ಬೆಂಗಳೂರು: ಸಾರಿಗೆ ನೌಕಕರು ಸರ್ಕಾರದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಏನು ಬೇಡಿಕೆ ಇಟ್ಟಿದ್ದಾರೆ ಅವರ ಬೇಡಿಕೆಯನ್ನು ನಾವು ತಪ್ಪು ಅಂತ ಹೇಳಲ್ಲ. ಸರ್ಕಾರದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಅವರ ಸಹಾಯ ಮಾಡಬೇಕು ಅಂತ ಇದ್ದಾರೆ. ನಾಗರೀಕರನ್ನ ಗಮನದಲ್ಲಿ ಇಟ್ಟುಕೊಳ್ಳಬೇಕು. ಮಾಡಲು ಆಗದೆ ಇರೋದನ್ನ ಮಾಡಿ ಅಂತ ಹೇಳೋದು ಸರಿಯಲ್ಲ. ನಾನು ಅವರಿಗೆ ಮನವಿ ಮಾಡುತ್ತೇನೆ. ನಾಗರೀಕರಿಗೆ ನಾವು ಪ್ರಾಮುಖ್ಯತೆ ಕೊಡಬೇಕು. ಕೆಲ ಚಾಲಕರು, ಕಂಡಕ್ಟರ್ ಇವತ್ತು ಡ್ಯೂಟಿಗೆ ಬಂದಿದ್ದಾರೆ ಅವರಿಗೆ ಅಭಿನಂದಿಸುತ್ತೇನೆ. ಸಾರ್ವಜನಿಕರ ಬದುಕು ಬಹಳ ಮುಖ್ಯ, ನೀವು ಹಠ ಮಾಡೋದು ಸರಿಯಲ್ಲ. ಮಾಡುವಂಥದ್ದು ಇದ್ರೆ ಖಂಡಿತವಾಗಿ ಮುಖ್ಯಮಂತ್ರಿಗಳು ಮಾಡುತ್ತಾರೆ. ಆದ್ರೂ ಸುಮ್ಮನೆ ಕಾನೂನಿಗೆ ಗೌರವ ಕೊಡೋದಿಲ್ಲ ಹಠ ಮಾಡೋದು ಇದು ಸರಿಯಲ್ಲ. ನೀವು ಕೂಡ ಸಮಾಜ ಸೇವೆ ಮಾಡಬೇಕು ಅಂತ ಬಂದಿರುವರು. ದಯಮಾಡಿ ಸಹಕಾರ ಕೊಡಬೇಕು ಅಂತ ನಾನು ಮನವಿ ಮಾಡಿಕೊಳ್ತೇನೆ ಎಂದಿದ್ದಾರೆ.
ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು 10ನೇ ತಾರೀಕು ಪ್ರಧಾನಿ ಬರ್ತೀವಿ ಅಂತ ಹೇಳಿದ್ದಾರೆ. ಅವರ ರೈಲ್ವೆ ಕಾರ್ಯಕ್ರಮ ಇದೆ, ಮೆಟ್ರೋ ಉದ್ಘಾಟನೆ ಇದೆ. ಯೆಲ್ಲೋ ಲೈನ್ ಉದ್ಘಾಟನೆ ಮಾಡ್ತೀವಿ ಅಂತ ಹೇಳಿದ್ದಾರೆ. ನಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗುತ್ತದೆ. ಬೇರೆ ಬೇರೆ ಪ್ರೋಗ್ರಾಮ್‌ಗಳ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿ ಕೊಟ್ಟಿಲ್ಲ. ಅವರು ಬರ್ತೀವಿ ಅಂತ ಹೇಳಿದ್ದಾರೆ. ಟೈಂ ಟೂ ಟೈಂ ಪ್ರೋಗ್ರಾಂ ಬಗ್ಗೆ ಇನ್ನು ಮಾಹಿತಿ ತಿಳಿಸಿಲ್ಲ . ಅವರ ಪಾರ್ಟಿ ಪ್ರೋಗ್ರಾಂ ಇದೆ. ರೈಲ್ವೆ ಪ್ರೋಗ್ರಾಂ ಇದೆ, ಮೆಟ್ರೋ ಉದ್ಘಾಟನೆ ಕೂಡ ಇದೆ ಎಂದು ಹೇಳಿದ್ದಾರೆ.