ಬೆಂಗಳೂರು; ಅಧಿವೇಶನ ಕುರಿತು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಸುದ್ದಿಗೋಷ್ಟಿ ನಡೆಸಿದ್ರು.
ಈ ವೇಳೆ ಮಾತನಾಡಿದ ಅವರು ಆಡಳಿತ ಪಕ್ಷ & ವಿರೋಧ ಪಕ್ಷ ಸದಸ್ಯರನ್ನ ಅಭಿನಂದಿಸುತ್ತೇನೆ. ಕೆಲ ಸಮಸ್ಯೆಗಳಿದ್ದರೂ ಒಟ್ಟಾಗಿ ಟೀಮ್ ಆಗಿ ಕೆಲಸ ನಡೆದಿದೆ. ಜನಸಂದಣಿ ಬಿಲ್ & ರೆವಿನ್ಯೂ ಬಿಲ್ ಪಾಸ್ ಆಗಿಲ್ಲ. ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರ ನೇಮಕವಾಗಬೇಕಿದೆ. ಕೊನೆಯ ಅಧಿವೇಶನದಲ್ಲಿ ರಿಜೆಕ್ಟ್ ಆಗಿದ್ದ ಸಹಕಾರ ಇಲಾಖೆ ಸೌಹಾರ್ದ ಬಿಲ್ ಕೂಡ ಈ ಬಾರಿ ಚರ್ಚೆ ಆಗಿ ಪಾಸ್ ಆಗಿದೆ. ಎಲ್ಲ ಸದಸ್ಯರಿಗೂ ಸಮ ಅವಕಾಶ ಕೊಡಲಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ವಿಸ್ತೃತ ಚರ್ಚೆ ಆಗಿದೆ ಎಂದರು.
ಅಖಿಲ ಭಾರತ ಸ್ಪೀಕರ್ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿದೆ. 11ನೇ ತಾರೀಖು ಸಂಜೆ ಸಿಎಂ ಉದ್ಘಾಟನೆ ಮಾಡಲಿದ್ದಾರೆ. ಒಟ್ಟು 03 ದಿನಗಳ ಕಾಲ ಸಮಾವೇಶ ನಡೆಯಲಿದೆ. ತಾಜ್ ವೆಸ್ಟ್ ಎಂಡ್ ನಲ್ಲಿ 12 & 13 ರಂದು ಚರ್ಚೆ ಏರ್ಪಡಿಸಲಾಗಿದೆ. 14ನೇ ಬೆಳಗ್ಗೆ ಮೈಸೂರು ಪ್ರವಾಸ ನಡೆಯಲಿದೆ ಎಂದರು. ಇದೇ ವೇಳೆ ವಿಧಾನಸಭೆ ಸೆಕ್ರಟರಿ -2 ನೇಮಕ ಪೆಂಡಿಂಗ್ ವಿಚಾರದ ಬಗ್ಗೆ ಮಾತನಾಡಿದ ಸ್ಪೀಕರ್ ಅದು ಅಡ್ಮಿನಿಸ್ಟ್ರೇಟೀವ್ ಮಾಡುವುದು, ಇದು ನಮ್ಮ ಆಡಳಿತಕ್ಕೆ ಸಂಬಂಧಿಸಿದ್ದು. ಸದ್ಯಕ್ಕೆ ಅದು ಫ್ರಿಡ್ಜ್ ನಲ್ಲಿದೆ. ಅದನ್ನ ಮಾಡೋಕೆ ಸಮಯ ಸಿಗ್ತಿಲ್ಲ.. ನಮಗೆ ಬೇರೆ ಬೇರೆ ಕೆಲಸಗಳಿದ್ದವು. ಸದನ ಬಂತು ಬೇರೆ ವಿಷಯಗಳ ಬಂದ್ವು.. ಹೀಗಾಗಿ ಅದು ಫ್ರೀಜರ್ನಲ್ಲಿದೆ. ಹಾಗಾಗಿ ಅದರಲ್ಲಿ ನಾವು ಬ್ಯುಸಿಯಾಗಿದ್ವಿ. ಫ್ರೀ ಇದ್ದಾಗ ಅದರ ಬಗ್ಗೆ ಗಮನಹರಿಸ್ತೇವೆ ಎಂದಿದ್ದಾರೆ.
ಕಾಮನ್ ವೆಲ್ತ್ ನಲ್ಲಿ ಪ್ರಜಾಪ್ರಭುತ್ವದ ಉಳಿವು ಚರ್ಚೆಯಾಗಲಿದೆ. ರಾಜಕೀಯವಾಗಿ ಚರ್ಚೆಯಾಗುವುದಿಲ್ಲ ಎಂದ ಅವರು ಈ ಬಾರಿ 85% ಶಾಸಕರ ಹಾಜರಾತಿ ಇತ್ತು. ಎಲ್ಲ ಶಾಸಕರು ಸಹಕಾರವನ್ನ ಕೊಟ್ಟಿದ್ದಾರೆ ಎಂದಿದ್ದಾರೆ.











