ಬೆಂಗಳೂರು: ನಾನು ಒಬ್ಬ ಸಭಾಧ್ಯಕ್ಷನಾಗಿ ಶಾಸಕರ ಬೇಡಿಕೆ, ಅವರಿಗೆ ಅನುಕೂಲ ಮಾಡಿದ್ದೇನೆ ಎಂದು ವಿಧಾನಸೌಧದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದ್ದಾರೆ.
ರಿಕ್ಲೈನರ್ ಚೇರ್ ವ್ಯವಸ್ಥೆಗೆ ಕೆಲ ಶಾಸಕರ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು
ನಾನು ಒಬ್ಬ ಸಭಾಧ್ಯಕ್ಷನಾಗಿ ಶಾಸಕರ ಬೇಡಿಕೆ, ಅವರಿಗೆ ಅನುಕೂಲ ಮಾಡಿದ್ದೇನೆ. ಶಾಸಕರು ವೈರಿಗಳು ಅಲ್ಲ, ನಿಮ್ಮ ಕುಟುಂಬದಂತೆ ನೋಡಿ.
ಮನೆಗೆ ಹೋಗಿ ರೆಸ್ಟ್ ತಗೊಂಡು ಬರೋ ಬದಲು ಇಲ್ಲೇ ವ್ಯವಸ್ಥೆ ಮಾಡಿದ್ರೆ ಒಳಿತು. ಈ ಚೇರ್‌ಗಳು ಬಾಡಿಗೆ ಮಾತ್ರ, ಟೋಟಲ್ 4 ಲಕ್ಷ ಬಿಲ್ ಆಗಿದೆ ಅಷ್ಟೇ. 224 ಶಾಸಕರ ಅನುಕೂಲಕ್ಕೆ 4 ಲಕ್ಷ ಖರ್ಚು ಮಾಡೋದು ತಪ್ಪಾ? ಎಂದಿದ್ದಾರೆ.
ಮಸಾಜ್ ಚೇರ್ ಗೆ ಯಾವುದೇ ಚಾರ್ಜ್ ಇಲ್ಲ. ಕೊಡುವ ಸೌಲಭ್ಯ ಕೊಟ್ಟರೆ ತಪ್ಪೇನಿದೆ?
ಬಿಜೆಪಿ ನಾಯಕರೇ ಕೇಳಿಕೊಂಡಿದ್ರು ನಮಗೂ ಹಾಕಿಸಿ ಅಂತ. ಅಧಿವೇಶನದಲ್ಲಿ ಟೀ, ಕಾಫಿ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು
ನೀರು ಮಾತ್ರ ಕೊಡ್ತಿದ್ದೀವಿ.ಟೀ ಕಾಫಿ ಅಂತ ಹೊರಗೆ ಹೋಗಿ ಬರೋದು ಲೇಟ್ ಮಾಡ್ತಿದ್ರು
ಅದಕ್ಕೆ ಈ ಚರ್ಚೆ ಶುರುವಾಗಿದೆ ಎಂದ್ರು.
ರಿಕ್ಲೈನರ್ ಚೇರ್ ಸಂಖ್ಯೆ ಹೆಚ್ಚಳಕ್ಕೆ ಕೆಲ ಶಾಸಕರ ಮನವಿ ವಿಚಾರದ ಬಗ್ಗೆ ಮಾತನಾಡಿದ ಅವರು
224 ಶಾಸಕರಿಗೆ ರಿಕ್ಲೈನರ್ ಚೇರ್ ವ್ಯವಸ್ಥೆ ಮಾಡೋಕೆ ಆಗಲ್ಲ.ಮಾಡಿದ್ರೆ ಅಧಿವೇಶನದಲ್ಲಿ ಯಾರು ಇರ್ತಾರೆ?ಎಲ್ಲ ಶಾಸಕರಿಗೂ ರಿಕ್ಲೈನರ್ ಚೇರ್ ಹಾಕಿದ್ರೆ ಮಲಗಿಕೊಳ್ತಾರೆ, ಯಾರು ಚರ್ಚೆ ಮಾಡ್ತಾರೆ? ಎಂದಿದ್ದಾರೆ.
ಶಾಸಕರ ವೇತನ 50% ಹೆಚ್ಚಳಕ್ಕೆ ಮನವಿ ವಿಚಾರದ ಬಗ್ಗೆ ಮಾತನಾಡಿದ ಅವ್ರು ಇದರ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತೆ, ನನಗೆ ಗೊತ್ತಿಲ್ಲ ಎಂದ ಅವರು ಶಾಸಕರ ಕ್ಲಬ್ ನಿರ್ಮಾಣ ವಿಚಾರದ ಬಗ್ಗೆ ಮಾತನಾಡಿ ಹೌದು, ರೆಡಿ ಆಗುತ್ತೆ.ಸರ್ಕಾರಿ ಅಧಿಕಾರಿಗಳು, ಐಎಎಸ್ ಅಧಿಕಾರಿಗಳಿಗೆ ಕ್ಲಬ್ ಇದೆ.ಶಾಸಕರಿಗೆ ಇರಲಿಲ್ಲ, ಇರುವ ಕಟ್ಟಡವನ್ನೇ ಸರಿ ಮಾಡುತ್ತೇವೆ ಎಂದು ತಿಳಿಸಿದ್ರು.
ಸ್ಪೀಕರ್ ಯು.ಟಿ ಖಾದರ್ ಸಚಿವ ಸ್ಥಾನದ ಆಕಾಂಕ್ಷಿ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಸದ್ಯ ಸಭಾಧ್ಯಕ್ಷನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಆ ಕೆಲಸ ಮಾಡುತ್ತೇನೆ. ನನಗೆ ಯಾವಾಗ ರಾಜಕೀಯ ಬೇಸರ ಆಗುತ್ತೊ. ಆಗ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದಿದ್ದಾರೆ.