ಹುಬ್ಬಳ್ಳಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ನಡೆದ ಘಟನೆ ಅಮಾನವೀಯ. ಮಹಿಳೆಯನ್ನು ವಿವಸ್ತ್ರಗೊಳಿಸಿ ಒಂದು ರೀತಿಯ ಅತ್ಯಾಚಾರ ಮಾಡುವ ಪ್ರಯತ್ನ ನಡೆದಿದೆ. ದಲಿತ ಮಹಿಳೆಯ ಮೇಲೆ ಈ ರೀತಿ ವರ್ತನೆ ತೋರಿದ್ದಾರೆ. ಪೊಲೀಸರ ಮುಂದೆಯೇ ಈ ರೀತಿ ಘಟನೆ ನಡೆದಿದೆ ಅಂದರೆ ಕರ್ನಾಟಕದಲ್ಲಿ ಏನು ನಡೆಯತ್ತಿದೆ. ಹಿಂದೆ ಬಿಹಾರದಲ್ಲಿ ನಡೆಯುತ್ತಿದ್ದುದನ್ನು ಮೀರಿ ಈಗ ಕರ್ನಾಟಕದಲ್ಲಿ ನಡೆಯುತ್ತಿದೆ. ಬಳ್ಳಾರಿಯಲ್ಲಿ ಶಾಸಕ ಜನಾರ್ದನ್ ರೆಡ್ಡಿ ಮನೆ ಮೇಲೆ ದಾಳಿ ಮಾಡುತ್ತಾರೆ. ಜೆ.ಜೆ. ನಗರದಲ್ಲಿ ಶಾಂತಿಯುತ ಮೆರವಣಿಗೆಗೆ ಕಲ್ಲು ಎಸೆಯುತ್ತಾರೆ.ಆದರೆ ಗೃಹ ಸಚಿವರು ಅವರು ಯಾರೋ ಚಿಕ್ಕ ಹುಡುಗರು ತನಿಖೆ ಮಾಡುತ್ತೇವೆ ಅಂತಾರೆ ಎಂದಿದ್ದಾರೆ
ಯಲ್ಲಾಪುರದಲ್ಲೂ ಮಹಿಳೆ ಸಾವಿನ ಘಟನೆ ಆಗಿದೆ. ಕರ್ನಾಟಕದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆ. ಸರ್ಕಾರದ ಕೆಲಸವನ್ನು ಮಾಡಲು ಹೋದ ದಲಿತ ಮಹಿಳೆ ಮೇಲೆ ಮಹಿಳೆ ವಿವಸ್ತ್ರಗೊಳಿಸಿ ಅತ್ಯಾಚಾರ ಹಾಗೂ ದೌರ್ಜನ್ಯ ಖಂಡನೀಯ. ತಕ್ಷಣವೇ ಆ ಪೊಲೀಸರನ್ನು ಸಸ್ಪೆಂಡ್ ಮಾಡಬೇಕು. ಪೊಲೀಸ್ ಸ್ಟೇಷನ್, ಸರ್ಕಲ್ ಇನ್ಸ್ಪೆಕ್ಟರ್ ಕಾಂಗ್ರೆಸ್ ಚೇಲಾ. ಕಾಂಗ್ರೆಸ್ ಕಾರ್ಪೊರೇಟರ್ ಮಾತನ್ನು ಕೇಳಿ ರೀತಿ ಅರೆಸ್ಟ್ ಮಾಡಿದ್ದಾರೆ. ನಮ್ಮವರು ಕೇಸ್ ಕೊಟ್ಟರೆ ಎಫ್ಐಆರ್ ಮಾಡಲ್ಲ. ತಕ್ಷವೇ ದಲಿತರ ದೌರ್ಜನ್ಯ, ವಿವಸ್ತ್ರಗೊಳಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಯಾರಾದರೂ ತಾವೇ ವಿವಸ್ತ್ರಗೊಳಿಸಿಕೊಳ್ಳಲು ಸಾಧ್ಯವೇ?. ಮಹಿಳೆಯರ ಬಗ್ಗೆ ನಿಮಗೆ ಎಷ್ಟು ಗೌರವ ಇದೆ?. ಸುಜಾತಾ ನಿಮ್ಮ ಸುಪರ್ದಿಯಲ್ಲಿದ್ದಾಗ ಹೇಗೆ ಅವಳು ಬಟ್ಟೆ ಬಿಚ್ಚಿಕೊಳ್ಳಲು ಆಗುತ್ತದೆ?. ಮಹಿಳೆಯ ಕೈಯನ್ನು ಪೊಲೀಸರು ಹಿಡಿದಿರುವಾಗ ಹೇಗೆ ಬಟ್ಟೆ ಬಿಚ್ಚಿಕೊಳ್ಳಲು ಸಾಧ್ಯ? ಮಹಿಳೆಯೇ ವಿವಸ್ತ್ರ ಮಾಡಿಕೊಳ್ಳಲು ಆಗುತ್ತಾ?. ಬಳ್ಳಾರಿ ಕೇಸ್ ನಲ್ಲಿ ಎಸ್ಪಿ ಪವನ್ ಕುಡಿದಿದ್ದರು ಅಂದರು. ಭರತ್ ರೆಡ್ಡಿ ರಕ್ಷಣೆ ಮಾಡಲು ಎಸ್ಪಿ ಕುಡಿದು ಮಲಗಿದ್ದ ಅಂದರು. ಈಗ ಕಾಂಗ್ರೆಸ್ ಕಾರ್ಪೋರೇಟರ್ ರಕ್ಷಣೆಗಾಗಿ ಸುಜಾತಾ ಅವರೇ ಬಟ್ಟೆ ಬಿಚ್ಚಿಕೊಂಡರು ಅಂತ ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.











