ಮನೆ Latest News ಬೆಳಗಾವಿ ಅಧಿವೇಶನ ಕುರಿತು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಸುದ್ದಿಗೋಷ್ಟಿ

ಬೆಳಗಾವಿ ಅಧಿವೇಶನ ಕುರಿತು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಸುದ್ದಿಗೋಷ್ಟಿ

0

ಬೆಂಗಳೂರು; ಬೆಳಗಾವಿ ಅಧಿವೇಶನ ಕುರಿತು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಕೆಲವೊಂದು ಗದ್ದಲಗಳು ನಡೆದರೂ ಸಿಎಂ ಸೇರಿ‌ ಎಲ್ಲರ ಜೊತೆಗೂ ಚರ್ಚೆ ನಡೆಸಿ‌ ಅಧಿವೇಶನ ನಡೆಸಲಾಗಿದೆ. 10 ದಿನಗಳಲ್ಲಿ ಸುಮಾರು 57 ಗಂಟೆ 35 ನಿಮಿಷಗಳ‌ ಕಾಲ ಕಲಾಪ ನಡೆದಿದೆ. ಒಟ್ಟು 23 ವಿಧೇಯಕಗಳನ್ನ ಮಂಡಿಸಲಾಗಿದೆ. 22 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ. ಒಟ್ಟು 2109 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 368 ಸುಚನೆಗಳ ಪೈಕಿ 228 ಸೂಚನೆಗಳಿಗ ಉತ್ತರವನ್ನ ಸ್ವೀಕರಿಸಲಾಗಿದೆ. ಕಲಾಪವನ್ನ ಒಟ್ಟಾರೆ‌ 30 ಸಾವಿರ ಮಂದಿ ವೀಕ್ಷಿಸಿದ್ದಾರೆ. ದ್ವೇಷ ಭಾಷಣ ಬಿಲ್ ನಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು ಒಂದು ಉತ್ತಮ ಬಿಲ್ ಬಂದಾಗ ಚರ್ಚೆಗೆ ಕೊಟ್ಟಿದ್ವಿ. ಹಿರಿಯ ನಾಯಕರು ವಿಪಕ್ಷ ನಾಯಕರು‌ ಇದ್ದಾಗಲೇ ಬಾವಿಗಿಳಿದಿದ್ರು ಎಂದರು.

30 ಸಾವಿರ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಅಧಿವೇಶನ ವೀಕ್ಷಣೆ ಮಾಡಿದ್ದಾರೆ. ಉದ್ಯಾನವನದ ಉದ್ಘಾಟನೆ ಮಾಡಲಾಗಿದೆ. ವಿಶ್ವದಲ್ಲೇ ಎರಡನೇ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ ಕಾರ್ಯಕ್ರಮ ಮಾಡಲಾಗಿದೆ. ಅಧಿವೇಶನಕ್ಕೆ ಸಹಕಾರ ಮಾಡಿದ ಎಲ್ಲರಿಗೂ ಧನ್ಯವಾದ ಹೇಳ್ತೀನಿ ಎಂದ ಅವರು ದ್ವೇಷ ಭಾಷಣ ಬಿಲ್ ಆತುರವಾಗಿ ಅಂಗೀಕಾರ ಆರೋಪ ವಿಚಾರದ ಬಗ್ಗೆ ಮಾತನಾಡಿ ಚರ್ಚೆಗೆ ನಾವು ಅವಕಾಶ ಮಾಡಿಕೊಟ್ಟಿದ್ದೆವು. ಬೇರೆ ಬೇರೆ ವಿಷಯದ ಬಗ್ಗೆ ಚರ್ಚೆ ಮಾಡಿದ್ದು ಅಲ್ಲಿ ಗೊಂದಲ ಆಯ್ತು. ಚರ್ಚೆ ನಡೆಯೋವಾಗ ವಿಪಕ್ಷಗಳು ಬಾವಿಗೆ ಬಂದರೆ ಏನ್ ಮಾಡೋದು. ಮಹತ್ವ‌ ಇರೋ ಬಿಲ್ ಬಗ್ಗೆ ಚರ್ಚೆ ಮಾಡಬೇಕು ಅಲ್ಲವಾ. ಗಡಿಬಿಡಿಯಿಂದ ಬಿಲ್ ಪಾಸ್ ಆಗಿಲ್ಲ. ವಿಪಕ್ಷಗಳ ವರ್ತನೆಯಿಂದ ಬಿಲ್ ಪಾಸಾಯ್ತು.ಚರ್ಚೆಗೆ ಅವಕಾಶ ಇದ್ದರು ವಿಪಕ್ಷಗಳು ಚರ್ಚೆ ಮಾಡಿಲ್ಲ. ಬಾವಿಗಿಳಿದು ಪ್ರತಿಭಟನೆ ಮಾಡಿದ್ರೆ ಇನ್ನೇನು ಮಾಡಲು ಆಗೊಲ್ಲ. ಬಿಲ್ ಪಾಸ್ ಆಯ್ತು ಎಂದು ದ್ವೇಷ ಬಿಲ್ ಪಾಸ್ ಮಾಡಿದ್ದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ ಖಾದರ್.

ಬೆಳಗಾವಿ ಸ್ಪೀಕರ್ ಪೀಠಕ್ಕೆ 43 ಲಕ್ಷ ಖರ್ಚು ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಅದನ್ನ ಮಾಡಿಲ್ಲ. ಕರ್ನಾಟಕ ಸ್ಟೇಟ್ಸ್ ಫಾರೆಸ್ಟ್ ಡೆವಲಪ್ಮೆಂಟ್ ಕಾರ್ಪೋರೇಷನ್ ಮತ್ತು ಲೋಕೋಪಯೋಗಿ ಇಲಾಖೆ ಮಾಡಿದ್ದು. ಅವರಿಗೆ ಅದರ ಬಗ್ಗೆ ಗೊತ್ತಿದೆ.ಪೀಠದ ಇತಿಹಾಸ ಗೊತ್ತು. ಖರ್ಚಿನ ಬಗ್ಗೆ ನಮಗೆ ಗೊತ್ತಿಲ್ಲ. ನಮ್ಮ ಮಾದರಿಯನ್ನ ಯಪಿ ಅಧ್ಯಕ್ಷರು ಇಷ್ಟಪಟ್ಟು ಅಲ್ಲಿ ಮಾಡಿಸ್ತಾ ಇದ್ದಾರೆ. ಇದು ನಮಗೂ ಹೆಮ್ಮೆ ಎಂದು ತಿಳಿಸಿದರು. ದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಬಗ್ಗೆ ತಪ್ಪು  ಮಾಹಿತಿ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಅವರು ಅವರು ತಪ್ಪು ಕೊಟ್ಟಿದ್ದರು. ಸದನದಲ್ಲಿ ನಂತರ‌ ಕ್ಷಮೆ ಕೇಳಿದ್ರು. ಯಾಕೆ ಏನು ಅಂತ ಅವರು ಇಲಾಖೆಯಲ್ಲಿ ತನಿಖೆ ಮಾಡೋದಾಗಿ ಹೇಳಿದ್ದಾರೆ. ಅವರು ಅದು ಮಾಡ್ತಾರೆ ಎಂದು ತಿಳಿಸಿದರು.