ಮನೆ Latest News ಅಧಿವೇಶನ ಮುಗಿದ ಬೆನ್ನಲ್ಲೇ ಸ್ಪೀಕರ್ ಯು ಟಿ ಖಾದರ್ ಸುದ್ದಿಗೋಷ್ಟಿ

ಅಧಿವೇಶನ ಮುಗಿದ ಬೆನ್ನಲ್ಲೇ ಸ್ಪೀಕರ್ ಯು ಟಿ ಖಾದರ್ ಸುದ್ದಿಗೋಷ್ಟಿ

0

ಬೆಂಗಳೂರು; ಅಧಿವೇಶನ ಮುಗಿದ ಬೆನ್ನಲ್ಲೇ ಸ್ಪೀಕರ್ ಯು ಟಿ ಖಾದರ್ ಇಂದು ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ೧೫ ದಿನಗಳ ಕಾಲ ೯೯ ಗಂಟೆ ೩೪ ನಿಮಿಷ ಕಾರ್ಯಕಲಾಪ ನಡೆದಿದೆ.ಬಹಳಷ್ಟು ಬಿಲ್ ಗಳು ಕೂಡ ಪಾಸ್ ಆಗಿವೆ. ಮಾನ್ಯ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದಲ್ಲಿ 14 ಮಾನ್ಯ ಸದಸ್ಯರುಗಳು ಒಟ್ಟು 08 ಗಂಟೆ 02 ನಿಮಿಷಗಳ ಕಾಲ ಭಾಗವಹಿಸಿದ್ದಾರೆ. ವಂದನಾ ನಿರ್ಣಯದ ಪ್ರಸ್ತಾವವನ್ನು ದಿನಾಂಕ: 17.03.2025 ರಂದು ಅಂಗೀಕರಿಸಲಾಗಿದೆ.2025-26 ಆಯವ್ಯಯ ಅಂದಾಜುಗಳನ್ನು ಮಾನ್ಯ ಮುಖ್ಯಮಂತ್ರಿಯವರು ದಿನಾಂಕ:07.03.2025 ರಂದು ಮಂಡಿಸಿರುತ್ತಾರೆ ಎಂದ್ರು.

ಆಯವ್ಯಯದ ಸಾಮಾನ್ಯ ಚರ್ಚೆಯಲ್ಲಿ 80 ಮಾನ್ಯ ಸದಸ್ಯರುಗಳು ಒಟ್ಟು 28 ಗಂಟೆ 56 ನಿಮಿಷಗಳ ಕಾಲ ಭಾಗವಹಿಸಿದ್ದಾರೆ. ದಿನಾಂಕ:21.03.2025 ರಂದು ಮಾನ್ಯ ಮುಖ್ಯಮಂತ್ರಿಯವರು ಉತ್ತರ ನೀಡಿದ ನಂತರ ಮತಕ್ಕೆ ಹಾಕಿ ಅಂಗೀಕರಿಸಲಾಯಿತು. 2024-25ನೇ ಸಾಲಿನ ಪೂರಕ ಅಂದಾಜುಗಳ (ಮೂರನೇ ಹಾಗೂ ಅಂತಿಮ ಕಂತು) ಬೇಡಿಕೆಗಳನ್ನು ದಿನಾಂಕ:19.03.2025 ರಂದು ಮಂಡಿಸಿದ್ದು ದಿನಾಂಕ:21.03.2025 ರಂದು ಮತಕ್ಕೆ ಹಾಕಿ ಆಂಗೀಕರಿಸಲಾಗಿದೆ. ಇತ್ತೀಚೆಗೆ ನಿಧನ ಹೊಂದಿದ ಗಣ್ಯರುಗಳಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ. ಅಂಗೀಕರಿಸಲಾಗಿದೆ.ಮಾನ್ಯ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ ಎಂದು ತಿಳಿಸಿದ್ರು.

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷದ ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳ ಮೇಲಿನ ವರದಿಯನ್ನು (2025ರ ವರದಿ ಸಂಖ್ಯೆ:1) ಸದನದಲ್ಲಿ ಮಂಡಿಸಲಾಗಿದೆ. 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪರಿಶೀಲಿಸಿ, ವರದಿ ನೀಡಲು ರಚಿಸಲಾಗಿದ್ದ ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯ ವರದಿ ಮಂಡಿಸಲಾಗಿದೆ.  ಕರ್ನಾಟಕ ವಿಧಾನ ಸಭೆಯ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ 2024-25ನೇ ಸಾಲಿನ ಐದನೇ ವರದಿ ಮಂಡಿಸಲಾಗಿದೆ. ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯ 2023-24ನೇ ಸಾಲಿನ ನಾಲ್ಕನೇ ವರದಿ ಮಂಡಿಸಲಾಗಿದೆ.ಕರ್ನಾಟಕ ವಿಧಾನಸಭೆಯ ಅಂದಾಜುಗಳ ಸಮಿತಿಯ 2024-25ನೇ ಸಾಲಿನ ಎರಡನೇ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದ್ರು.

ರಾತ್ರಿ ಹಾಗೂ ಬೆಳಗ್ಗೆ ೮ ಗಂಟೆಗೆ ಸದನ ಮಾಡಿದರು ಕೂಡ ಎಲ್ಲರೂ ಭಾಗವಹಿಸಿದ್ದರು.ಮಂತ್ರಿಗಳೂ ಕೂಡ ಸಮಯಕ್ಕೆ ಬಂದಿರುವುದು ಸದನಕ್ಕೆ ಗೌರವ ಬರುವ ಕೆಲಸ ಆಗಿದೆ.ಕ್ಷೇತ್ರದ ಜನರ ಸಮಸ್ಯೆ ಚರ್ಚೆ ಮಾಡಲು ಬೆಳಗ್ಗೆ ಬಂದು ಕೂತಿದ್ದರು. ರಾತ್ರಿ ೧೦.೪೫ ಆದ್ರೂ ಶಾಸಕರು ಕ್ಷೇತ್ರದ ಸಮಸ್ಯೆ ಚರ್ಚೆಗೆ ಇದ್ದರು. ಎಲ್ಲ ನಮ್ಮ ಸರ್ಕಾರಕ್ಕೆ ಪ್ರತಿಪಕ್ಷ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ.ಅಧಿಕಾರಿಗಳು ಮಧ್ಯರಾತ್ರಿ ತನಕ ಕೆಲಸ ಮಾಡಿ ಬೆಳಗ್ಗೆ ಮತ್ತೆ ಬಂದಿದ್ದಾರೆ ಎಂದು ತಿಳಿಸಿದ್ರು.

ಪೀಠಕ್ಕೆ ಅಗೌರವ ತಂದಿದ್ದನ್ನು ಸಹಿಸಲು ಸಾಧ್ಯ ಇದೆಯಾ?; ಸ್ಪೀಕರ್ ಯು ಟಿ ಖಾದರ್ ಪ್ರಶ್ನೆ

ಬೆಂಗಳೂರು; ಪೀಠಕ್ಕೆ ಅಗೌರವ ತಂದಿದ್ದನ್ನು ಸಹಿಸಲು ಸಾಧ್ಯ ಇದೆಯಾ? ಎಂದು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಪ್ರಶ್ನೆ ಮಾಡಿದ್ದಾರೆ.

ಅಧಿವೇಶನ ನಿನ್ನೆಗೆ ಮುಕ್ತಾಯವಾಗಿದ್ದು ಇಂದು ಖಾದರ್ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ೧೮ ಮಂದಿ ಶಾಸಕರ ಅಮಾನತು ವಿಚಾರದ ಬಗ್ಗೆ ಮಾತನಾಡಿದ ಅವರು  ಘಟನೆ ನಡೆದಿದೆ, ಸದನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಸದನದಲ್ಲಿ ಅಧ್ಯಕ್ಷರ ಪೀಠಕ್ಕಿಂತ ಯಾವುದೂ ಇಲ್ಲ. ಅವಧಿ ಎಷ್ಟಿದೆ ಅದಕ್ಕೆ ಎನ್ನುವದಲ್ಲ. ಯಾವ ಒತ್ತಡ ಕೂಡ ಇರಲಿಲ್ಲ.ಜನಪ್ರತಿನಿಧಿಗಳು ಜನರಿಂದ ಆಯ್ಕೆಯಾಗಿ ಬಂದಿದ್ದಾರೆ ಎಂಬುದು ಗೊತ್ತಿದೆ. ಅದಕ್ಕೆ ತಕ್ಕ ಹಾಗೆ ಶಾಸಕರು ನಡೆದುಕೊಳ್ಳಬೇಕಲ್ವಾ? ಎಂದಿದ್ದಾರೆ.

ಇದು ಬಿಜೆಪಿ ಶಾಸಕರು ಮಾಡಿದ್ದು ಎರಡನೇ ಬಾರಿಗೆ. ಪೀಠಕ್ಕೆ ಅಗೌರವ ತಂದಿದ್ದನ್ನು ಸಹಿಸಲು ಸಾಧ್ಯ ಇದೆಯಾ?.ನಾನು ಶಾಸಕರ ಮೇಲಿನ ದ್ವೇಷದಿಂದ ಮಾಡಿಲ್ಲ. ಯಾವುದೋ ಕೋಪ ದ್ವೇಷದಿಂದ ಮಾಡಿದ್ದಲ್ಲ. ಅದು ಶಿಕ್ಷೆ ಅಂತಲ್ಲ ಮುಂದಿನ ದಿನಗಳಲ್ಲಿ ಅತ್ಯುತ್ತಮ ಜನಪ್ರತಿನಿಧಿಯಾಗಿ ಬಂದಿದ್ದು ತಿದ್ದಿಕೊಳ್ಳಬೇಕು. ೧೮ ಶಾಸಕರು ಮನವಿ ಮಾಡಿಕೊಂಡರೆ ಮುಂದಿನ ನಿರ್ಧಾರ ಮಾಡುತ್ತೇನೆ. ತಾವು ತಪ್ಪು ಮಾಡಿದ್ದೇವೆ ಎಂಬ ಭಾವನೆಯಾದರೂ ಅವರಿಗೆ ಬರಬೇಕಿತ್ತಲ್ವಾ?.ತಪ್ಪಿನ ಅರಿವು ಸ್ವಲ್ಪವಾದರೂ ಇರಬೇಕಿತ್ತಲ್ವಾ?. ಮತ್ತೆ ಸದನ ಶುರು ಆದ ಮೇಲೂ ಕೂಡ ಹಾಗೆಯೇ ವರ್ತಿಸಿದರು.ನಾಳೆ ಇಲ್ಲಿ ಹೀಗೆ ಮಾಡುವ ಶಾಸಕರು ಜಿಲ್ಲಾ ಮಟ್ಟದ ಮೀಟಿಂಗುಗಳಲ್ಲೂ ಹೀಗೇ ಮಾಡಿದರೆ ಹೇಗೆ ಎಂದು ಖಾದರ್ ಪ್ರಶ್ನಿಸಿದ್ದಾರೆ.