. ಎಸ್ ಇ ಎಸ್ ಟಿ ಮಂತ್ರಿಗಳು ಇದ್ದಾರೆ ಎಂದರು.











