ಮನೆ Latest News ಒಂದು ಮುಳ್ಳು ಹಂದಿ ಬಗ್ಗೆ ಮಾತಾಡುತ್ತಾರೆ ಅಂದರೆ ಇದು ಇನ್ನೊಂದು ಮುಳ್ಳು ಹಂದಿ ಇರಬೇಕು; ಮಾಜಿ...

ಒಂದು ಮುಳ್ಳು ಹಂದಿ ಬಗ್ಗೆ ಮಾತಾಡುತ್ತಾರೆ ಅಂದರೆ ಇದು ಇನ್ನೊಂದು ಮುಳ್ಳು ಹಂದಿ ಇರಬೇಕು; ಮಾಜಿ ಸಂಸದ ಪ್ರತಾಪಸಿಂಹಗೆ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು

0

ಬೆಂಗಳೂರು; ಒಂದು ಮುಳ್ಳು ಹಂದಿ ಬಗ್ಗೆ ಮಾತಾಡುತ್ತಾರೆ ಅಂದರೆ ಇದು ಇನ್ನೊಂದು ಮುಳ್ಳು ಹಂದಿ ಇರಬೇಕು ಮಾಜಿ ಸಂಸದ ಪ್ರತಾಪಸಿಂಹಗೆ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು ಕೊಟ್ಟಿದ್ದಾರೆ.

ರನ್ನು ಮಾಜಿ ಸಂಸದ ಪ್ರತಾಪಸಿಂಹ ಮುಳ್ಳುಹಂದಿಗೆ ಹೋಲಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು ಪಾಪ ಅವರು ಬಹಳ ಹತಾಶರಾಗಿದ್ದಾರೆ. ಒಂದು ಮುಳ್ಳು ಹಂದಿ ಬಗ್ಗೆ ಮಾತಾಡುತ್ತಾರೆ ಅಂದರೆ ಇದು ಇನ್ನೊಂದು ಮುಳ್ಳು ಹಂದಿ ಇರಬೇಕು.ಅಪ್ಪನಿಗೆ ಹುಟ್ಟಿದ್ದರೆ ಅಂತೆಲ್ಲಾ ಪ್ರತಾಪಸಿಂಹ ಹೇಳಿದ್ದಾರೆ. ಪ್ರತಾಪಸಿಂಹ ಅವರೇ ನಮ್ಮಪ್ಪನ ಬಗ್ಗೆ ನನಗೆ ಕ್ಲಾರಿಟಿ ಇದೆ. ನಮ್ಮಪ್ಪನ ಬಗ್ಗೆ ನೀನ್ಯಾಕೆ ಯೋಚನೆ ಮಾಡುತ್ತಿದ್ದೀಯಾ?. ನೀನು ನನ್ನ ಆಸ್ತಿಯಲ್ಲಿ ಭಾಗ ಕೇಳಬೇಕು ಅಂತಾ ಇದ್ದಿಯಾ ಏನು?. ನಮ್ಮಪ್ಪನ ಬಗ್ಗೆ ಪ್ರತಾಪಸಿಂಹ ನನಗೆ ಕ್ಲಾರಿಟಿ ಇದೆ ಗುರೂ. ನೀನು ನಮ್ಮಪ್ಪನ ಬಗ್ಗೆ ಯೋಚನೆ ಮಾಡುತ್ತಿರುವುದು ನೋಡುತ್ತಿದ್ದರೆ ಏನೋ ನೀನು ಆಸ್ತಿಯಲ್ಲಿ ಭಾಗ ಕೇಳುತ್ತಿದ್ದಿಯಾ ಅನ್ನಿಸುತ್ತದೆ.ಏನು ಸಿಂಹ ಅರ್ಥ ಆಯ್ತಾ ಏನು? ಎಂದು ಪ್ರಶ್ನಿಸಿದ್ದಾರೆ.

ಅಳಂದದಲ್ಲಿ ಮತದಾನದ ದಾಖಲೆ ಪತ್ರ ಸುಟ್ಟು ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಬಿಜೆಪಿ ಮೇಲೆ ಮತಗಳ್ಳತನ ಆರೋಪ ಮಾಡಿದ್ದು ಇಂದು ಸಾಬೀತಾಗಿದೆ. ಅಳಂದದ ಮಾಜಿ ಶಾಸಕನ ಕೈವಾಡ ಎದ್ದು ಕಾಣುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕಳ್ಳತನದಿಂದ ಗೆದ್ದು ಅಪವಿತ್ರ ಸರ್ಕಾರ ಮಾಡಿದ್ದಾರೆ. ರಾಹುಲ್ ಗಾಂಧಿ ಆರೋಪ ನಿಜ ಎಂಬುದು ಅಳಂದದಲ್ಲಿ ಎಸ್ಐಟಿ ದಾಳಿಯಿಂದ ಸಾಬೀತಾಗಿದೆ. ಬಿಜೆಪಿಯವರು ಕಳ್ಳರು, ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.

ಚಿತ್ತಾಪುರದಲ್ಲಿ ನಾಳೆ ಆರ್ ಎಸ್ ಎಸ್ ಪಥಸಂಚಲನ ವಿಚಾರದ ಬಗ್ಗೆ ಮಾತನಾಡಿದ ಅವರು ಅಶೋಕಣ್ಣ, ಛಲವಾದಿ ನಾರಾಯಣ ಸ್ವಾಮಣ್ಣ, ಅಶ್ವಥ್ ನಾರಾಯಣಣ್ಣ, ಸಿ.ಟಿ. ರವಿಯಣ್ಣ ನಿಮ್ಮ ಮಕ್ಕಳಗೂ ಗಣವೇಷ ಹಾಕಿಸಿ. ಓ ಹಿಂದುತ್ವದ ಇಲಿ ಯತ್ನಾಳ್ ಸಾಹೇಬರೇ ತಮ್ಮ ಮಕ್ಕಳಿಗೂ ಗಣವೇಷ ಹಾಕಿಸಿ ಅಖಾಡಕ್ಕೆ ಇಳಿಸಿ. ನಿನ್ನೆ ನಮಾಜ್ ನಿಷೇಧಿಸುವಂತೆ ಯತ್ನಾಳ್ ಸಾಹೇಬರು ಪತ್ರ ಬರೆದಿದ್ದಾರೆ. ಯತ್ನಾಳ್ ಸಾಹೇಬರೇ ಬ್ರೈನ್ ತಲೆಬುರುಡೆಯೊಳಗೆ ಇರುತ್ತದೆ. ನಿಮ್ಮ ಬ್ರೈನ್ ಎಲ್ಲಿದೆ ಅಂತಾ ನನಗೆ ಡೌಟ್. ಅವರು ಮಸೀದಿ ಆವರಣದಲ್ಲಿ ನಮಾಜ್ ಮಾಡಿಕೊಳ್ಳುತ್ತಾರೆ. ನೀವು ಏನೋ ಮಾತಾಡ್ತಿರಲ್ಲಾ? ತಲೆಗೆ ಹಾಕುವುದನ್ನು ಕಾಲಿಗೆ ಹಾಕಿದಂತೆ ಎನ್ನುವ ಹಾಗೆ ನಾವು ತಲೆ ಬಗ್ಗೆ ಮಾತಾಡಿದರೆ ಯತ್ನಾಳ್ ಕಾಲು ಬಗ್ಗೆ ಮಾತಾಡುತ್ತಾರೆ ಎಂದಿದ್ದಾರೆ.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ಭದ್ರತೆ ವಾಪಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನಾರಾಯಣಸ್ವಾಮಣ್ಣ ಯಾರಿಗೂ ಹೆದರಲ್ಲಾ ಅಂತಾ ಸುದ್ದಿಗೋಷ್ಠಿ ಹೇಳುತ್ತಿದ್ರಿ. ಯಾಕಣ್ಣಾ ನಿಮಗೆ ಅಷ್ಟು ಭಯನಾ? ಅಷ್ಟು ಹೆದರು ಪುಕ್ಕಲರಾ ನೀವು?. ನಿಮ್ಮನ್ನು ಯಾರ ಏನು ಮಾತಾಡುತ್ತಾರಣ್ಣಾ?. ಯಾರು ನಿಮ್ಮ ಹತ್ತಿರ ಬರುತ್ತಾರಣ್ಣಾ?. ನಿಮಗೆ ಯಾರಾದರೂ ಏನಾದರೂ ಮಾಡಕ್ಕಾಗುತ್ತಾ?. ಜನ ನಿಮ್ಮ ಹತ್ತಿರವೇ ಬರಲ್ಲ. ಜನ ನಿಮ್ಮನ್ನು ಒಪ್ಪಿಕೊಳ್ಳುವುದಕ್ಕೇ ರೆಡಿ ಇಲ್ಲ. ಛಲವಾದಿ ನಾರಾಯಣಸ್ವಾಮಿಯವರು ಈ ವಾದದಿಂದ ಆಚೆ ಬರಬೇಕು ಎಂದು ಹೇಳಿದ್ದಾರೆ.