ಮನೆ Latest News ಪೆಹಲ್ಗಾಮ್ ಉಗ್ರರ ದಾಳಿಗೆ ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ಮೂಲಕ ಪ್ರತ್ಯುತ್ತರ; ಭಾರತೀಯ ಸೇನೆಗೆ ಬೆಂಬಲ...

ಪೆಹಲ್ಗಾಮ್ ಉಗ್ರರ ದಾಳಿಗೆ ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ಮೂಲಕ ಪ್ರತ್ಯುತ್ತರ; ಭಾರತೀಯ ಸೇನೆಗೆ ಬೆಂಬಲ ಸೂಚಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ತಿರಂಗಾ ಯಾತ್ರೆ

0

ಬೆಂಗಳೂರು; ಪೆಹಲ್ಗಾಮ್ ಉಗ್ರರ ದಾಳಿಗೆ ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ಮೂಲಕ ಪ್ರತ್ಯುತ್ತರ  ಭಾರತೀಯ ಸೇನೆಗೆ ಬೆಂಬಲ ಸೂಚಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ  ತಿರಂಗಾ ಯಾತ್ರೆ ನಡೆಯಿತು.

ಕೆಆರ್ ಸರ್ಕಲ್ ನಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಸರ್ಕಲ್ ವರೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತಿರಂಗಾ ಯಾತ್ರೆ ಸಾಗಿತು. ಪಕ್ಷಾತೀತವಾಗಿ, ಸೆಲೆಬ್ರಿಟಿಗಳು,  ಸಾರ್ವಜನಿಕರು ಯಾತ್ರೆಯಲ್ಲಿ ಭಾಗಿಯಾಗಿದ್ರು.

ಇನ್ನು ಈ ವೇಳೆ ಮಾತನಾಡಿದ  ಗೃಹ ಸಚಿವ ಡಾ.ಜಿ. ಪರಮೇಶ್ವರ್  ಉತ್ತರ ಭಾರತದ ರಾಜ್ಯಗಳಿಗೆ ಕೊಟ್ಟಿರುವ ಸೂಚನೆಗಳನ್ನೇ ನಮಗೂ ಕೇಂದ್ರ ಕೊಟ್ಟಿದೆ. ನಾವು ಆರಂಭದಿಂದಲೂ ಎಲ್ಲ ಜಿಲ್ಲೆಗಳ ಎಸ್‌ಪಿ‌ಗಳಿಗೆ ಮುನ್ನೆಚ್ಚರಿಕೆ ಸೂಚನೆ ಕೊಡಲಾಗಿದೆ.ಮಾಹಿತಿಗಳ ಸಂಗ್ರಹಿಸಲು ತಿಳಿಸಲಾಗಿದೆ. ಸ್ಲೀಪರ್ ಸೆಲ್ ಗಳ ಮೇಲೂ ನಿಗಾ ಇಡಲು ಸೂಚಿಸಲಾಗಿದೆ. ರಾಜ್ಯದಲ್ಲಿ ಹೆಚ್ಚುವರಿ ಭದ್ರತೆ ಬಗ್ಗೆ ಸಿಎಂ ಜತೆ ಚರ್ಚೆ ಮಾಡ್ತೇನೆ. ಇವತ್ತು ಸಂಪುಟ ಸಭೆಯಿದೆ, ಅಲ್ಲೂ ಭದ್ರತೆ ಬಗ್ಗೆ ಪ್ರಸ್ತಾಪ ಆಗಬಹುದು, ಚರ್ಚೆ ಮಾಡ್ತೇವೆ. ನಾವು ಎಲ್ಲ ಎಚ್ಚರಿಕೆ ಕ್ರಮ ತಗೊಂಡಿದ್ದೇವೆ. ಸ್ಥಳೀಯ ಪೋಲೀಸರಿಗೂ ಎಚ್ಚರಿಕೆ ವಹಿಸುವಂತೆ ಸೂಚನೆ ಕೊಡಲಾಗಿದೆ. ಜಲಾಶಯಗಳು, ಅಣೆಕಟ್ಟುಗಳು, ಪ್ರಮುಖ ಸ್ಥಳಗಳಿಗೆ ಭದ್ರತೆ ಕೊಟ್ಟಿದ್ದೇವೆ ಎಂದರು. ಕಾಂಗ್ರೆಸ್ ನಿಂದ‌ ಇಂದು ತಿರಂಗಾ ಯಾತ್ರೆ ಮಾಡ್ತಿದ್ದೇವೆ. ನಾವು ನಮ್ಮ ಸೈನಿಕರ ಪರ ಇದ್ದೇವೆ, ಅದಕ್ಕಾಗಿ ಈ ಯಾತ್ರೆ. ನಾವು ಶುರು ಮಾಡಿದ್ದೇವೆ, ಯಾರು ಬೇಕಾದರೂ ಇದರಲ್ಲಿ ಸೇರಿ ಬೆಂಬಲ ಕೊಡಬಹುದು ಎಂದು ಹೇಳಿದರು.

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ ನಮ್ಮ ಯೋಧರಿಗೆ ನಾವು ಗೌರವ ಸಲ್ಲಿಸೋಣ. ಅವರಿಗೆ ನಮ್ಮ ಬೆಂಬಲ ನೀಡೋಣ. ಅದಕ್ಕಾಗಿ ನಾವು ತಿರಂಗಾ ಯಾತ್ರೆ ಮಾಡಿದ್ದೇವ .ಸರ್ಕಾರದ ಪರವಾಗಿ ಎಲ್ಲರಿಗೂ ನಮಸ್ಕಾರ. ಯೋಧರಿಗೆ ಸಾಷ್ಟಾಂಗ ನಮಸ್ಕಾರಗಳು. ಪಕ್ಷಾತೀತವಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಮ್ಮ ಕಾರ್ಯಕರ್ತರು ಕೂಡ ಬಂದಿದ್ದಾರೆ.  ಈ ತಿರಂಗಾ ಯಾತ್ರೆ ನಮ್ಮ ಯೋಧರಿಗೆ ಆತ್ಮ ಧೈರ್ಯ ತುಂಬಬೇಕು. ಇಡೀ ಭಾರತ ನಿಮ್ಕ ಪರವಾಗಿಷೆ ಅನ್ನೋದು ಹೇಳಬೇಕು. ಭಾರತಕ್ಕಾಗಿ ಯೋಧರು ತ್ಯಾಗ ಮಾಡುತ್ತಿದ್ದಾಗ ನಾವು ಪಕ್ಷಾತೀತವಾಗಿ ನಾವು ಯಾತ್ರೆ ಮಾಡಿದ್ದೇವೆ. ಎಲ್ಲರೂ ಇದಕ್ಕೆ ಬಂದಿದ್ದಾರೆ. ವಿದ್ಯಾರ್ಥಿಗಳು ಬಂದಿದ್ದಾರೆ, ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ರು.

ಸಚಿವ ಕೆ ಹೆಚ್ ಮುನಿಯಪ್ಪ ಮಾತನಾಡಿ ಸೈನಿಕರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ . ಭಾರತ ದೇಶದ ಎಲ್ಲಾ ವರ್ಗದವರೂ ನಿಮ್ಮ ಜೊತೆ ಇದ್ದೇವೆ ಎಂದು ತೊರಿಸಿದ್ದೇವೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸಂದೇಶ ರವಾನಿಸಿದ್ದಾರೆ. ತಿರಂಗ ಯಾತ್ರೆಯನ್ನು ಮಾಡಿದ್ದೇವೆ. ನ್ಯಾಯಬದ್ಧವಾಗಿ ಯದ್ದ ಮಾಡುತ್ತಿದ್ದಾರೆ . ಈ ಹಿನ್ನಲೆ ಅವರ ಪರವಾಗಿ ನಾವೆಲ್ಲ ಇದ್ದೇವೆ ಎಂದ್ರು.

ಸಚಿವ ಜಮೀರ್ ಅಹ್ಮದ್ ಖಾನ್ ಸುಸೈಡ್ ಬಾಂಬರ್ ವಿವಾದ ವಿಚಾರದ ಬಗ್ಗೆ ಮಾತನಾಡಿ ಬಿಜೆಪಿಗರಿಗೆ ವಿವಾದ ಮಾಡುವುದು ಬೇರೆನು ಗೊತ್ತಿಲ್ಲ. ಈಗಲೂ ನನ್ನ ಮಾತಿಗೆ ಬದ್ಧನಿದ್ದೇನೆ. ನನಗೆ ಅನುಮತಿ ಕೊಟ್ರೆ ಸುಸೈಡ್ ಬಾಂಬರ್ ಆಗಲು ಸಿದ್ಧ. ನಮ್ಮ ದೇಶದಲ್ಲಿ ಆ ಪದ್ಧತಿ ಇಲ್ಲ. ಪ್ರಧಾನಿ ಅನುಮತಿ ನೀಡಿದ್ರೆ ಸುಸೈಡ್ ಬಾಂಬರ್ ಆಗಲು ಸಿದ್ಧ ಎಂದ ಜಮೀರ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಎಲ್ಲ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಯುದ್ಧ ಯಶಸ್ವಿಯಾಗಲಿ ಎಂದು ಪ್ರರ್ಥಾನೆ ಮಾಡಿದ್ದೇವೆ. ಇಂದು ಶುಕ್ರವಾರ ದೇಶದ ಎಲ್ಲ ಮಸೀದಿಯಲ್ಲಿ ಪ್ರರ್ಥಾನೆ ಮಾಡಿದ್ದೇವೆ. ತಿರಂಗಾ ಯಾತ್ರೆಗೆ ನಾನು ಬರಬೇಕಿತ್ತು. ಡಿಸಿಎಂ ಕೂಡ ಕರೆ ಮಾಡಿ ಬರಲು ಹೇಳಿದ್ರು. ಬೇರೆ ಕಾರ್ಯಕ್ರಮ ಇದ್ದ ಕಾರಣದಿಂದ ಬರಲಾಗಲಿಲ್ಲ ಎಂದು ತಿಳಿಸಿದ್ರು.