ಮನೆ Latest News ನೀವಿಬ್ಬರು ರಾಧಾಕೃಷ್ಣರ ರೀತಿ ಇದ್ದೀರಿ: ಭವ್ಯ ಗೌಡ- ತ್ರಿವಿಕ್ರಂಗೆ ವಿಕ್ಕಿ ತಾಯಿಯಿಂದಲೇ ಸಿಕ್ತಾ ಗ್ರೀನ್...

ನೀವಿಬ್ಬರು ರಾಧಾಕೃಷ್ಣರ ರೀತಿ ಇದ್ದೀರಿ: ಭವ್ಯ ಗೌಡ- ತ್ರಿವಿಕ್ರಂಗೆ ವಿಕ್ಕಿ ತಾಯಿಯಿಂದಲೇ ಸಿಕ್ತಾ ಗ್ರೀನ್ ಸಿಗ್ನಲ್?

0

ಸೋಷಿಯಲ್ ಮೀಡಿಯಾದಲ್ಲಿ ಸದ್ಯ ತ್ರಿವ್ಯ ಜೋಡಿ ಭಾರೀ ಸದ್ದು ಮಾಡುತ್ತಿದೆ. ಇದ್ಯಾರು ಅನ್ನೋದು ನಿಮಗೆಲ್ಲಾ ಗೊತ್ತೆ ಇದೆ. ತ್ರಿವಿಕ್ರಂ ಹಾಗೂ ಭವ್ಯ ಗೌಡ. ಇವರಿಬ್ಬರು ಜೋಡಿಯಾದ್ರೆ ಚೆನ್ನಾಗಿರುತ್ತೆ ಅಂತಾ ವೀಕ್ಷಕರು ಲೆಕ್ಕಾಚಾರ ಹಾಕ್ತಿದ್ರೆ, ಇದೀಗ ತ್ರಿವಿಕ್ರಂ ಅಮ್ಮಾ  ಕೂಡ ಅದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಂತೆ ಕಾಣ್ತಿದೆ.

ಪ್ರತಿ ಬಿಗ್ ಬಾಸ್ ಸೀಸನ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಂದೊಂದು ಜೋಡಿ ಸದ್ದು ಮಾಡುತ್ತಲೇ ಇರುತ್ತೆ. ಈ ಬಾರಿ . ಬಿಗ್ ಬಾಸ್ ಸೀಸನ್ 11 ರಲ್ಲಿ ಸದ್ದು ಮಾಡುತ್ತಿರೋದು ತ್ರಿವಿಕ್ರಂ ಮಂಜುನಾಥ್ ಹಾಗೂ ಭವ್ಯ ಗೌಡ . ತ್ರಿವ್ಯ ತ್ರಿವ್ಯ ಎಂದು ಈಗಾಗಲೇ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗುತ್ತಿದೆ. ಒಂದು ಕಡೆ ತ್ರಿವಿಕ್ರಂ ಮೋಕ್ಷಿತಾ ಜೋಡಿ ಸೂಪರ್ ಅಂತಾ ಒಂದಷ್ಟು ಮಂದಿ ಹೇಳಿದ್ರೆ ಮತ್ತೊಂದಷ್ಟು ಮಂದಿ ಭವ್ಯ ಹಾಗೂ ತ್ರಿವಿಕ್ರಂ ಸೂಪರ್ ಜೋಡಿ ಅಂತಾ ಲೈಕ್ಸ್ ಕಮೆಂಟ್ಸ್ ಮಾಡುತ್ತಲೇ ಇದ್ದಾರೆ.

ಇನ್ನು ವೀಕೆಂಡ್ ಬಂದ್ರೆ ಸಾಕು ಕಿಚ್ಚ ಸುದೀಪ್ ಯಾವ ರೀತಿ ಕಾಲ್ ಎಳೆಯುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತೆ ಇದೆ. ಮೊನ್ನೆ ಸೂಪರ್ ಸಂಡೇ ವಿತ್ ಬಾದ್ ಷಾ ಕಿಚ್ಚ ಸುದೀಪ ಎಪಿಸೋಡ್ ನಲ್ಲಿ  ರಜತ್ ಹಾಗೂ ಚೈತ್ರಾ ಕುಂದಾಪುರ ಅವರಿಗೆ ಕಿಚ್ಚ ಸುದೀಪ್ ಅವರು ತಮ್ಮ ಇಯರ್ ರಿಂಗ್ ಅನ್ನು ಗಿಫ್ಟ್ ಆಗಿ ಕೊಡ್ತಾರೆ. ಆಗ ಭವ್ಯಾ ಗೌಡ ಅವರು ನಮಗೇನು ಗಿಫ್ಟ್ ಇಲ್ವಾ ಎಂದು ಕೇಳಿದಾಗ ಕಿಚ್ಚ ಸುದೀಪ್ ಅವರು ನಿಮಗೆ ತ್ರಿವಿಕ್ರಂ ಅವರನ್ನೇ ಗಿಫ್ಟ್ ಆಗಿ ಕೊಟ್ಟಿದ್ದೇವೆ ಅಲ್ವಾ ಅನ್ನೋ ಮಾತನ್ನು ಹೇಳುತ್ತಾರೆ.

ಪ್ರತಿ ಬಿಗ್ ಬಾಸ್ ಸೀಸನ್ ನಲ್ಲಿ ಸ್ಪರ್ಧಿಗಳು ಕಾಯುವಂತಹ ಸನ್ನಿವೇಶ ಅಂದ್ರೆ ತಮ್ಮ ಮನೆಯವರು ಬಿಗ್ ಬಾಸ್ ಮನೆಗೆ ಬರೋದಕ್ಕೆ. ಈ ಸೀಸನ್ ನಲ್ಲೂ ಆ ಸನ್ನಿವೇಶ ಬಂದೆ ಬಿಟ್ಟಿದೆ. ಸದ್ಯಕ್ಕೆ ಇದಕ್ಕೆ ಸಂಬಂಧಪಟ್ಟಂತೆ ಪ್ರೋಮೋ ಒಂದು ಹೊರ ಬಿದ್ದಿದೆ. ಆ ಪ್ರೋಮೋದಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಅವರ ತಾಯಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಎಲ್ಲರೂ ಪಾಝ್ ನಲ್ಲಿ ಇರುತ್ತಾರೆ. ಇನ್ನು ಅಮ್ಮಂದಿರನ್ನು ಮಾತನಾಡಿಸಲು ಬಿಗ್ ಬಾಸ್ ಒಂದು ಟಾಸ್ಕ್ ಒಂದನ್ನು ಕೊಟ್ಟಿರ್ತಾರೆ. ಅದರಂತೆ ಫಜಲ್ ಅನ್ನು 10 ನಿಮಿಷದೊಳಗೆ ಅರೆಂಜ್ ಮಾಡಿದ್ರೆ ಮಾತ್ರ ಅಮ್ಮನ ಜೊತೆ ಮಾತನಾಡಲು ಅವಕಾಶ ಇರುತ್ತೆ. ಮೊದಲಿಗೆ ಭವ್ಯಾ ಗೌಡ ಅವರ ತಾಯಿ ಬಿಗ್ ಬಾಸ್ ಮನೆಗೆ ಬರ್ತಾರೆ. ಭವ್ಯ ಗೌಡ ಫಜಲ್ ಅರೆಂಜ್ ಮಾಡಿದ್ದರಿಂದ ಅವರಿಗೆ ಅವರ ತಾಯಿಯ ಜೊತೆ ಮಾತನಾಡಲು ಅವಕಾಶ ಸಿಗುತ್ತೆ. ಬಳಿಕ ತ್ರಿವಿಕ್ರಂ ಅವರ ತಾಯಿ ಬರುತ್ತಾರೆ. ಆದರೆ 10 ನಿಮಿಷದೊಳಗೆ ಫಜಲ್ ಅನ್ನು ತ್ರಿವಿಕ್ರಂ ಅವರಿಗೆ ಅರೆಂಜ್ ಮಾಡಲು ಸಾಧ್ಯವಾಗದೇ ಇದ್ದದ್ದರಿಂದ ಅವರಿಗೆ ತಾಯಿ ಜೊತೆ ಮಾತನಾಡಲು ಆಗಲ್ಲ. ವಿಕ್ಕಿ ಬಿಗ್ ಬಾಸ್ ಬಳಿ ಪ್ಲೀಸ್ ಬಿಗ್ ಬಾಸ್ ಅಂತಾ ಬೆಗ್ ಮಾಡಿದ್ರು ಅವಕಾಶ ಸಿಕ್ಕಿಲ್ಲ ಅನ್ನೋ ಅಂತೆ ಪ್ರೋಮೋದಲ್ಲಿ ತೋರಿಸಲಾಗಿದೆ. ವಿಕ್ಕಿ ಅವರ ತಾಯಿ ಅವರನ್ನು ಮಾತನಾಡಿಸದೇ ಹಾಗೇ ಹೊರಟು ಹೋಗಿದ್ದಾರೆ. ವಿಕ್ಕಿ ಕಣ್ಣೀರು ಹಾಕೋದನ್ನು ಪ್ರೋಮೋದಲ್ಲಿ ನೋಡ್ಬೋದಾಗಿದೆ.

ಇತ್ತ ತ್ರಿವಿಕ್ರಂ ತಾಯಿ ಭವ್ಯ ಗೌಡ ಅವರ ಬಳಿ ಮಾತನಾಡುತ್ತಾ ನೀನು ನನ್ನ ಮಗನನ್ನು ಒಬ್ಬ ಸ್ನೇಹಿತೆಯಾಗಿ, ತಾಯಿಯಾಗಿ ನೋಡಿಕೊಳ್ಳುತ್ತಿದ್ದಿ. ನೀವಿಬ್ಬರು ರಾಧಾಕೃಷ್ಣರ ರೀತಿ ಇದ್ದೀರಿ ಅನ್ನೋ ಮಾತನ್ನು ಹೇಳುತ್ತಾರೆ. ಇದು ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ ಭವ್ಯ ಅವರನ್ನು ಸೊಸೆಯಾಗಿ ಮಾಡಿಕೊಳ್ಳಲು ತ್ರಿವಿಕ್ರಂ ತಾಯಿಗೆ ಆಸೆ ಇದ್ಯಾ ಯಾಕೆ ಆ ಮಾತು ಹೇಳಿದ್ರು ಅಂತಾ ವೀಕ್ಷಕರು ಹುಳ ಬಿಟ್ಕೊಂಡಿದ್ದಾರೆ. ಇನ್ನು ಈಗಾಗಲೇ ವಿಕ್ಕಿ ಕೂಡ ಒಂದು ಬಾರಿ ಭವ್ಯ ಐ ಸೀರಿಯಸ್ ಲಿ ಲವ್ ಯೂ ಅನ್ನೋ ಮಾತನ್ನು ಹೇಳಿದ್ದಾರೆ. ಕಿಚ್ಚ ಸುದೀಪ್ ಕೂಡ ಏನೋ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅನ್ನೋ ರೀತಿ ಕಾಲ್ ಎಳೆಯುತ್ತಿದ್ದಾರೆ. ಹಾಗಾಗಿ ಇಲ್ಲೇನೋ ಇದೆ ಅಂತಾ ವೀಕ್ಷಕರು ಲೆಕ್ಕಾಚಾರ ಹಾಕ್ತಿದ್ದಾರೆ.