ಮನೆ Latest News ಎಲ್ಲದಕ್ಕೂ ಕಾಲ ಉತ್ತರ ನೀಡುತ್ತದೆ: ಸಿಎಂ ಆಗುವ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

ಎಲ್ಲದಕ್ಕೂ ಕಾಲ ಉತ್ತರ ನೀಡುತ್ತದೆ: ಸಿಎಂ ಆಗುವ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

0

ಶಿವಮೊಗ್ಗ; ಸಿಎಂ ಆಗುವ ವಿಚಾರಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಎಲ್ಲದಕ್ಕೂ ಕಾಲ ಉತ್ತರ ನೀಡುತ್ತದೆ ಎಂದಿದ್ದಾರೆ. ಪಕ್ಷ ಹೇಗೆ ನಿರ್ದೇಶನ ನೀಡುತ್ತೋ ಅದರಂತೆ ನಡೆದುಕೊಳ್ಳುವೆ. ನೋಡೋಣ ಏನಾಗುತ್ತೋ ಎಂದು ನಗುತ್ತಲೇ ಡಿ.ಕೆ. ಶಿವಕುಮಾರ್ ಉತ್ತರಿಸಿದ್ದಾರೆ.

ಬಹಳ ದಿನದ ನಂತರ ಶಿವಮೊಗ್ಗಕ್ಕೆ ಆಗಮಿಸಿದ್ದೇನೆ. 37 ವರ್ಷದ ನಂತರ ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ‌ ನಡೆಯತ್ತಿದೆ. ತರಳಬಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅಸೆಂಬ್ಲಿ ಹಾಗೂ ಕನಕೋತ್ಸವದ ಇದ್ದರೂ ತರಳಬಾಳು ಹುಣ್ಣಮೆ ಕಾರ್ಯಕ್ರಮಕ್ಕೆ ತಪ್ಪಿಸಿಕೊಂಡು ಬಂದಿದ್ದೇನೆ. ಕನಕಪುರ ಕನಕೋತ್ಸವ ರಾಜ್ಯಕ್ಕೆ ಮಾದರಿಯಾದ ವಿಶೇಷ ಉತ್ಸವ.ಐದು ಗ್ಯಾರಂಟಿ, ಮನೆಗೊಂದು ರಂಗೋಲಿ ಎಂಬ ಧೇಯದಡಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸ್ಪರ್ಧೆಯಲ್ಲಿ 73 ಸಾವಿರ ಜನ ಭಾಗಿಯಾಗಿದ್ದಾರೆ‌‌. 11 ಸಾವಿರ ಜನ ಮುಸಲ್ಮಾನ್ ಬಾಂಧವರು ಮೆಹಂದಿ ಸ್ಪರ್ಧೆ ಆಯೋಜಿಸಲಾಗಿದೆ. ಇದರ ಮಧ್ಯೆ ನಾನು ಈ ಕಾರ್ಯಕ್ರಮ ತಪ್ಪಿಸಿಕೊಳ್ಳಬಾರದೆಂದು ಬಂದಿದ್ದೇನೆ ಎಂದಿದ್ದಾರೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಚುನಾವಣೆ ಕುರಿತು ಪಕ್ಷ ಒಂದು ತೀರ್ಮಾನದ ತೆಗೆದುಕೊಳ್ಳುತ್ತದೆ. ಕೆಲವರು ಸರ್ಕಾರದ ನಿರ್ದೇಶನದ ಮೇರೆಗೆ ನಾಮಪತ್ರ ವಾಪಾಸ್ ಪಡೆದಿರಬಹುದು.ಕೆ.ಜೆ. ಜಾರ್ಜ್ ಮುಖ್ಯಮಂತ್ರಿಯವರಿಗೆ ರಾಜೀನಾಮೆ ನೀಡಿದ್ದಾರೆ. ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಜಾರ್ಜ್ ಸ್ವಾಭಿಮಾನಿ ರಾಜಕಾರಣಿಯಾಗಿದ್ದಾರೆ. ವಿರೋಧ ಪಕ್ಷದವರು ಬೇಕೆಂತಲೇ ಆರೋಪ ಮಾಡುತ್ತಿರುತ್ತಾರೆ. ಜಾರ್ಜ್ ಬಹಳ ಹಿರಿಯರು ಬಹಳ ಜವಾಬ್ದಾರಿಯಿಂದ ಕೆಲಸ ಮಾಡುವವರು. ಮಾಧ್ಯಮದವರಿಂದಲೇ ನನಗೆ ಈ ಮಾಹಿತಿ ಬಂದಿದೆ. ವಿರೋಧ ಪಕ್ಷದವರು ಕೇವಲ ಆರೋಪ ಮಾಡುತ್ತಾರೆ. ಕಾರ್ಯಕರ್ತರು ಬಂದಾಗ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೇಳೋದು ಸಹಜವಾಗಿರುತ್ತದೆ. ಯತೀಂದ್ರರವರು ಹಾಗೆ ಮಾಡುವವರಲ್ಲ ಹಸ್ತಕ್ಷೇಪ ಮಾಡಿರುವುದಿಲ್ಲ.ರಾಜ್ಯ ಗುತ್ತಿಗೆ ಸಂಘದವರು ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ. ಅವರು ಯಾವ ಯಾವ ಸಮಯದಲ್ಲಿ ಏನು ಆರೋಪ ಮಾಡುತ್ತಿದ್ದಾರೆಂದು ತಿಳಿಯಲ್ಲ ಎಂದು ತಿಳಿಸಿದ್ದಾರೆ.

ನರೇಗಾ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ. ರೈತರ ಕಾಯ್ದೆ ಹೇಗೆ ವಾಪಾಸ್ ಪಡೆದರೋ ಅದೇರೀತಿ ಇದನ್ನು ವಾಪಾಸ್ ಪಡೆಯಬೇಕು. ನಮ್ಮ ನರೇಗಾ ಜನರಿಗೆ ಯಾವ ರೀತಿ ಅನುಕೂಲ ಆಗಿತ್ತು‌‌ . ನಮ್ಮದೆ ಆದ ರೀತಿಯಲ್ಲಿ ನಾವು ಜಾಹೀರಾತು ನೀಡುತ್ತಿದ್ದೇವೆ.ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ನರೇಗಾದಲ್ಲಿ 7 ಸಾವಿರ ಕೋಟಿ ರೂ ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿತ್ತು.ಉದ್ಯೋಗ ನೀಡುವ ಕುರಿತು ಪಂಚಾಯತಿ ಸದಸ್ಯರು ತೀರ್ಮಾನ ಮಾಡುತ್ತಿದ್ದರು. ಅವರ ಹಕ್ಕನ್ನು ಕೇಂದ್ರ ಕಸಿದಿದೆ‌. ಅದನ್ನು ಕೇಂದ್ರ ತೀರ್ಮಾನ ಮಾಡುತ್ತಿದೆ ಎಂದ್ರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಮನ್ರೇಗಾದಲ್ಲಿ ವೈಯಕ್ತಿಕ ಕಾಮಗಾರಿ ಸಾಕಷ್ಟು ನಡೆಯುತ್ತಿದೆ‌‌ .ನಮ್ಮ ಕ್ಷೇತ್ರದಲ್ಲಿ ನಾವು ಮನ್ರೇಗಾದಲ್ಲಿ ಸಾಕಷ್ಟು ಕಾಮಗಾರಿ ನಡೆಸಲಾಗಿದೆ. ಅದರ ಬಗ್ಗೆ ತನಿಖೆ ನಡೆಸಿದರು ಕೊನೆಗೆ ಅದರ ಬಗ್ಗೆ ನಮಗೆ ರಾಷ್ಟ್ರೀಯ ಪ್ರಶಸ್ತಿ ನೀಡಿದರು. ಯೋಜನೆಯಲ್ಲಿ ಗಾಂಧಿಜೀ ಹೆಸರನ್ನು ತೆಗದು ಹಾಕಿದ್ದಾರೆ. ಇದರ ಕುರಿತು ಅಧಿವೇಶನದಲ್ಲಿ ಮನ್ರೇಗಾ ಜಾರಿ ಮಾಡಬೇಕೆಂದು ತೀರ್ಮಾನ ಮಾಡಿ ಕೇಂದ್ರಕ್ಕೆ ಕಳುಹಿಸಲಾಗುವುದು‌. ಅಲ್ಲದೆ ಪ್ರತಿ ಗ್ರಾ.ಪಂ.ಗೂ ಗಾಂಧಿಜೀ ಹೆಸರನ್ನು  ಹಾಕಬೇಕೆಂದು ಸೂಚಿಸಲಾಗಿದೆ. ಕೇಂದ್ರದವರು ಕೃಷಿ  ಕೆಲಸ ಇರುವಾಗ ಕೆಲಸ‌ ಕೊಡಲ್ಲ ಎಂದು ಹೇಳಿದ್ದಾರೆ. ಇದು ಸರಿ ಅಲ್ಲ. ಕೇಂದ್ರ ಸರ್ಕಾರ ಈಗ ನೀಡಿರುವ ಕಾನೂನು ಮಾಡಿರುವುದು ಸರಿಯಲ್ಲ. ಬಿಜೆಪಿ ಪಕ್ಷದವರು ಮೊದಲು ಗಾಂಧಿಜೀರನ್ನು ಕೊಂದರು .ಈಗ ಅವರು ಅವರ ಹೆಸರನ್ನು ತೆಗೆದು ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರ ಗಡಿಯಲ್ಲಿ 400 ಕೋಟಿ ರೂ. ದರೋಡೆ ವಿಚಾರದ ಬಗ್ಗೆ ಮಾತನಾಡಿ 400 ಕೋಟಿ ರೂ. ಕಳ್ಳತನ ಕುರಿತು ಕೇಂದ್ರದವರ ಬಳಿಯೇ ಸಿಬಿಐ ಇದೆ ತನಿಖೆ ಮಾಡಲಿ.ಸ್ಥಳೀಯ ಸಂಸ್ಥೆ ಚುನಾವಣೆ ನಾವು ನಡೆಸುತ್ತೇವೆ. ನಾಳೆ ನಾ‌ಡಿದ್ದು ಮೀಸಲಾತಿ ಕುರಿತು ಕೋರ್ಟ್ ಇದೆ. ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ನಾವು ಮಾಡುತ್ತೇವೆ ಎಂದ ಅವರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕುರಿತ ಬಗ್ಗೆ ಪ್ರತಿಕ್ರಿಯಿಸಿ ಎರಡು ವರ್ಷ ಅಥವಾ ಮುಂದಿನ ಆದೇಶದವರೆಗೂ ಅಂತ ಇದೆ .ನೋಡೋಣ ಪಕ್ಷ ಏನು ತೀರ್ಮಾನ ಮಾಡುತ್ತದೆ ಎಂದಿದ್ದಾರೆ.