ಬೆಂಗಳೂರು; ಧರ್ಮದ ಕಾಲಂ ನಲ್ಲಿ ನಾಸ್ತಿಕ ಎಂದು ಬರೆಸಲು ಅವಕಾಶ ನೀಡಿರುವುದಕ್ಕೆ ಆಕ್ಷೇಪ ವಿಚಾರದ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದು ಇದು ವಿವಾದ ಯಾಕೆ ಆಗುತ್ತೆ. ದೇವರನ್ನು ನಂಬಿದವರು ನಂಬದವರು ಇಬ್ಬರೂ ಇದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ, ನಾಸ್ತಿಕರು ಇಲ್ಲ ಅಂತೀರಾ ಇದ್ದಾರಲ್ಲ. ಇದು ಬಿಜೆಪಿ ಸರ್ಕಾರ ಅಲ್ಲ ಕಾಂಗ್ರೆಸ್ ಸರ್ಕಾರ. ಈ ಸರ್ಕಾರದಲ್ಲಿ ಎಲ್ಲರೂ ಸರ್ವ ಸ್ವತಂತ್ರರು ಎಂದಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವ ಸರ್ಕಾರ. ಕೆಲವು ನಾಸ್ತಿಕರು ಅಂತ ಹೇಳಿಕೊಳ್ಳುತ್ತಾರೆ. ಕೆಲವರು ಜಾತಿ ಗೊತ್ತಿಲ್ಲ ಅಂತಾನೂ ಹೇಳಿದ್ದಾರೆ. ದೇವರನ್ನ ನಂಬೋರು ಇದ್ದಾರೆ ನಾನು ದೇವರನ್ನು ನಂಬುತ್ತೇನೆ.ಬಿಜೆಪಿಯವರನ್ನ ಎಲ್ಲದಕ್ಕೂ ಕೆಳೋದಕ್ಕೆ ಆಗಲ್ಲ. ಯಾರು ಏನು ಬರೆಸಬೇಕು ಅದನ್ನ ಬರೆಸಲು ಸರ್ವ ಸ್ವತಂತ್ರರಿದ್ದಾರೆ. ಹೇಳೋರು ಅವರು ಬರೆದುಕೊಳ್ಳೋರು ನಾವು. ಅವರು ಬರೆಸ್ತಾರೋ ಬಿಡ್ತಾರೋ ಅವರಿಗೆ ಬಿಟ್ಟ ವಿಚಾರ .ನಾವು ಹೀಗೆ ಬರೆಯಿರಿ ಅಂತ ಹೇಳೋಕೆ ಹೋಗಲ್ಲ ಎಂದು ಹೇಳಿದ್ದಾರೆ.
ಮತಾಂತರ ಆದವರನ್ನ ಕ್ರಿಶ್ಚಿಯನ್ ಅಂತಲೇ ನಿರ್ಧರಿಸಲಾಗತ್ತೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ . ಅವರ ಹೇಳಿಕೆಯನ್ನು ನಾವು ಸ್ವಾಗತ ಮಾಡುತ್ತೇವೆ. ಹಿಂದಿನ ಕೆಲವು ಸಮಸ್ಯೆಗಳಿಂದ ಕೆಲ ತಿದ್ದುಪಡಿಗಳನ್ನು ಮಾಡಿದ್ದೇವೆ. ಇದು ಎಲ್ಲರಿಗೂ ಅನುಕೂಲವಾಗಬೇಕು ಯಾರಿಗೂ ಅನಾನುಕೂಲ ಆಗಬಾರದು. ಈ ಬಾರಿ ಒಬ್ಬೊಬ್ಬರಿಗೆ ಒಂದು ವಾರ್ಡ್ ಅನ್ನು ಮಾಡಿದ್ದೇವೆ.ಒಬ್ಬ ಶಿಕ್ಷಕರು ಒಂದು ಬ್ಲಾಕ್ ನಲ್ಲಿ ಕೆಲಸ ಮಾಡಬೇಕು. ಯಾರು ಯಾವ ಬ್ಲಾಕ್ ನಲ್ಲಿ ಕೆಲಸ ಮಾಡಿಲ್ಲ ಅನ್ನೋದು ಗೊತ್ತಾಗುತ್ತೆ. ಹಾಗಾಗಿ ಈ ಬಾರಿ ಸ್ವಲ್ಪ ವ್ಯವಸ್ಥಿತವಾಗಿ ಮಾಡ್ತಿದ್ದೇವೆ . ನಾನು ವಿನಂತಿ ಮಾಡುತ್ತೇನೆ ಎಲ್ಲರೂ ಸರ್ವೇಯಲ್ಲಿ ಭಾಗಿಯಾಗಿ ಸರ್ವೆಯನ್ನು ಯಶಸ್ವಿಗೊಳಿಸಿ. ತುಳಿತಕ್ಕೆ ಒಳಗಾದವರಿಗೆ ಕೆಳಮಟ್ಟದವರಿಗೆ ಏನಾದರೂ ಯೋಜನೆ ಕೊಡಬೇಕು ಅನ್ನುವ ಆಶಯ ಇದೆ. ಇದಕ್ಕೆ ಸಹಕಾರ ಮಾಡಿ ಅಂತ ವಿನಂತಿ ಮಾಡುತ್ತೇನೆ.ವೀರಶೈವ ಲಿಂಗಾಯತ ಇರಬಹುದು ಒಕ್ಕಲಿಗರು ಇರಬಹುದು ದಲಿತರ ಇರಬಹುದು. ಅವರು ಸರ್ವ ಸ್ವತಂತ್ರ ಅವರು ಏನು ಜಾತಿ ಬರೆಸ್ತಾರೋ ಅದಕ್ಕೆ ಅವರು ಸರ್ವ ಸ್ವತಂತ್ರರು. 60 ಪ್ರಶ್ನೆಗಳು ಅದರಲ್ಲಿ ಏನು ಹೇಳುತ್ತಾರೆ ಅದನ್ನು ಬರೆದುಕೊಂಡು ಬರುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಹಾಸನನದ ಘಟನೆ ನಿಜಕ್ಕೂ ದುರಂತ ಅನ್ನಿಸುತ್ತದೆ. ಪಾಪ ಮಕ್ಕಳು ಸಣ್ಣ ಸಣ್ಣ ವಯಸ್ಸಿನವರಿಗೆ ಆ ದುರಂತದಲ್ಲಿ ಅನ್ಯಾಯ ವಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಆ ಫ್ಯಾಮಿಲಿಗಳಿಗೆ ಆಸ್ಪತ್ರೆಯಲ್ಲಿ ಇರುವವರಿಗೆ ಚಿಕಿತ್ಸೆ ಕೊಡಿಸುತ್ತೇನೆ ಎಂದಿದ್ದಾರೆ. ಮರಣ ಹೊಂದಿದವರೊಗೂ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದಾರೆ. ಬಹಳ ದುರಂತ ಇದು ಆಗಬಾರದಿತ್ತು ಆಗಿದೆ ಕಾನೂನು ಪ್ರಕಾರವೂ ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ತಾರೆ. ಮೆರವಣಿಗೆ ಹೊರಟಾಗ ಗಾಡಿ ಬಂದಿದೆ ಮಹಾರಾಷ್ಟ್ರ ಪಾಸಿಂಗ್ ಗಾಡಿ ಅಂತ ಕೇಳಿದ್ದೇನೆ. ಇದರಲ್ಲಿ ಪೊಲೀಸ್ ವೈಫಲ್ಯ ಅಂತ ಬರೋದಿಲ್ಲ ದುರಂತ ಅಂತೂ ಆಗಿದೆ.ಸಂಬಂಧ ಫಟ್ಟ ಒಲಾಖೆ ಸಚಿವರು ಮಾತನಾಡ್ತಾರೆ ಆಗಿರುವ ಘಟನೆ ನೋವು ತರುವ ಸಂಗತಿ ಎಂದು ಹೇಳಿದ್ದಾರೆ.











