ನಾಗಮಂಗಲ ಗಲಭೆಯಲ್ಲಿ ನಷ್ಟಕ್ಕೊಳಗಾದ ವ್ಯಾಪಾರಿಗಳಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವೈಯಕ್ತಿಕ ಪರಿಹಾರ ಘೋಷಿಸಿದ್ದಾರೆ. ಇಂದು ಗಲಭೆಯಲ್ಲಿ ಬಂಧನಕೊಳಗಾದವರ ಕುಟುಂಬಸ್ಥರನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿದರು. ಈ ವೇಳೆ ಬಂಧನಕ್ಕೆ ಒಳಗಾದವರ ಕುಟುಂಬಸ್ಥರು ಹೆಚ್ ಡಿ ಕುಮಾರಸ್ವಾಮಿ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು.
ಅಮಾಯಕರನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ವಿಡಿಯೋದಲ್ಲಿ ಇಲ್ಲ ಅಂದ್ರೆ ವಾಪಸ್ ಕಳುಹುಸುತ್ತೇನೆ ಎಂದಿದ್ದರು. ಈಗ ಜೈಲಿಗೆ ಕಳುಹಿಸಿ ದೌರ್ಬಲ್ಯ ಮಾಡಿದ್ದಾರೆಂದು ಅಳಲು ತೋಡಿಕೊಂಡಿದ್ದಾರೆ. ಮಹಿಳೆಯರ ಅಹವಾಲು ಆಲಿಸಿದ ಕುಮಾರಸ್ವಾಮಿ ಅವರು ಅವರಿಗೆ ಧೈರ್ಯ ತುಂಬಿದ್ದಾರೆ.
ಗಲಭೆಯಲ್ಲಿ ನಷ್ಟಕ್ಕೊಳಗಾದ ವ್ಯಾಪಾರಿಗಳಿಗೆ ಪರಿಹಾರ ಘೋಷಿಸಿದ ಹೆಚ್ ಡಿ ಕೆ
ಇನ್ನು ನಾಗಮಂಗಲ ಗಲಭೆ ಪ್ರಕರಣದಲ್ಲಿ ನಷ್ಟಕ್ಕೆ ಒಳಗಾದ ವ್ಯಾಪಾರಿಗಳಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪರಿಹಾರ ಘೋಷಿಸಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ವೈಯಕ್ತಿಕ ಆರ್ಥಿಕ ಪರಿಹಾರ ಘೋಷಣೆ ಮಾಡಿದ್ದಾರೆ. ನಷ್ಟವಾದ ವ್ಯಾಪಾರಿಗಳಿಗೆ ಸಹಾಯ ಮಾಡುತ್ತೇನೆ.ವೈಯಕ್ತಿಕವಾಗಿ ನಾನು ಪರಿಹಾರ ನೀಡುತ್ತೇನೆ. ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡ್ತೀನಿ.ಎಲ್ಲರಿಗೂ ಸಮಾನವಾಗಿ ಪರಿಹಾರ ನೀಡ್ತೀನಿ.ನಾನು ಎರಡು ಧರ್ಮದವರಿಗೂ ಸಹಾಯ ಮಾಡ್ತೀನಿ ಎಂದು ನಾಗಮಂಗಲದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ನಾಗಮಂಗಲ ಗಲಭೆ ಪ್ರಕರಣ; ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು
ಮಂಡ್ಯ; ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ನಾಗಮಂಗಲದಲ್ಲಿ ಆಗಿರೋದು ಸಣ್ಣ ಗಲಾಟೆ ಅಂತಾ ಪರಮೇಶ್ವರ್ ಹೇಳ್ತಾರೆ. ಈ ಎಫ್ಐಆರ್ ನೋಡಿದ್ರೆ ಪರಮೇಶ್ವರ್ನನ್ನಾ ಗೃಹ ಸಚಿವ ಅನ್ನೋಕೆ ಆಗುತ್ತಾ.ಸ್ಥಳೀಯ ಪೊಲೀಸರ ವೈಫಲ್ಯ ಇಲ್ಲಿ ಎದ್ದು ಕಾಣ್ತಾ ಇದೆ.ಪ್ರತಿಯೊಂದು ರಾಜಕೀಯ ಎಂದು ಕಾಂಗ್ರೆಸ್ ಹೇಳೋದು ಸರಿಯಲ್ಲ.ಅಮಾಯಕ ಜನರ ಬದುಕು ಬೀದಿಗೆ ಬಂದಿದೆ.19 ವರ್ಷದ ಸಣ್ಣ ವ್ಯಕ್ತಿಯ ಜೀವನ ಬೀದಿಗೆ ಬಂದಿದೆ.ಗಲಭೆಯಲ್ಲಿ ಪೊಲೀಸರನ್ನು ಕೊಲೆ ಮಾಡಲು ಬಂದಿದ್ದಾರೆ ಎಂದು ಎಫ್ಐಆರ್ನಲ್ಲಿ ಬರೆದಿದ್ದಾರೆ.ಪೊಲೀಸರಿಗೆ ಭದ್ರತೆ ನೀಡದ ದರಿದ್ರ ಸರ್ಕಾರ ರಾಜ್ಯದಲ್ಲಿ ಇದೆ. ನಾನು ಎರಡು ಕೋಮುಗಳ ಬಗ್ಗೆ ಮಾತಾಡಲ್ಲ. ಕೋಮುಗಳ ಮಧ್ಯ ಕಂದಕ ತೋಡುವುದನ್ನು ಬಿಡಬೇಕು.ಎಸ್ಐಟಿ ತನಿಖೆ ಸರಿಯಲ್ಲ.ಇದು ಸಿದ್ದರಾಮಯ್ಯ, ಶಿವಕುಮಾರ್ ಇನ್ವೇಸ್ಟಿಕೇಶ್ ಟೀಮ್ ಅಂತಾ ಹೇಳಿದ್ದು ನಾನು. ಅದೇ ರೀತಿಯಾಗಿಯೇ ನಡೆದುಕೊಳ್ಳುತ್ತಿದ್ದಾರೆ. ತಲ್ವಾರ್ ಇಟ್ಟುಕೊಂಡು ಓಡಾಡುತ್ತಾರೆ ಎಂದರೆ ಎಷ್ಟು ಧೈರ್ಯ ಇರಬೇಕು.ಪೆಟ್ರೋಲ್ ಬಾಂಬ್ ಎಸೆಯುತ್ತಾರೆ ಎಂದರೆ ಹೇಗೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು ಗಣೇಶ ಕೂರಿಸಿದರನ್ನೇ ಎ1 ಮಾಡಿದ್ದೀರಾ.ಇದು ನಿಮ್ಮ ನಡವಳಿಯನ್ನು ತೋರಿಸುತ್ತೆ. ಪೊಲೀಸರ ಲೋಪ ಮುಚ್ಚಿಕೊಳ್ಳಲು ಸಿಕ್ಕ ಸಿಕ್ಕವರನ್ನು ಅರೆಸ್ಟ್ ಮಾಡಿದ್ದಾರೆ.ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಹಾಳು ಮಾಡಿಕೊಳ್ಳುವುದು ಬೇಡ. ಅಮಾಯಕರನ್ನು ಬಂಧಿಸಿರೋದು ತಪ್ಪು.ಆ ಅಮಾಯಕರು ಜೈಲಿನಿಂದ ಬರೋದು ಯಾವಾಗ. ಎರಡು ಕೋಮಿನಲ್ಲೂ ಹಲವು ಕುಟುಂಬಗಳು ಊರು ಬಿಟ್ಟು ಹೋಗಿದ್ದಾರೆ. ಹಿಂದೆ ಡಿಜೆ ಹಳ್ಳಿ, ಕೆಜೆ ಹಳ್ಳಿಯ ಗಲಭೆಯ ಸ್ಪಾನ್ಸರ್ ಕಾಂಗ್ರೆಸ್ ನಾಯಕರು.ಅಲ್ಲಿ ಜೈಲಿಗೆ ಹೋದವರು ಈಗ ಏನ್ ಮಾಡ್ತಾ ಇದಾರೆ.ಈ ರೀತಿ ನಾಗಮಂಗಲದಲ್ಲೂ ಆಗಬೇಕಾ ಎಂದು ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್ ಕೆಲಸ ಮಾಡ್ತಾ ಇದೆ.ನಿಜವಾದ ಗಲಭೆಕೋರರು ಇದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು.ಕೆಲವರು ಸಿಎಂ ಛೇರ್ ಖಾಲಿ ಇಲ್ಲ ಅಂತಾರೆ.ಇನ್ನೂ ಕೆಲವರು ಕುರ್ಚಿಗಾಗಿ ಟವಲ್ ಹಾಕಿದ್ದಾರೆ.ವೀರೇಂದ್ರ ಪಾಟೀಲ್ ಇಳಿಸಲು ಅಂದು ಗಲಾಟೆ ಮಾಡಿದ್ದರು.ಈಗಲೂ ಅದೇ ರೀತಿಯ ಕೆಲಸವಾಗುತ್ತಿರಬಹುದು.ಯಾರು ಆ ಕೆಲಸ ಮಾಡ್ತಾ ಇದ್ದಾರೆ ಎನ್ನೋದು ತನಿಖೆ ಮಾಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.ನಾಗಮಂಗಲ ಗಲಭೆಗೂ ಸಿಎಂ ಕುರ್ಚಿಗೂ ಸಂಬಂಧ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ವೀರೇಂದ್ರ ಪಾಟೀಲ್ ಕಾಲದ ಘಟನೆಗೂ ನಾಗಮಂಗಲ ಗಲೆಭೆಗೂ ಹೆಚ್ ಡಿ ಕುಮಾರಸ್ವಾಮಿ ಲಿಂಕ್ ಕೊಟ್ಟಿದ್ದಾರೆ.ವೀರೇಂದ್ರ ಪಾಟೀಲ್ ಸಿಎಂನಿಂದ ಕೆಳಗೆ ಇಳಿಲು ಅಂದು ಗಲಭೆ ಎದ್ದಿತ್ತು.ರಾಮನಗರ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಾಯಕರೇ ಬೆಂಕಿ ಹಚ್ಚಿಸಿ ಗಲಭೆ ಮಾಡಿಸಿದ್ದರು.ಈಗಲೂ ನಾಗಮಂಗಲದಲ್ಲಿ ಗಲಭೆ ಮಾಡಿಸಲಾಗಿದೆ.ಕಾಂಗ್ರೆಸ್ನ ನಾಯಕರೇ ಈ ಘಟನೆ ಮಾಡಿಸಿದ್ದಾರೆ. ಸಿದ್ದರಾಮಯ್ಯನನ್ನು ಸಿಎಂನಿಂದ ಕೆಳಗಿಳಿಸಲು ಈ ಕೃತ್ಯ ನಡೆಸಿದ್ದಾರೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ ಈ ಗಲಭೆಯ ಬಗ್ಗೆ ಸರ್ಕಾರ ಸಮಗ್ರವಾಗಿ ತನಿಖೆ ನಡೆಸಲಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.