ಮನೆ Latest News ವಿಧಾನಸೌಧದಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.O ಕಾರ್ಯಕ್ರಮ

ವಿಧಾನಸೌಧದಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.O ಕಾರ್ಯಕ್ರಮ

0

ಬೆಂಗಳೂರು; ವಿಧಾನಸೌಧದಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.O ಕಾರ್ಯಕ್ರಮ ನಡೆಯಿತು.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ  ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ವಾಲ್ಮೀಕಿ ನಿಗಮನ ಅಧ್ಯಕ್ಷ ಬದ್ದಲ್, ಸರ್ಕಾರದ ಮುಖ್ಯ‌ ಕಾರ್ಯದರ್ಶಿ ಶಾಲಿನಿ‌ ರಜನೀಶ್ ಉಪಸ್ಥಿತರಿದ್ದರು,ಮಳೆ ಹಿನ್ನೆಲೆ ಒಂದು ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಯಿತು.

ಇನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಯುವಕ ಯುವತಿಯಲ್ಲಿ ತಂಬಾಕು ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮ ಬಗ್ಗೆ ಯುವಕ ಯುವತಿಯರಿಗೆ ತಿಳಿಸಬೇಕು.ವಿದ್ಯಾರ್ಥಿಗಳು ಈಗಾಗಲೇ ಪ್ರತಿಜ್ಞೆ ಮಾಡಿದ್ದಾರೆ.ಯಾವುದೇ ಕಾರಣಕ್ಕೂ ತಂಬಾಕು ಸೇವನೆ ಮಾಡುವುದಿಲ್ಲ, ಉಪಯೋಗಿಸುವುದಿಲ್ಲ ಎಂದು.ಅಷ್ಟೆ ಅಲ್ಲ ನಮ್ಮ‌ ಕುಟುಂಬ, ಸಂಬಂಧಿಕರು, ಸ್ನೇಹಿತರಿಗೆ ತಂಬಾಕು, ತಂಬಾಕು ಉತ್ಪನ್ನ ಬಳಸದಂತೆ ಜಾಗೃತಿ ಮೂಡಿಸುತ್ತಾರೆ.ಇದು ನನ್ನ ಆದ್ಯ ಕರ್ತವ್ಯ ಅಂತ ಪ್ರತಿಜ್ಞೆ ಮಾಡಿದ್ದಾರೆ.ಇದನ್ನ ಚಾಚೂ ತಪ್ಪದೆ ಮಾಡಬೇಕು ಎಂದರು.

ಭಾರತ ದೇಶದಲ್ಲಿ ತಂಬಾಕು‌ ಸೇವನೆಯಿಂದ 13.5 ಲಕ್ಷ ಮಂದಿ‌ ಸಾಯುತ್ತಿದ್ದಾರೆ. ಎಂತಾ ಅಪಾಯ ನೋಡಿ.ಭವಿಷ್ಯ ರೂಪಿಸುವ ಬದಲಿ, ದುಷ್ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. ವಲ್ಡ್ ಟ್ರೇಟ್ ಆರ್ಗನೈಸೇಶನ್ ಈ ಅಂಕಿ ಅಂಶ ನೀಡಿದೆ.ಶಾಲಾ- ಕಾಲೇಜುಗಳು ವಿದ್ಯಾರ್ಥಿಗಳು ಸೇವನೆ ಮಾಡಬಾರದು.ಸುಮಾರು‌ ೫೦% ತಂಬಾಕು, ತಂಬಾಕು ಉತ್ಪನ್ನ ಸೇವನೆ ಮಾಡುವವರು ಕ್ಯಾನ್ಸರ್ ಖಾಯಿಲೆಗೆ ತುತ್ತಾಗುತ್ತಿದ್ದಾರೆ.ಕ್ಯಾನ್ಸರ್ ವಾಸಿ ಆಗದ ಮಾರಕ ರೋಗ ಎಂದರು.

ತಂಬಾಕು ಸೇವೆನೆ ಮಾಡಲ್ಲ ಪ್ರತಿಜ್ಞೆ ಮಾಡಬೇಕು.ತಂಬಾಕು, ತಂಬಾಕು ಉತ್ಪನ್ನಗಳಿಗೆ ಯುವಕರಿಗೆ ಬಲಿಯಾಗಬಾರದು. ಬೆಂಗಳೂರು, ಹುಬ್ಬಳ್ಳಿ, ಧಾರಾವಾಡಗಳಲ್ಲಿ‌ ತಂಬಾಕು ಸೇವನೆ ಹೆಚ್ಚಾಗಿ ಬಳಕೆ ಆಗುತ್ತಿದೆ.ಕಾನೂನು ತಿದ್ದುಪಡಿ‌ ಆಗಬೇಕಾದರೆ ಕಠಿಣ ಕಾನೂನು ಕಾನೂನು ತರಲು ಮಸಾಧ್ಯ ಆದರೆ ತಿದ್ದುಪಡಿ ಮಾಡಬೇಕು.ದುಶ್ಚಟಗಳನ್ನ ಪ್ರೋತ್ಸಾಹ ಮಾಡೋಕೆ ಆಗೊಲ್ಲ.ಯುವಕ ಯುವತಿಯರು, ವಿದ್ಯಾರ್ಥಿಗಳು ದುಷ್ಚಟಗಳಿಗೆ ಬಲಿಯಾಗಬಾರದು.ನಾನೂ ಸಹ‌ ವಿದ್ಯಾರ್ಥಿ ಆಗಿದ್ದಾಗ ಸಿಗರೇಟ್ ಸೇದುತ್ತಿದ್ದೆ.ಎಂಎಲ್ ಎ ಆದ್ಮೇಲೆ ಸಿಗರೇಟು ಸೇದೋದನ್ನ ಬಿಟ್ಟುಬಿಟ್ಟೆ.ಯಾರಾದ್ರೂ ಈಗ ಸೇವನೆ ಮಾಡುತ್ತುದ್ದರೆ ಯುವಕರು ಇದರಿಂದ ದೂರ ಆಗ್ಬೇಕು.ಇದು ಯುವಕರಿಗೆ ನನ್ನ ಮನವಿ ಮತ್ತು ಸಂದೇಶ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ರು.

ದುಶ್ಚಟಗಳಿಂದ ದೂರ ಆಗಲು ಈ‌ ದಿನ ಆಚರಣೆ ಮಾಡಲಾಗುತ್ತದೆ.ಮಳೆ ಬಂದ ಕಾರಣ, ಇಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಇಡೀ ರಾಜ್ಯದಲ್ಲಿ ಮಳೆ ಆಗಿದೆ. ಎಲ್ಲ ಜಲಾಶಗಳು ತುಂಬಿದೆ.ರೈತರಲ್ಲಿ ಮಂದಹಾಸ ಕಾಣುತ್ತಿದ್ದೇವೆ.ಡ್ರಗ್ಸ್, ತಂಬಾಕು‌ ಸೇವನೆಯಿಂದ ಯುವ ಸಮೂಹ ದೂರ ಇರಬೇಕು.ಯಾರು ದುಶ್ಟಟಗಳಿಗೆ ಬಲಿಯಾಗುದ್ದೀರೊ ಹೊರಗೆ ಬರಬೇಕೆಂದು ಸಿಎಂ ಮನವಿ ಮಾಡಿದ್ರು.