ಬೆಂಗಳೂರು; ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್ ಜೈಲು ಸೇರಿ 19 ದಿನಗಳು ಕಳೆದಿವೆ. ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಅವರು ಪರದಾಡುತ್ತಿದ್ದಾರೆ.
ಡಿ ಬಾಸ್ ದರ್ಶನ್ ಅವರನ್ನು 19 ದಿನಗಳಲ್ಲಿ ಅವರ ಪತ್ನಿ ಮೂರು ಬಾರಿ ಭೇಟಿಯಾಗಿದ್ದಾರೆ,. ಮೊದಲಿಗೆ ಪುತ್ರ ವಿನೀಶ್ ಹಾಗೂ ವಿಜಿ ಅವರು ದರ್ಶನ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ದರ್ಶನ್ ಪತ್ನಿ ಹಾಗೂ ಪುತ್ರನ ಮುಂದೆ ಕಣ್ಣೀರು ಹಾಕಿದ್ರು. ಅದಾದ ಮೇಲೆ ದರ್ಸನ್ ಪತ್ನಿ, ಪುತ್ರ, ತಾಯಿ ಮೀನಾ ತೂಗುದೀಪ, ತಮ್ಮ ದಿನಕರ್ ದರ್ಶನ್ ಅವರನ್ನು ಭೇಟಿ ಮಾಡಿದ್ದರು.
ಇದರ ಮಧ್ಯೆ ದರ್ಶನ್ ಅವರ ಆರೋಗ್ಯದಲ್ಲೂ ಏರುಪೇರಾಗಿದೆ. ಜೈಲೂಟ ಮಾಡಲು ಸಾಧ್ಯವಾಗುತ್ತಿಲ್ಲ. ಭೇದಿ ಕಾಣಿಸಿಕೊಂಡಿರೋದರಿಂದ ಮನೆಯೂಟ ಕೊಡುವಂತೆ ರಿಟ್ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದಾರೆ. ಪತಿಯ ಕಷ್ಟ ನೋಡಲು ಸಾಧ್ಯವಾಗದೇ ಇವತ್ತು ವಿಜಯಲಕ್ಷ್ಮೀ ಅವರು ಪತಿಗಾಗಿ ಜೈಲಿನ ಬಳಿ ಓಡೋಡಿ ಬಂದಿದ್ರು. ಅವರ ಜೊತೆ ಪುತ್ರ ವಿನೀಶ್ ಹಾಗೂ ದರ್ಶನ್ ಅಕ್ಕನ ಮಗ ಚಂದನ್ ಇದ್ದರು. ಪತಿಗಾಗಿ ವಿಜಯಲಕ್ಷ್ಮೀ ಬಟ್ಟೆ, ಬೆಡ್ ಶೀಟ್, ಹಣ್ಣು, ಸ್ನ್ಯಾಕ್ಸ್ ಹೊತ್ತು ತಂದಿದ್ದರು.ಆದರೆ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಸಿಬ್ಬಂದಿ ಬಟ್ಟೆ ಹಾಗೂ ಹಣ್ಣುಗಳನ್ನು ಮಾತ್ಪರ ಕೊಂಡೊಯ್ಯಲು ಅಕಾಶ ನೀಡಿದ್ರು. ಹಾಗಾಗಿ ಅಷ್ಟನ್ನೇ ಕೊಡೊಯ್ದರು. ಇದರ ಮಧ್ಯೆ ಊಟದ ವಿರಾಮದ ಸಮಯದಲ್ಲಿ ವಿಜಯಲಕ್ಷ್ಮೀ ಅವರು ಜೈಲಿಗೆ ಹೋದದ್ದರಿಂದ ಅವರನ್ನು ಕೂಡಲೇ ಜೈಲಿನ ಒಳಗೆ ಬಿಡಲಿಲ್ಲ. ಊಟದ ಅವಧಿ ಮುಗಿದ ಬಳಿಕ ಒಳಗೆ ಕಳುಹಿಸಲಾಯಿತು. ಮೂರು ಜನ ಕೆಲ ಹೊತ್ತು ದರ್ಶನ್ ಅವರ ಜೊತೆ ಮಾತನಾಡಿ ವಾಪಾಸ್ ಬಂದಿದ್ದಾರೆ. ವಿಜಿ ಅವರು ದರ್ಶನ್ ಅವರಿಗೆ ಧೈರ್ಯ ಹೇಳಿ ವಾಪಾಸ್ಸಾಗಿದ್ದಾರೆ.
ದರ್ಶನ್ ರಿಟ್ ಅರ್ಜಿಯ ವಿಚಾರಣೆ ಮುಂದೂಡಿಕೆ
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.
ಈಗಾಗಲೇ ದರ್ಶನ್ ಅವರು ಜೈಲು ಸೇರಿ 19 ದಿನಗಳು ಕಳೆದಿವೆ. ಜೈಲು ಸೇರಿದಾಗಿನಿಂದ ನಟ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ.ಯಾರ ಜೊತೆಯೂ ಮಾತನಾಡದೇ ತಮ್ಮ ಪಾಡಿಗೆ ಸಮಯ ಕಳೆಯುತ್ತಿದ್ದಾರೆ.ಬೇಜಾರಾದರೆ ಹಿಂದಿ ಸಿನಿಮಾ, ಸ್ಫೋರ್ಟ್ಸ್ ಚಾನೆಲ್ ಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದಾರೆ. ಇದರ ನಡುವೆ ದರ್ಶನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಜೈಲಿನ ಊಟ ದರ್ಶನ್ ಅವರಿಗೆ ಸೇರುತ್ತಿಲ್ಲ. ಭೇದಿಯಿಂದ ಬಳಲುತ್ತಿದ್ದಾರೆ. ಅಲ್ಲದೇ ಮಲಗಲು ಹಾಸಿಗೆ ಇಲ್ಲದ ಕಾರಣ ನೆಲದಲ್ಲೇ ಮಲಗುತ್ತಿದ್ದು ನಿದ್ದೆಯಿಲ್ಲದೇ ಬಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟ ದರ್ಶನ್ ಪರವಾಗಿ ಅವರ ವಕೀಲರು ದರ್ಶನ್ ಗೆ ಮನೆಯೂಟ, ಮಲಗಲು ಹಾಸಿಗೆ ಹಾಗೂ ಸಮಯ ಕಳೆಯಲು ಓದಲು ಪುಸ್ತಕ ಒದಗಿಸುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಇಂದು ಈ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್ ಕೃಷ್ಣಕಮಾರ್ ಪೀಠ ವಿಚಾರಣೆ ನಡೆಸಿತು.ಈ ಸಂದರ್ಭದಲ್ಲಿ ಇದೇ ವಾದ ಮಂಡಿಸಿದ ದರ್ಶನ್ ಪರ ವಕೀಲರು ಜೈಲು ನಿಯಮಾವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್ಗೆ ಮನೆ ಊಟದ ಅವಕಾಶ ನೀಡಿಲ್ಲ ಎಂದರು. ಆಗ ನ್ಯಾಯಾಧೀಶರು ಈ ಪ್ರಕರಣವನ್ನು ಕೂಡ ಇತರ ಪ್ರಕರಣಗಳಂತೆ ಪರಿಗಣಿಸಲಾಗುವುದು ಎಂದು ಹೇಳಿ ನಟ ದರ್ಶನ್ ಅವರ ರಿಟ್ ಅರ್ಜಿಯನ್ನು ಜುಲೈ 18 ಕ್ಕೆ ಮುಂದೂಡಿದರು. ಜುಲೈ 18 ಕ್ಕೆ ಈ ಅರ್ಜಿಯ ವಿಚಾರಣೆ ನಡೆಯಲಿದ್ದು ಅಂದು ಏನಾಗುತ್ತೆ ಕಾದು ನೋಡ್ಬೇಕು. ಇನ್ನೊಂದು ಕಡೆ ನಟ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಕೂಡ ಜುಲೈ 18ಕ್ಕೆ ಮುಕ್ತಾಯವಾಗಲಿದ್ದು ಅಂದೇ ಅವರನ್ನು ನ್ಯಾಯಾಧೀಶರ ಮುಂದೆ ಜೈಲಾಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಿದ್ದಾರೆ.