ಮನೆ Latest News ಬೆಂಗಳೂರಿನಲ್ಲಿ ದಿ ಎಮರ್ಜೆನ್ಸಿ ಡೈರೀಸ್ ಪುಸ್ತಕ ಬಿಡುಗಡೆ ಮಾಡಿದ ಕೇಂದ್ರ ಸಚಿವ ಭೂಪೇಂದ್ರ ಯಾದವ್

ಬೆಂಗಳೂರಿನಲ್ಲಿ ದಿ ಎಮರ್ಜೆನ್ಸಿ ಡೈರೀಸ್ ಪುಸ್ತಕ ಬಿಡುಗಡೆ ಮಾಡಿದ ಕೇಂದ್ರ ಸಚಿವ ಭೂಪೇಂದ್ರ ಯಾದವ್

0

ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದ ಕುರಿತಾದ ಪುಸ್ತಕ ದಿ ಎಮರ್ಜೆನ್ಸಿ ಡೈರೀಸ್ ಪುಸ್ತಕವನ್ನು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಬಿಡುಗಡೆ ಮಾಡಿದರು. ಈ ಪುಸ್ತಕಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮುನ್ನುಡಿ ಬರೆದಿದ್ದಾರೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು.

ಬಳಿಕ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ದೇಶದಲ್ಲಿ ತುರ್ತು ಪರಿಸ್ಥಿತಿಗೆ ಐವತ್ತು ವರ್ಷಗಳು ತುಂಬಿವೆ. ನರೇಂದ್ರ ಮೋದಿ ಸಾಮಾನ್ಯ ಕಾರ್ಯಕರ್ತನಾಗಿ ತುರ್ತು ಪರಿಸ್ಥಿತಿ ವಿರುದ್ಧ ಗುಜರಾತ್ ನಲ್ಲಿ ಹೋರಾಟ ನಡೆಸಿದ್ದರು.ಕಾಂಗ್ರೆಸ್ ತುರ್ತು ಪರಿಸ್ಥಿತಿಯ ಮೂಲಕ ಸಂವಿಧಾನದ ಹತ್ಯಾ ಪ್ರಯತ್ನ ನಡೆಸಿತ್ತು. ಅದಕ್ಕಿಂತ ಮೊದಲು ಎರಡು ದೊಡ್ಡ ಆಂದೋಲವನ್ನು ತಡೆಯುವ ಪ್ರಯತ್ನ ಕೂಡಾ ನಡೆದಿತ್ತು. ಕಾಂಗ್ರೆಸ್ ಪಕ್ಷ ಎಂದರೆ ಕುಟುಂಬ, ಕುಟುಂಬ ಅಂದರೆ ದೇಶ .  ಇಂದು ದಿ ಎಮರ್ಜೆನ್ಸಿ ಡೈರೀಸ್ ಪುಸ್ತಕವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

ದೇಶದಲ್ಲಿ ಕಾಂಗ್ರೆಸ್ ಒಬಿಸಿ ವರ್ಗಕ್ಕೆ ಮೋಸ ಮಾಡುವ ಪ್ರಯತ್ನ ನಡೆಸಿದೆ. ದೇಶದಲ್ಲಿ ಕಾಂಗ್ರೆಸ್ ಇರುವರೆಗೂ ಒಬಿಸಿ ವರ್ಗಕ್ಕೆ ಏನೂ ಸಿಗುವುದಿಲ್ಲ. ರಾಜ್ಯದಲ್ಲಿ ಜಾತಿ ಸಮೀಕ್ಷೆ ವರದಿಯನ್ನು ಸಿದ್ದರಾಮಯ್ಯ ಸರ್ಕಾರ ಹೈಕಮಾಂಡ್ ಹೇಳಿದ ಬಳಿಕ ಕಸದ ಬುಟ್ಟಿಗೆ ಹಾಕಿದೆ. ಅಲ್ಲಿ ಕೂಡಾ ಒಬಿಸಿ ವರ್ಗಕ್ಕೆ ನ್ಯಾಯ ಸಿಗಲಿಲ್ಲ. ಸಾಮಾಜಿಕ ನ್ಯಾಯವನ್ನು ದೇಶದ ಮೂಲೆ ಮೂಲೆಗೆ ತಲುಪಿಸಬೇಕಾಗಿದೆ. ಕಾಂತರಾಜ್ ಆಯೋಗದ ವರದಿಯನ್ನು ಜಾರಿ ಮಾಡದೇ ಒಬಿಸಿಗಳ ಜಾಗದಲ್ಲಿ ಮುಸ್ಲಿಂ ತುಷ್ಟೀಕರಣವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಹೇಳಿದರು.

60 ವರ್ಷಗಳ ಕಾಲ‌ ಸರ್ಕಾರ ಇದ್ದರೂ ಕಾಂಗ್ರೆಸ್ ಒಬಿಸಿ ಮೀಸಲಾತಿ ಯಾಕೆ ಕೊಡಲಿಲ್ಲ?. ಕಾಂತರಾಜ್ ಆಯೋಗದ ವರದಿಯನ್ನು ಯಾಕೆ ಕಾಂಗ್ರೆಸ್ ಕಸದ ಬುಟ್ಟಿಗೆ ಎಸೆಯಿತು?. ಕಾಲೇಕರ್ ವರದಿ, ಮಂಡಲ್ ಆಯೋಗದ ವರದಿ ಬಗ್ಗೆ ಕಾಂಗ್ರೆಸ್ ಯಾಕೆ ಕ್ರಮ ವಹಿಸಲಿಲ್ಲ?. ಸಂವಿಧಾನದಿಂದ ಸಮಾಜವಾದಿ, ಜಾತ್ಯಾತೀತ ಪದ ತೆಗೆದುಹಾಕಬೇಕೆಂಬ ವಿವಾದ ವಿಚಾರದ ಬಗ್ಗೆ ಮಾತನಾಡಿ  ಕಾಂಗ್ರೆಸ್ ನಿಂದ ಈಗ ದೇಶದಲ್ಲಿ ಹಿಂದುಳಿದ ವರ್ಗಕ್ಕೆ ಮೋಸ ಮಾಡುವ ಕೆಲಸ ಆಗುತ್ತಿದೆ.ನಾವು ಹಿಂದುಳಿದ ವರ್ಗಗಳಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು ವಿಚಾರದ ಬಗ್ಗೆ ಮಾತನಾಡಿ ಪ್ರಕರಣದ ಕುರಿತು ಈಗಷ್ಟೇ ಮಧ್ಯಂತರ ವರದಿ ನನ್ನ ಬಳಿ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುತ್ತೇವೆ.ಅಲ್ಲಿ ಅಂತಾರಾಜ್ಯ ಟೆರಿಟರಿ ಇದೆ ಎಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣದ ಬಗ್ಗೆ ಮಾತನಾಡಿ  ಇದು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ‌ನಿರ್ಲಕ್ಷ್ಯ ಎಂದರು.

ರಾಜ್ಯ ಬಿಜೆಪಿ ಬೆಳವಣಿಗೆಗಳ ವಿಚಾರದ ಬಗ್ಗೆ ಮಾತನಾಡಿ ಕರ್ನಾಟಕದಲ್ಲಿ ಯುವ ಕಾರ್ಯಕರ್ತರ ಪಡೆ ಇದೆ.ಮತ್ತೆ ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಶರಾವತಿ ಪಂಪ್ ಸ್ಟೋರೇಜ್ ಗೆ ಕೇಂದ್ರ ಪರಿಸರ ಇಲಾಖೆ ಕ್ಲಿಯರೆನ್ಸ್ ಕೊಟ್ಟಿದೆ.2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸಹಾಯವಾಗಲಿದೆ ಎಂದರು.