ತುಮಕೂರು ಲೋಕಸಭಾ ಕ್ಷೇತ್ರದ “ನೂತನ ಜನಸಂಪರ್ಕ ಕಚೇರಿ” ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದ ಬಳಿಕ ಕೇಂದ್ರದ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ, ಕ್ಷೇತ್ರದ ಶಾಸಕರು, ಮಾಜಿ ಶಾಸಕರು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಳಿಕ ಮಾಧ್ಯಮಗೋಷ್ಠಿ ನಡೆಸಿ, ಜಿಲ್ಲೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ, ಶಾಸಕರಾದ ಶ್ರೀ ಜ್ಯೋತಿ ಗಣೇಶ್ ರವರು, ಶ್ರೀ ಸುರೇಶ್ ಗೌಡರವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಚಿದಾನಂದರವರು, ಮಾಜಿ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರು, ಜಿಲ್ಲೆಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಅದಕ್ಕೂ ಮುನ್ನ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿರವರ ಗದ್ದುಗೆಯ ಆಶೀರ್ವಾದ ಪಡೆದು, ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳವರು, ನಿಡಸೋಸಿ ಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡೆಯಲಾಯಿತು.
ತುಮಕೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಕಚೇರಿಗೆ ನೀಡಿದ್ದ ಕಟ್ಟಡ ವಾಪಸ್ ಪ್ರಕರಣ;ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ ಭೇಟಿ
ತುಮಕೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಕಚೇರಿಗೆ ನೀಡಿದ್ದ ಕಟ್ಟಡ ವಾಪಸ್ ಪ್ರಕರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ ಜಿ. ಪರಮೇಶ್ವರ್ ನಿವಾಸಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ ಭೇಟಿ ನೀಡಿದರು .ಸರ್ಕಾರದಿಂದ ಕಟ್ಟಡ ವಾಪಸ್ ಪಡೆದ ಬಗ್ಗೆ ಚರ್ಚೆಗಾಗಿ ಸೋಮಣ್ಣ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ರು.
ಬಳಿಕ ಮಾತನಾಡಿದ ಕೇದಂರ್ ಸಚಿವ ವಿ ಸೋಮಣ್ಣ ಪರಮೇಶ್ವರ್ ತಂದೆ ನನಗೆ ದೇವರು ಇದ್ದಂಗೆ.ಅನಿರೀಕ್ಷಿತವಾಗಿ ನಾನು ತುಮಕೂರಿಗೆ ಹೋಗಿದ್ದು. ಸಣ್ಣಪುಟ್ಟ ಸಮಸ್ಯೆಗಳಾಗಿವೆ, ನಾನು ಈಗಾಗಲೇ ಸಿಎಂ ಜೊತೆ ಮಾತಾಡಿದ್ದೇನೆ.ಕಚೇರಿ ಮುಂದುವರಿಸುವ ಒಪ್ಪಿಗೆ ನೀಡಿದ್ದಾರೆ ಎಂದು ಸೋಮಣ್ಣ ತಿಳಿಸಿದ್ರು. ಅಲ್ಲದೇ ನಾನು ನಿನ್ನೆಯಿಂದ ಏನೂ ಮಾತಾಡಿಲ್ಲ.ಎಲ್ಲವೂ ಸರಿ ಹೋಗಿದೆ.ಅವರ ತಂದೆ ನನಗೆ ತಂದೆ ಇದ್ದಂತೆ.ಸಹಜವಾಗಿ ಇದೆಲ್ಲಾ ರಾಜಕಾರಣದಲ್ಲಿ ಇದ್ದಿದ್ದೆ.ಸಿಎಂ ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟಿದ್ದಾರೆ.ರಜೆ ಇದ್ದಾಗ ಬಂದು ಹೋಗ್ತೀನಿ.ನಾನು, ಪರಮೇಶ್ವರ್ ಅಣ್ಣ ಜೊತೆಯಲ್ಲಿ ಇದ್ದವರು ಎಂದರು.
ಇನ್ನು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನನಗೆ ಮಾಹಿತಿ ಇಲ್ಲ.ಒಂದು ಸತ್ಯ. ಪ್ರಕೃತಿ ವಿರುದ್ಧ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದರು. ಇನ್ನು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದರು.ಸಿದ್ದರಾಮಯ್ಯನವರು ನುರಿತ ರಾಜಕಾರಣಿ.ಕೆಲವು ಸಂದರ್ಭದಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ.ಕಾನೂನಿನ ಕೆಲಸ ಕಾನೂನು ಮಾಡುತ್ತೆ.ಸಿದ್ದರಾಮಯ್ಯ ಸಾಹೇಬ್ರು ಸಹ ಅವರೇನು ಮಾಡ್ಬೇಕು ಮಾಡ್ತಾರೆ.ಒಂದು ಸತ್ಯ, ಕಾನೂನಿಗಿಂತ ನಾವ್ಯಾರು ದೊಡ್ಡವರಲ್ಲ.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ದೂರದೃಷ್ಟಿಯ ಬ್ರಹ್ಮಾಸ್ತ್ರ ಏನಿದೆ?ಅದು ಯಾರ್ಯಾರಿಗೆ ಏನಾಗಿದೆ ಅನ್ನೋದಕ್ಕಿಂತ ಹೆಚ್ಚಾಗಿ,ಕಾನೂನು ತನ್ನ ಕೆಲಸವನ್ನ ತಾನು ಮಾಡ್ತದೆ. ನನಗೂ 45 ವರ್ಷ ರಾಜಕೀಯ ಅನುಭವ ಇದೆ.ಒತ್ತಾಯ ಮಾಡೋದು, ಮತ್ತೊಂದು ಮಾಡೋದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಸಾಹೇಬ್ರು ನುರಿತ ರಾಜಕಾರಣಿ, ಬುದ್ದಿವಂತರಿದ್ದಾರೆ. ನಾನು ಅವರು ಬಹಳ ಆತ್ಮೀಯರಾಗಿ ಕೆಲಸ ಮಾಡಿದ್ದೇವೆ.ನಿನ್ನೆನೂ ಸಹ ಅವರ ಜೊತೆ ಮಾತನಾಡಿದಾಗ,ಅವರು ಮಾತನಾಡಿದ್ದನ್ನ ನಾನು ಬಹಳ ಆನಂದದಿಂದ ಸ್ವೀಕಾರ ಮಾಡಿದ್ದೀನಿ.ಬಾಕಿದ್ದೇಲ್ಲಾ ಕಾನೂನು ನೋಡುತ್ತೆ,ಕಾನೂನು ಏನು ಹೇಳುತ್ತೆ ಅದು ಆಗುತ್ತೆ.ಬಿಡು ಗುರು, ಒಂದು ಕುಟುಂಬ ಅಂದ ಮೇಲೆ ಐದು ಬೆರಳು ಒಂದೇ ಸಮ ಇದಿಯಾ.ಒಂದೊಂದು ಸರಿ ಆಗುತ್ತೆ.ನಮ್ಮ ಅವರ ಆತ್ಮೀಯತೆ ಅನ್ನೋದಕ್ಕಿಂತ ಹೆಚ್ಚಾಗಿ,ಈ ಭಾಗದ ಜನರ ಋಣ ತೀರಿಸೋದು ಇದೆ.ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಋಣ ತಿರಿಸಬೇಕಿದೆ ಎಂದರು.
ಅಲ್ಲದೇ ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿತಾರಾ ಎಂಬ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಆ ತೀರ್ಮಾನವನ್ನ ಕಾಂಗ್ರೆಸ್ ಪಾರ್ಟಿ ಮಾಡುತ್ತೆ..ನಾವ್ಯಾರು ಹೇಳೋಕೆ.ನೀವೇನು ಹೇಳಿದ್ರಲ್ಲ, ಆ ರೀತಿಯಾಗಿ ಆದ್ರೆ ನನಕ್ಕಿಂತ ಜಾಸ್ತಿ ಆನಂದ ಪಡೋರು ಬೇರೆ ಯಾರು ಇಲ್ಲ ಎನ್ನುತ್ತಾ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲಿ ಎಂದು ಸೋಮಣ್ಣ ಹೇಳಿದ್ದಾರೆ. ಆ ತರ ಸನ್ನಿವೇಶ, ಸಂದರ್ಭ ನಮಗೆ ಗೊತ್ತಿಲ್ಲ.ನಾನು ಆ ತರ ಸಣ್ಣತನದಲ್ಲಿ ಬೇರೆಯವರ ಬಗ್ಗೆ ಮಾತನಾಡುವ ವ್ಯಕ್ತಿ ಅಲ್ಲ.ನಾನು 45 ವರ್ಷ ಮಣ್ಣು ಹೊತ್ತಿದ್ದೀನಿ.ಸೈಕಲ್ ತುಳಿದಿದ್ದೀನಿ.ನನ್ನದೇ ಆದಂತಹ ದೂರದೃಷ್ಟಿ ಇದೆ.ಜಿಲ್ಲೆಯ ಅಭಿವೃದ್ಧಿಗೆ ಎಲ್ಲರು ಕೆಲಸ ಮಾಡೋಣ.ಕಾನೂನು ತನ್ನ ಕೆಲಸವನ್ನ ತಾನು ಮಾಡುತ್ತೆ ಎಂದು ತುಮಕೂರಿನಲ್ಲಿ ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಪರಮೇಶ್ವರ್ ಅವರ ತಂದೆ ನನಗೆ ಇನ್ಸ್‌ಪಿರೇಷನ್ ಎಂದರು. ಇನ್ನು ಸಂಸದರ ನೂತನ ಕಚೇರಿಗೆ ಕೇಂದ್ರ ಜಲ ಸಂಪನ್ಮೂಲ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಭೇಟಿ ನೀಡಿದರು. ನಗರದ ಪ್ರವಾಸಿ ಮಂದಿರದ ಹಳೆಯ ಕಟ್ಟಡವನ್ನ ಆಧುನಿಕವಾಗಿ ನವೀಕರಿಸಿರುವ ಕಚೇರಿ ವೀಕ್ಷಣೆ ಮಾಡಿದರು.ಸಚಿವ ವಿ. ಸೋಮಣ್ಣ ಗೆ ನಗರ ಶಾಸಕ ಜ್ಯೋತಿ ಗಣೇಶ್, ಗ್ರಾ. ಶಾಸಕ ಸುರೇಶ್ ಗೌಡ, ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಸಾಥ್ ನೀಡಿದರು. ಆ. 03 ರಂದು ಪ್ರವಾಸಿ ಮಂದಿರವನ್ನ ಸಂಸದರ ಕಚೇರಿ ಬಳಕೆಗೆ ಸರ್ಕಾರ ನೀಡಿತ್ತು. ಬಳಿಕ ಆ.16 ರಂದು ಆದೇಶ ಹಿಂಪಡೆದಿತ್ತು.ಆ. 18 ರಂದು ಕಚೇರಿ ಉದ್ಘಾಟನೆ ಕಾರ್ಯಕ್ರಮ ವಿ. ಸೋಮಣ್ಣ ಹಮ್ಮಿಕೊಂಡಿದ್ದರು.