ಬೆಂಗಳೂರಿನ ಅರಮನೆ ಮೈದಾನದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮಹಾಸಂಗಮ ಸಮಾವೇಶದ ಪೂರ್ವ ಸಿದ್ದತಾ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ವೀರಶೈವ-ಲಿಂಗಾಯತ ಸಮುದಾಯವನ್ನು ಒಗ್ಗೂಡಿಸುವ ಹಿನ್ನೆಲೆಯಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಚಾಮರಾಜನಗರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದ ಎಂಟು ಜಿಲ್ಲೆಗಳ ಮುಖಂಡರು ಮತ್ತು ಸ್ವಾಮೀಜಿಗಳು ಭಾಗಿಯಾಗಿದ್ದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ವಿಜಯೇಂದ್ರ ಆಪ್ತ ಬಿಜೆಪಿ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಡಿ.ಎಸ್. ಸುರೇಶ್ ಯಡಿಯೂರಪ್ಪ ಅವರಿಗೆ ಅಧಿಕಾರ ಇರಲಿ ಬಿಡಲಿ.ಅವರ ಜೊತೆ ಯಾರಿರುತ್ತಾರೋ ಅವರೇ ನಿಜವಾದ ಬೆಂಬಲಿಗರು. ಕೆಜೆಪಿ ಕಟ್ಟಿದಾಗ ನಮ್ಮನ್ನು ಸೋಲಿಸಿದವರೇ ಬಿಜೆಪಿಯವರು. ನಮ್ಮವರು ನಮ್ಮವರನ್ನೇ ಸೋಲಿಸುವ ಕೆಲಸ ಆಗಬಾರದು.
ವಿಜಯೇಂದ್ರ ಅವರನ್ನು ಯಡಿಯೂರಪ್ಪ ಮಗ ಎಂಬ ಕಾರಣಕ್ಕೆ ಬೆಂಬಲಿಸುತ್ತಿಲ್ಲ.ಸಮುದಾಯದ ಜೊತೆ ಅವರು ಇರಬೇಕೆಂಬ ಕಾರಣಕ್ಕೆ ಬೆಂಬಲಿಸುತ್ತಿದ್ದೇವೆ ಎಂದರು.
ಮಾಜಿ ಶಾಸಕ ನಿರಂಜನ್ ಕುಮಾರ್ ಮಾತನಾಡಿ ವಿಜಯೇಂದ್ರ ಅವರಿಗೆ ರಾಜ್ಯದಲ್ಲಿ ಉತ್ತಮ ಬೆಂಬಲ ಸಿಗುತ್ತಿದೆ. ಸಮುದಾಯಕ್ಕೆ ಒಳ್ಳೆಯ ಆಶಾಕಿರಣ ಮೂಡಿದೆ.ಆ ಕಾರಣಕ್ಕೆ ನಾವು ಬೆಂಬಲಿಸುತ್ತಿದ್ದೇವೆ. ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿದ ತಕ್ಷಣ ಯಾರೂ ದೊಡ್ಡವರಾಗಲ್ಲನೀವು ಕೂಡಾ ನಮ್ಮೊಂದಿಗೆ ಜೊತೆಗೂಡಿ ಬನ್ನಿ ಎಂದು ಆಹ್ವಾನಿಸಿದ್ರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ ಈ ರಾಜ್ಯದಲ್ಲಿ ದುಷ್ಟ ಶಕ್ತಿಗಳು ಸಮಾಜವನ್ನು ಒಡೆಯುತ್ತಿದ್ದಾರೆ. ಹೀಗಾಗಿ ನಾವು ಸಮಾವೇಶ ಮಾಡುತ್ತಿದ್ದೇವೆ. ಈ ಸಭೆಗೆ ಸಮುದಾಯದ ನೂರಾರು ವಕೀಲರು ಬಂದಿದ್ದಾರೆ. ಒಡೆದ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಿದೆ
ಇಡೀ ರಾಜ್ಯದ ಉದ್ದಗಲಕ್ಕೂ ಮಹಾ ಸಂಗಮ ಮಾಡಬೇಕಿದೆ. ಎಷ್ಟೋ ಜನರಿಗೆ ಈ ಸಮಾವೇಶದ ಉದ್ದೇಶವೇ ಅರ್ಥ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸೇರಿಸೋಣ.ಯಾರ ಮನೆಗೂ ಬಾರದೇ ಜಾತಿ ಜನಗಣತಿ ಮಾಡಿದ್ದಾರೆ. ನಮ್ಮವರನ್ನು ಕಡಿಮೆ ಸಂಖ್ಯೆಯಲ್ಕಿ ತೋರಿಸಲು ಹೊರಟಿದ್ದಾರೆ.ನಾನು ನಾಯಕನಾಗಲು ಈ ಕಾರ್ಯಕ್ರಮ ಮಾಡುತ್ತಿಲ್ಲ.ಸ್ವಯಂ ಘೋಷಿತ ನಾಯಕನಾಗಬಾರದು, ಎಲ್ಲರೂ ಮೆಚ್ಚುವಂತಹ ನಾಯಕರಾಗಬೇಕು. ಒಳಪಂಗಡಗಳನ್ನು ಒಡೆದಿದ್ದಾರೆ. ನಮ್ಮ ಸಮಾಜ ಒಡೆಯಲು ನಮ್ಮಲ್ಲೇ ಕೊಂಡಿ ಮಂಜಣ್ಣ, ಮಲ್ಲಪ್ಪಶೆಟ್ಟಿ ಅಂತಹವರು ಇದ್ದಾರೆ.ಎಲ್ಲಾ ಸಮಾಜದ ಸಹಕಾರದಿಂದಲೇ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದು. ಸಮುದಾಯದ 9 ಜನ ಮುಖ್ಯಮಂತ್ರಿ ಆಗಿದ್ದರು. ಆದರೆ ಯಾರಿಗೂ ಪೂರ್ಣಪ್ರಮಾಣದ ಅಧಿಕಾರವನ್ನು ನಡೆಸಲು ಬಿಡಲಿಲ್ಲ. ಮಹಾಸಂಗಮದ ಪೂರ್ವಭಾವಿ ಸಭೆಗಳು ಕೆಲವೇ ಪ್ರದೇಶಗಳಿಗೆ ಸೀಮಿತವಲ್ಲ. ಮುಂಬೈ ಕರ್ನಾಟಕ,ಉತ್ತರ ಕರ್ನಾಟಕ ಸೇರಿ ಎಲ್ಲಾ ಕಡೆ ಮಾಡುತ್ತೇವೆ. ಏಪ್ರಿಲ್ ತಿಂಗಳಿನಲ್ಲಿ 5 ಲಕ್ಷ ಜನರು ಸೇರಿ ಬೃಹತ್ ಸಮಾವೇಶ ಮಾಡುತ್ತೇವೆ ಎಂದ್ರು.
ಸಮಾವೇಶಕ್ಕಾಗಲೀ ಸಭೆಗಾಗಲೀ ನಾವ್ಯಾರೂ ಯಡಿಯೂರಪ್ಪ, ವಿಜಯೇಂದ್ರರಿಂದ ಹಣ ಪಡೆದಿಲ್ಲ. ದಾನಿಗಳ ಸಹಾಯದಿಂದ ಮಾಡುತ್ತಿದ್ದೇವೆ. ಸಮುದಾಯಕ್ಕಾಗಿ ಅಧಿಕಾರ ತ್ಯಾಗ ಮಾಡಲೂ ಸಿದ್ಧ.ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕೆಂದು ಈ ಸಭೆಗಳನ್ನು ಮಾಡುತ್ತಿಲ್ಲ. ಸಮಾಜಕ್ಕೆ ಕೊಡುಗೆ ನೀಡಿದ ಯಡಿಯೂರಪ್ಪ ವಿರುದ್ಧವೇ ಕೆಲವರು ಮಾತಾಡುತ್ತಿದ್ದಾರೆ.ನಾಯಿ, ನರಿಗಳೆಲ್ಲಾ ಯಡಿಯೂರಪ್ಪ ವಿರುದ್ಧ ಮಾತಾಡುತ್ತಾರೆ. ಸಮಾವೇಶ ಮಾಡಬೇಡಿ ಎನ್ನುವವರು ಸುಟ್ಟು ಭಸ್ಮ ಆಗುತ್ತಾರೆ ಎಂದು ಎಚ್ಚರಿಸಿದ್ದಾರೆ.











