ಬೆಂಗಳೂರು: ಇಂದು ಬೆಂಗಳೂರು ನಗರದ ಶಾಸಕರ ಜೊತೆ ಸಭೆ ಆಯಿತು, ಬಜೆಟ್ ಸಭೆ ಆಗಿದೆ, ಪ್ರಮುಖ ನಿರ್ಣಯ ಆಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಭೆಗೆ ಅಶೋಕ್ ಕೂಡ ಬಂದರು.. ಅಭಿಪ್ರಾಯ ತಿಳಿಸಿದ್ದಾರೆ. ಪೊಲೀಸ್ ಇಲಾಖೆ, ಬಿಎಡಿ ಸೇರಿ ಮಂತ್ರಿಗಳು, ಸಂಸದರು, ಶಾಸಕರ ಜೊತೆ ಸಭೆ ಆಗಿದೆ. ವಾರ್ಡ್ ಒಂದೊಂದು ಅನುದಾನ ಬೇಡಿಕೆ ಇಟ್ಟಿದ್ದಾರೆ. ಐದು ವಾರ್ಡ್ ಬಜೆಟ್ ಮಾಡಬೇಕು ಅಂತಾ ಇದೆ. ವಾರ್ಡ್ ವೈಸ್ ಬಜೆಟ್ ನೀಡಬೇಕು ಎಂದು ಒತ್ತಡ ಮಾಡಿದ್ದಾರೆ.ಫುಟ್ ಪಾತ್ ಪಾಲಿಸಿ ತರಬೇಕು ಅಂತಾ ಇದೆ. ಬೀದಿ ಬದಿ ವ್ಯಾಪಾರ ಮಾಡ್ತಾರೆ, ಇದರಿಂದ ಸಮಸ್ಯೆ ಆಗಿದೆ. ಹೀಗಾಗಿ ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಬೇಕು. ಈ ಸಮಸ್ಯೆ ನಿಲ್ಲಿಸಬೇಕು ಅಂತಾ ಪಾಲಿಸಿ ಮಾಡಬೇಕು ಎಂದಿದ್ದಾರೆ.
ಎಲ್ಲಿ ವ್ಯಾಪಾರ ಮಾಡಬೇಕು ಅಂತ ನಿಗದಿ ಮಾಡುತ್ತೇವೆ. ಯಾರು ರಿಜಿಸ್ಟರ್ ಮಾಡಿದ್ದಾರೆ ಅವರಿಗೆ ಮಾತ್ರ ಅವಕಾಶ ನೀಡಬೇಕು, ಇದಕ್ಕೆ ಎಲ್ಲ ಶಾಸಕರು ಸಹಮತ ವ್ಯಕ್ತಪಡಿಸಿದ್ದಾರೆ. ಫ್ಲೆಕ್ಸ್ ಹಾಕ್ತಾರೆ, ಎಲ್ಲಾ ಪಾರ್ಟಿ ಯವರು ಹಾಕ್ತಾರೆ .ಯಾರು ಫ್ಲೆಕ್ಸ್ ಹಾಕ್ತಾರೆ ಅವರಿಗೆ ೫೦ ಸಾವಿರ ದಿಂದ ೧ ಲಕ್ಷ ಫೈನ್ ಹಾಕಬೇಕು. ಯಾರಾದರೂ ಹಾಕಿದ್ರೆ ನೋಡಿ ಮುಂದೆ ಪೊಲೀಸರಿಗೂ, ಕಾರ್ಪೋರೇಷನ್ ನವರಿಗೆ ತಿಳಿಸಿದ್ದೇನೆ, ಕೇಸ್ ಹಾಕುತ್ತೇವೆ. ಬೀದಿ ಬದಿ ವ್ಯಾಪಾರಸ್ಥರು ಅಂಗಡಿ ಹಾಕಬಾರದು, ಯಾರೇ ಇದ್ದರೂ ಎತ್ಕೊಂಡು ಹೋಗಬೇಕು. ೩೦ ಸಾವಿರ ಜನ ತಳ್ಳೋ ಗಾಡಿ ಬೇಕು ಎಂದು ಕೇಳಿದ್ದಾರೆ, ಟೆಂಡರ್ ಕರೆದಿದ್ದೇವೆ. ಎಲ್ಲಿ ಬೇಕು ಅಷ್ಟೇ ವ್ಯಾಪಾರ ಮಾಡಬೇಕು. ಐಡೆಂಟಿಟಿ ಕಾರ್ಡ್ ಇದ್ರೆ ಅಷ್ಟೇ ಮಾರಾಟ ಮಾಡಬೇಕು. ಪಾರ್ಕ್ ಟೈಮ್ ನಿಗದಿ ಮಾಡುತ್ತೇವೆ.ಐದು ಪಾಲಿಕೆಯ ಲೋಕಲ್ ಎಂಎಲ್ಎ ಗಳು ನಿರ್ಧಾರ ಮಾಡಲಿ.ಪಾರ್ಕ್ ನಲ್ಲಿ ಅನಧಿಕೃತ ಕೆಲಸ ಆಗ್ತಿದೆ ಅಂತ ಆರೋಪ ಇದೆ ಎಂದು ತಿಳಿಸಿದ್ದಾರೆ.
ಪಾರ್ಕಿಂಗ್ ಪಾಲಿಸಿ ಇದೆ. ಹಳೇ ವಾಹನ ನಿಲ್ಲಿಸಿದ್ದಾರೆ, ಅಂಥಾ ವಾಹನ ತುಂಬಿಕೊಂಡು ಹೋಗುತ್ತೇವೆ. ಬೆಳ್ಳಲ್ಲಿ, ಮಿಟಗಾನಹಳ್ಲಿ, ಗಿಡ್ಡೆನ ಹಳ್ಲಿ, ಸೊಂಡೆ ಕೊಪ್ಪ ಜಾಗ ಇದೆ. ಎಲ್ಲಾ ಕಾರ್ಪೋರೇಷನ್ ಅವರಿಗೆ ಎರಡು ವಾಹನ ಇಟ್ಟಿದ್ದೇವೆ. ಈಗಾಗಲೇ ಸೂಚನೆ ನೀಡಿದ್ದೇವೆ. ನಾನ್ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ರೆ ಕ್ರಮ ಎಂದ ಅವರು ಅಭ್ಯರ್ಥಿ ಘೋಷಣೆ ಮಾಡದೆ ಸಮರ್ಥ್ ನಾಮಪತ್ರ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಮಾಹಿತಿ ಇಲ್ಲ.ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.
ಎಲ್ಲೆಂದರಲ್ಲಿ ಹಳೇ ವಾಹನಗಳನ್ನ ನಿಲ್ಲಿಸಿದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹೆಚ್ಚು ಕಾಲ ಹಳೇ ಗಾಡಿಗಳನ್ನ ನಿಲ್ಲಿಸಿದೂ ಟೋಯಿಂಗ್ ಮಾಡಲಾಗುತ್ತದೆ. ರಸ್ತೆಗಳಲ್ಲಿ ಎಲ್ಲೆಲ್ಲಿ ಹಳೇ ವಾಹನ ನಿಲ್ಸಿದ್ದಾರೋ, ಅದನ್ನು ತುಂಬಿಕೊಂಡು ಹೋಗಿ ಒಂದು ನಿರ್ದಿಷ್ಟ ಜಾಗದಲ್ಲಿ ಡಂಪ್ ಮಾಡ್ತೇವೆ. ಹಳೇ ವಾಹನಗಳನ್ನ ಟೋಯಿಂಗ್ ಮಾಡಲು ನಾಲ್ಕು ಜಾಗ ನಿಗದಿ ಮಾಡಲಾಗಿದೆ. ಬೆಳ್ಳಳ್ಳಿ, ಮಿಟಗಾನಹಳ್ಳಿ, ಸೊಂಡೆಕೊಪ್ಪ, ಗಿಡ್ಡೇನಹಳ್ಳಿಗಳಲ್ಲಿ ಜಾಗ ನಿಗದಿ ಮಾಡಲಾಗಿದೆ ಎಂದಿದ್ದಾರೆ.
ಶಾಸಕರಿಂದ ವಾರ್ಡಿಗೆ 5-10 ಕೋಟಿ ಅನುದಾನ ಬೇಡಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನೋಡೋಣ ಎಷ್ಟಾಗಲಿದೆ. ಅವರು ಆಕಾಶನೂ ಕೇಳ್ತಾರೆ, ಭೂಮಿನೂ ತಂದು ಕೊಡಿ ಅಂತ ಕೇಳ್ತಾರೆ. ನಮ್ಮಿಂದ ಎಷ್ಟಾಗಲಿದೆ ಅನ್ನೋದು ನೋಡಿ ಕೊಡ್ತೇವೆ ಎಂದಿದ್ದಾರೆ.











