ಬೆಂಗಳೂರಿನಲ್ಲಿ ಭಾರತೀಯ ಸೈನಿಕರ ಪರ ಬಿಜೆಪಿಯಿಂದ ತಿರಂಗಾ ಯಾತ್ರೆ ನಡೆಯಿತು. ವಿದ್ಯಾರಣ್ಯಪುರದ NTI ಆಟದ ಮೈದಾನದಿಂದ ಸಹಕಾರ ನಗರದ ಗಣೇಶ ದೇವಸ್ಥಾನದವರೆಗೂ .eಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತಿತರ ಬಿಜೆಪಿ ಮುಖಂಡರು, ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾರತ ಗಂಭೀರ ದೇಶ, ಪಾಕಿಸ್ತಾನದ ಥರ ಅಲ್ಲ. ನಾವು ವಿಶ್ವದ ಜತೆಗೆ ಹೊಗಬೇಕಾಗಿದೆ. ವಿಶ್ವದ ನಾಯಕರು ಒಂದು ಕೋರಿಕೆ ಇಟ್ಟಾಗ ನಾವು ಪಾಲಿಸಬೇಕಾಗುತ್ತದೆ. ನಾವು ವಿಶ್ವದ ಜತೆಗೆ ಹೋಗ್ತಿದ್ದೇವೆ, ವಿಶ್ವದ ಮಾತು ಕೇಳಿದ್ದೇವೆ ಆದ್ರೆ ಪಾಕಿಸ್ತಾನ ಕೇಳಿಲ್ಲ. ಪಾಕಿಸ್ತಾನದ ನಡೆಯನ್ನು ವಿಶ್ವ ನೋಡಿದೆ, ಈಗ ವಿಶ್ವವೇ ಯೋಚಿಸಬೇಕು. ನಾವು ಸೂಚನೆ ಪಾಲಿಸಿದ್ದೇವೆ, ಪಾಕಿಸ್ತಾನ ಪಾಲಿಸಿಲ್ಲ. ನಾವು ಪಾಕಿಸ್ತಾನದಲ್ಲಿ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ್ವಿ. ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ನಮ್ಮ ಸೈನಿಕರು ಸರ್ವನಾಶ ಮಾಡಿದ್ದಾರೆ. ನಮ್ಮ ಪ್ರತೀಕಾರವನ್ನು ನಾವು ಗಡಿಯಲ್ಲಿ ತೋರಿಸುತ್ತಲೇ ಬಂದಿದ್ದೇವೆ ಎಂದರು.
ನಮ್ಮ ದಾಳಿಗೆ ಹೆದರಿ ಪಾಕಿಸ್ತಾನ ಅಮೆರಿಕ ಮತ್ತು ಬೇರೆ ಬೇರೆ ದೇಶಗಳ ಕಾಲು ಹಿಡಿದುಕೊಂಡಿತು. ಈ ಯುದ್ಧ ನಿಲ್ಲಿಸಬೇಕು, ಯುದ್ಧ ಮುಂದುವರೆಸುವ ಶಕ್ತಿನಮಗಿಲ್ಲ ಅಂತ ಪಾಕಿಸ್ತಾನ ಕೇಳಿಕೊಂಡಿತು. ಅಮೆರಿಕ ಮಧ್ಯಸ್ಥಿಕೆ ಮೂಲಕ ಕದನ ವಿರಾಮ ನಂತರ ವೂ ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸಿದೆ. ನಾವು ದೇಶಕ್ಕಾಗಿ ನಡಿಗೆ ಮಾಡಿದ್ದೇವೆ, ನಮ್ಮ ಸೈನಿಕರ ಪರ ಇಡೀ ದೇಶ ನಿಂತಿದೆ. ತಿನ್ನೋಕ್ಕೆ, ಕುಡಿಯೋಕ್ಕೆ ಇಲ್ಲದ ದೇಶ ಪಾಕ್ ನಿರಂತರ ತೊಂದರೆ ಕೊಡ್ತಿದೆ, ಇದು ನಿಲ್ಲಬೇಕು ಎಂದರು.