ಬೆಂಗಳೂರು; ನೆಹರೂ ತಾರಾಲಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಾಣಗೊಂಡಿರುವ ಯು ಆರ್ ರಾವ್ ಭವನ ಲೋಕಾರ್ಪಣೆಗೊಂಡಿದೆ. ಡಿಸಿಎಂ ಡಿಕೆಶಿವಕುಮಾರ್, ಸ್ಪೀಕರ್ ಯುಟಿ ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಎಂಸಿ ಸುಧಾಕರ್, ಇಲಾಖೆ ಸಚಿವ ಎನ್ ಎಸ್ ಭೋಸರಾಜ್ ಯು ಆರ್ ರಾವ್ ಭವನ ಲೋಕಾರ್ಪಣೆ ಮಾಡಿದರು.
ಬಳಿಕ ಡಿಕೆಶಿ ಬಾಹ್ಯಾಕಾಶ ವೀಕ್ಷಣೆಯ ಟೆಲಿಸ್ಕೋಪ್ ಬಳಸಿದರು. ವಸತಿ ಶಾಲೆ ಮಕ್ಕಳಿಗೆ ಟೆಲಿಸ್ಕೋಪ್ ಗಳ ವಿತರಣೆ ಮಾಡಲಾಯಿತು. ಈ ವೇಳೆ ಡಿ ಕೆ ಶಿವಕುಮಾರ್ ತಾವೇ ಮೊದಲು ವೀಕ್ಷಣೆ ಮಾಡಿದರು. ಯು ಆರ್ ರಾವ್ ಭವನ ಉದ್ಘಾಟನೆ ವೇಳೆ ವೀಕ್ಷಣೆ ಮಾಡಿದರು. ಶಾಲಾ ಮಕ್ಕಳಿಗೆ ಸಚಿವ ಬೋಸರಾಜು, ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶಸ್ತಿ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದಂ ಎಂದು ಶ್ಲೋಕದ ಮೂಲಕವೇ ಭಾಷಣ ಆರಂಭಿಸಿದರು. ನು ಶಾಲೆ ಓದುವಾಗ ಫೋನೂ ಇರಲಿಲ್ಲ, ಕ್ಯಾಲ್ಕುಲೇಟರ್ ಕೂಡ ಇರಲಿಲ್ಲ.ಈಗೆಲ್ಲ ಕಂಪ್ಯೂಟರ್ ಬಂದುಬಿಟ್ಟಿದೆ ಫೋನ್ ಗಳೂ ಬಂದು ಬಿಟ್ಟಿದೆ. ನಾನು ಹುಡುಗನಾಗಿದ್ದಾಗ ಶಿಕ್ಷಣಕ್ಕೆ ಗಮನ ಕೊಡಲಿಲ್ಲ ಆಗ ನನಗೆ ಅದರ ವ್ಯಾಲ್ಯೂ ಗೊತ್ತಿರಲಿಲ್ಲ. ಶಿಕ್ಷಣದ ಮಹತ್ವ ಗೊತ್ತಾಗಿದ್ದೇ ನನಗೆ ಎಂಎಲ್ಎ ಆದಮೇಲೆ. ಬೇರೆ ನಾಯಕರು ವಿಧಾನಸಭೆಯಲ್ಲಿ ಮಾತಾಡುವಾಗ ನಾನು ಬೆಬ್ಬೆಬ್ಬೆಬ್ಬೆ ಅಂತಿದ್ದೆ. ನನ್ನ ಬೈ ಚಾಯ್ಸ್ ಎಜುಕೇಷನಿಸ್ಟ್. ನಾನು ಡಿಗ್ರಿ ಮಾಡಿದ್ದು ೪೭ ನೇ ವಯಸ್ಸಲ್ಲಿ. ಮಂತ್ರಿ ಆದಾಗಲೂ ನನಗೆ ಸಂತೋಷ ಆಗಿರಲಿಲ್ಲ. ಮೈಸೂರು ಓಪನ್ ಯುನಿವರ್ಸಿಟಿ ಯಲ್ಲಿ ಡಿಗ್ರಿ ಸರ್ಟಿಫಿಕೇಟ್ ತೆಗೆದುಕೊಂಡಾಗ ಸಂತೋಷ ಆಗಿದ್ದು.ನನ್ನಪ್ಪನಿಗೆ ಇಂಜಿನಿಯರ್ ಆಗಬೇಕು ನಾನು ಅಂತ ಆಸೆ ಇತ್ತು. ನೃಪ ದಪ ದಾಯಾದಿಗಳು ಕದಿಯದ, ನೀರಲ್ಲಿ ನೆನೆಯದ, ಬೆಂಕಿಯಲ್ಲಿ ಸುಡದ ಗುಪ್ತ ನಿಧಿ ಒಂದೇ ಅದು ವಿದ್ಯೆ ಎಂದರು.
ಇದೇ ವೇಳೆ ಕಂದಾಯ ಸಚಿವ ಕೃಷ್ಣಭೈರೇಗೌಡ ಕೇಂದ್ರ ಸರ್ಕಾರದಿಂದ ಕ್ಷೇತ್ರ ವಿಂಗಡಣೆ ಗೆ ವಿರೋಧ ವಿಚಾರದ ಬಗ್ಗೆ ಮಾತನಾಡಿ ಕೇಂದ್ರ ಗೃಹ ಸಚಿವರು ಸೀಟು ಕಡಿಮೆ ಮಾಡಲ್ಲ. ಬೇರೆ ರಾಜ್ಯದ ಕ್ಷೇತ್ರ ಹೆಚ್ಚು ಮಾಡುತ್ತೇವೆ ಎಂದಿದ್ದಾರೆ. ಇದ್ರಿಂದ ದಕ್ಷಿಣ ಭಾರತದ ರಾಜ್ಯಗಳ ಶಕ್ತಿ ಕಡಿಮೆಯಾಗುತ್ತದೆ. ಪಾರ್ಲಿಮೆಂಟ್ ನಲ್ಲಿ ಧ್ವನಿ ಅಡಗಿಸವ ಪ್ರಯತ್ನ ಇದು. ಹೆಚ್ಚು ತೆರಿಗೆ ಕಟ್ಟು ರಾಜ್ಯಗಳಿಗೆ ಶಿಕ್ಷೆ, ನಾವು ದುಡಿಯುತ್ತಲೇ ಹೋಗಬೇಕು. ಜನಸಂಖ್ಯೆ ಕಡಿಮೆ ಮಾಡಿದ್ದಕ್ಕೆ ಇದೊಂದು ರೀತಿ ಶಿಕ್ಷೆ. ಉತ್ತರ ಭಾರತದ ರಾಜ್ಯಗಳ ಜನಸಂಖ್ಯೆ ಹೆಚ್ಚಿಗೆ ಇದೆ, ಇದ್ರಿಂದ ಅವರ ಕ್ಷೇತ್ರ ಸಹ ಹೆಚ್ಚಿಗೆ ಆಗುತ್ತದೆ. ಒಕ್ಕೂಟದ ವ್ಯವಸ್ಥೆ ನಿರ್ನಾಮ ಆಗುತ್ತದೆ ಎಂದರು.











