ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ತೀರ್ಪು ಇಂದು ಹೊರ ಬೀಳುತ್ತೆ. ನಟ ದರ್ಶನ್ ಗೆ ಇಂದು ಜಾಮೀನು ಸಿಕ್ಕೇ ಸಿಗುತ್ತೆ ಅಂತಾ ಡಿ ಬಾಸ್ ಅಭಿಮಾನಿಗಳು ಬೆಳಗ್ಗೆಯೇ ಬಳ್ಳಾರಿ ಜೈಲಿನ ಬಳಿ ಜಮಾಯಿಸಿದ್ದರು. ದರ್ಶನ್ ಭಾವಚಿತ್ರ ಹಿಡಿದು ಬಂದ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಘೋಷಣೆ ಕೂಗುತ್ತಿದ್ದರು.
ಇನ್ನು ಇದರ ಮಧ್ಯೆ ಇಂದು ನಟ ದರ್ಶನ್ ಅವರನ್ನು ನಟ ಧನ್ವೀರ್ ಹಾಗೂ ಇತರೆ ಸ್ನೇಹಿತರು ಭೇಟಿ ಮಾಡಿದ್ರು. ವಿಜಯಲಕ್ಷ್ಮೀ ಅವರು ದರ್ಶನ್ ಭೇಟಿಗಾಗಿ ಬಳ್ಳಾರಿಗೆ ಬಂದಿದ್ದರೂ ಹೋಟೆಲ್ ನಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಇಂದು ದರ್ಶನ್ ಜಾಮೀನು ಅರ್ಜಿಯ ತೀರ್ಪು ಬರುವ ಹಿನ್ನೆಲೆ ಅದೇ ಟೆನ್ಶನ್ ನಲ್ಲಿದ್ದರು ವಿಜಯಲಕ್ಷ್ಮೀ ಎನ್ನಲಾಗಿದೆ. ಇನ್ನು ಧನ್ವೀರ್ ಅವರನ್ನು ಭೇಟಿಯಾಗೋದಕ್ಕೆ ದರ್ಶನ್ ವಿಶೇಷ ಸೆಲ್ ನಿಂದ ಸಂದರ್ಶಕರ ಕೊಠಡಿಗೆ ಆಗಮಿಸಿದ್ರು. ಈ ವೇಳೆ ದರ್ಶನ್ ಅವರನ್ನು ನೋಡಿ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಕೂಗಿದ್ರು. ಆ ದರ್ಶನ್ ಅಭಿಮಾನಿಗಳಿಗೆ ಮಂದಹಾಸ ಬೀರಿದ್ರು.
ಕೆಲ ಹೊತ್ತು ಬಂದವರ ಜೊತೆ ಮಾತುಕತೆ ನಡೆಸಿದ ಡಿ ಬಾಸ್ ಬಳಿಕ ಅವರು ತಂದಿದ್ದ ಬಟ್ಟೆ ಹಾಗೂ ತಿನಿಸುಗಳನ್ನು ತೆಗೆದುಕೊಂಡು ವಾಪಾಸ್ ತಮ್ಮ ಸೆಲ್ ಗೆ ತೆರಳಿದ್ರು. ಇನ್ನು ದರ್ಶನ್ ಬೆಳಗ್ಗಿನಿಂದಲೇ ಇವತ್ತು ಜಾಮೀನು ಸಿಗುತ್ತಾ ಇಲ್ವಾ ಅನ್ನೋ ಚಿಂತೆಯಲ್ಲಿದ್ದರಂತೆ. ಕೋರ್ಟ್ ಅಪ್ಡೇಟ್ ಸಿಗದೇ ಒದ್ದಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ತ್ಮಮ ಸೆಲ್ ನ ಒಳಗೆ ಇತ್ತಲಿಂದ ಅತ್ತ ಅತ್ತಲಿಂದ ಇತ್ತ ಓಡಾಡುತ್ತಿದ್ದರು ಎನ್ನಲಾಗಿದೆ.
ಜಾಮೀನು ನಿರೀಕ್ಷೆಯಲ್ಲಿದ್ದ ಡಿ ಬಾಸ್ ಗೆ ಭಾರೀ ನಿರಾಸೆ; ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್
ಬೆಂಗಳೂರು;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರು ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ತೀರ್ಪು ಇಂದು ಹೊರ ಬಿದ್ದಿದೆ. ದರ್ಶನ್ ಅವರ ಜಾಮೀನು ಅರ್ಜಿಗೆ ಸಂಬಂಧಪಟ್ಟಂತೆ ಪರ ವಿರೋಧದ ವಾದ ಆಲಿಸಿದ ಕೋರ್ಟ್ ಇಂದು ತೀರ್ಪು ನೀಡಿದೆ. ದರ್ಶನ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕೋರ್ಟ್ ತೀರ್ಪು ನೀಡಿದ್ದು, ಜಾಮೀನು ಸಿಕ್ಕೇ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ದರ್ಶನ್ ಗೆ ಭಾರೀ ನಿರಾಸೆಯಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರು ಜಾಮೀನು ಕೋರಿ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಟ್ಟಂತೆ ಸರ್ಕಾರದ ಪರವಾದ ವಕೀಲರಾಗಿ ಎಸ್ ಪಿಪಿ ಪ್ರಸನ್ನ ಕುಮಾರ್ ಹಾಗೂ ದರ್ಶನ್ ಪರವಾಗಿ ಹಿರಿಯ ಕ್ರಿಮಿನಲ್ ಲಾಯರ್ ಸಿ.ನಾಗೇಶ್ ವಾದ ಮಂಡಿಸಿದ್ದರು. ಪದೇ ಪದೇ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿಕೆಯಾಗುತ್ತಲೇ ಇತ್ತು. ಅಲ್ಲದೇ ಕೋರ್ಟ್ ಇಂದಿಗೆ ಜಾಮೀನು ಅರ್ಜಿಯ ತೀರ್ಪು ಕಾಯ್ದರಿಸಿತ್ತು. ಅದರಂತೆ ಇಂದು ತೀರ್ಪು ಹೊರ ಬಿದ್ದಿದೆ. ದರ್ಶನ್ ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಹಾಗಾಗಿ ಇಂದು ಜಾಮು ಸಿಕ್ಕೇ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಡಿ ಬಾಸ್ ಗೆ ನಿರಾಸೆಯಾಗಿದೆ. ಸದ್ಯಕ್ಕಂತೂ ಜೈಲೇ ಗತಿ ಅನ್ನೋ ಹಾಗಾಗಿದೆ.