ಮನೆ Latest News 3 ಬಾರಿ, 4 ಬಾರಿ ಗೆದ್ದಿರೋರು ಸಚಿವ ಸಂಪುಟದಲ್ಲಿ ಅವಕಾಶ ಕೊಡಿ ಅಂತ ಕೇಳಿದ್ದಾರೆ: ಬೆಂಗಳೂರಿನಲ್ಲಿ...

3 ಬಾರಿ, 4 ಬಾರಿ ಗೆದ್ದಿರೋರು ಸಚಿವ ಸಂಪುಟದಲ್ಲಿ ಅವಕಾಶ ಕೊಡಿ ಅಂತ ಕೇಳಿದ್ದಾರೆ: ಬೆಂಗಳೂರಿನಲ್ಲಿ ಗೃಹ ಸಚಿವ ಡಾ.‌ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು: 3 ಬಾರಿ, 4 ಬಾರಿ ಗೆದ್ದಿರೋರು ಸಚಿವ ಸಂಪುಟದಲ್ಲಿ ಅವಕಾಶ ಕೊಡಿ ಅಂತ ಕೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ.‌ಜಿ ಪರಮೇಶ್ವರ್ ಹೇಳಿದ್ದಾರೆ.

ಸಚಿವ ಸಂಪುಟ ಪುನರ್ ರಚನೆಗೆ ಡಿನ್ನರ್ ಮೀಟಿಂಗ್ ವಿಚಾರದ ಬಗ್ಗೆ  ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 3 ಬಾರಿ, 4 ಬಾರಿ ಗೆದ್ದಿರೋರು ಸಚಿವ ಸಂಪುಟದಲ್ಲಿ ಅವಕಾಶ ಕೊಡಿ ಅಂತ ಕೇಳಿದ್ದಾರೆ. ಅದರಲ್ಲಿ ತಪ್ಪೇನು ಕಾಣಿಸುತ್ತಿಲ್ಲ,‌ ಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಮುಖ್ಯಮಂತ್ರಿಗಳು ಹೈಕಮಾಂಡ್ ಗಮನಕ್ಕೆ ತರುತ್ತಾರೆ. ಹೊಸದಾಗಿ ಕ್ಯಾಬಿನೆಟ್ ಮಾಡುವಾಗ ಅದನ್ನು ಪರಿಗಣಿಸುತ್ತಾರೆ. ಸಚಿವ ಸಂಪುಟ ಹೊಸದಾಗಿ ಮಾಡುವಾಗ , ಪುನರ್ ರಚನೆ ಮಾಡುವಾಗ ಇದೆಲ್ಲ ಸ್ವಾಭಾವಿಕವಾಗಿ ನಡೆಯುವ ಪ್ರಕ್ರಿಯೆ .ನಾನು ಮಂತ್ರಿ ಆಗಬೇಕು ಎನ್ನುವುದು ಸ್ವಾಭಾವಿಕವಾಗಿ ಇದೆ. ಮೊದಲೆಲ್ಲಾ ಒಬ್ಬೊಬ್ಬರೇ ಹೋಗಿ ಕೇಳೋರು. ಜಿಲ್ಲಾವಾರು ಹೋಗಿ ಕೇಳುತ್ತಿದ್ದರು. ಈ ಬಾರಿ ಸ್ವಲ್ಪ ಎಲ್ಲ ಒಗ್ಗಟ್ಟಾಗಿ ನಮ್ಮಲ್ಲಿ ಯಾರಿಗಾದರೂ ಕೊಡಿ ಅಂತ ಕೇಳುತ್ತಿದ್ದಾರೆ.ಮೊದಲ ಬಾರಿ ಗೆದ್ದವರು ಕೂಡ ಕೇಳಿದ್ದಾರೆ. ಅದನ್ನು ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಎಂದ ಅವರು ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಕ್ಲಾರಿಟಿ ಕೊಡಬೇಕಾ ಎಂಬ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಮೀಟಿಂಗ್ ಮಾಡೋದು ತಪ್ಪೇನು ಅಲ್ಲ ಎಂದಿದ್ದಾರೆ.

ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್ ವಿಚಾರದ ಬಗ್ಗೆ ಮಾತನಾಡಿ ಏನೇನು ತಪ್ಪು ಮಾಡಿದ್ದಾರೆ ಅನ್ನೋದರ ಬಗ್ಗೆ ವರದಿ ಕೇಳಿದ್ದೇನೆ. ಕೆಲ ವಿಡಿಯೋಗಳೆಲ್ಲ ಬಂದಿದೆ.ಪ್ರಾಥಮಿಕವಾಗಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಇಲಾಖಾ ತನಿಖೆ ಮಾಡುತ್ತಾರೆ. ಅದರಲ್ಲಿ ಏನು ಬರುತ್ತೋ ಅದರ ಮೇಲೆ ಕ್ರಮ ಆಗುತ್ತೆ ಎಂದ ಅವರು ಸದನದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡದ್ದಕ್ಕೆ ಸಿಎಂ ಸಚಿವರಿಗೆ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿ ಸದನದಲ್ಲಿ ಸ್ಪೀಕರ್ ಮೂರ್ನಾಲ್ಕು ಬಾರಿ ಪ್ರಸ್ತಾಪ ಮಾಡಿದ್ದರು. ಪರಿಷತ್ ನಲ್ಲೂ ಪ್ರಸ್ತಾಪ ಮಾಡಿದ್ರು. ಮೊನ್ನೆ ನಾನೇ ಉತ್ತರ ಕೊಡುವಾಗ 224 ಪ್ರಶ್ನೆಗೆ ಕೇವಲ 84ಕ್ಕೆ ಉತ್ತರ ಕೊಟ್ಟಿದ್ದಾರೆ ಅಂತ ಹೇಳಿದ್ರು. ಸ್ವಾಭಾವಿಕವಾಗಿ ವಿರೋಧ ಪಕ್ಷದ ನಾಯಕರು ಪ್ರಸ್ತಾಪಿಸಿದ್ದಾರೆ. ಅವರ ಬೇಸರ ವ್ಯಕ್ತಪಡಿಸಿದ್ದಾರೆ. ಸಭಾಧ್ಯಕ್ಷರು ಸ್ವಲ್ಪ ಬೇಸರ ಮಾಡಿಕೊಂಡಿದ್ದರು. ಆನಂತರ ಸದನವನ್ನು ಮುಂದೂಡಿದರು.ನಾವು ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿ ಹೋಗಿ ಭೇಟಿಯಾಗಿದ್ವಿ.ಎಲ್ಲಾ ಅಧಿಕಾರಿಗಳಿಗೆ ನೋಟಿಸ್ ಕೊಡಬೇಕು.ಈ ರೀತಿ ಆಗಬಾರದು ಇದು ಮುಂದುವರೆದರೆ ಸಸ್ಪೆಂಡ್ ಮಾಡಿ ಅಂತ ಸಿಎಂ, ಮುಖ್ಯ ಕಾರ್ಯದರ್ಶಿಗಳಿಗೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಮುಂದಿನ ವಾರದಲ್ಲಿ ಉತ್ತಮ ಆಗಬಹುದು ಅಂತ ಕಾಣುತ್ತೆ.ಯಾವ ಹಂತದಲ್ಲಿ ಉತ್ತರಗಳು ನಿಂತಿದೆ ಅನ್ನೋದು ಗೊತ್ತಿಲ್ಲ. ನಮಗೆ ಪ್ರಶ್ನೆಗಳು ಬಂದಾಗ ಸಹಿ ಮಾಡಿ ಕಳಿಸ್ತೇವೆ. ಅದು ಕಾರ್ಯದರ್ಶಿಗಳ ಬಳಿ ಹೋದಾಗ ಸ್ಕ್ರೀನಿಂಗ್ ಆಗುತ್ತೆ.ಸದನದಲ್ಲಿ ಸದಸ್ಯರಿಗೆ ಕೊಡಬೇಕಾಗಿರೋದು ವಿಧಾನಸಭೆ ಕಾರ್ಯದರ್ಶಿ ಅವರ ಕರ್ತವ್ಯ.ಕೆಲವೊಮ್ಮೆ ಅಲ್ಲಿಯೂ ವಿಳಂಬ ಆಗುತ್ತೆ. ಇದೆಲ್ಲವನ್ನು ನೋಡಿ ಎಲ್ಲಿ ತೊಂದರೆ ಆಗ್ತಾ ಇದೆ ಹೇಳಿ ಅಂತ ಹೇಳಿದ್ದಾರೆ ಎಂದ ಅವರು ನಾಯಕತ್ವ ಬದಲಾವಣೆ ಗೊಂದಲ ಕಾರಣಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ  ಅಧಿಕಾರಿಗಳ ನಿರ್ಲಕ್ಷಕ್ಕೆ ನಾಯಕತ್ವ ಬದಲಾವಣೆ ವಿಚಾರ ಕಾರಣ ಅಲ್ಲ. ಕಾರ್ಯದರ್ಶಿಗಳು ಅವರ ಜವಾಬ್ದಾರಿಯನ್ನು ಮಾಡಬೇಕು . 15 ದಿವಸಗಳ ಮುಂಚೆಯೇ ಪ್ರಶ್ನೆ ಕೊಡಬೇಕು ಅಂತ ಹೇಳುತ್ತಾರೆ.15 ದಿನಕ್ಕೆ ಮುಂಚೆ ಪ್ರಶ್ನೆ ಬಂದಾಗ ಉತ್ತರ ರೆಡಿ ಮಾಡಿಕೊಡಲು 15 ದಿನ ಇರುತ್ತದೆ. ಅದನ್ನು ಕಾರ್ಯದರ್ಶಿಗಳು ಮಾಡಬೇಕು. ಅದು ವಿಧಾನಸಭೆ ಕಾರ್ಯದರ್ಶಿಗಳಿಗೆ ಕಳಿಸಿಕೊಡಬೇಕು. ಅವರು ಪ್ರಿಂಟ್ ಮಾಡಿ ಸದನಕ್ಕೆ ಕೊಡುತ್ತಾರೆ. ಎರಡು ಮೂರು ಹಂತದಲ್ಲಿ ಇರುವುದರಿಂದ ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.

ಒಳ ಮೀಸಲಾತಿ ಜಾರಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ ನಾವು 27ನೇ ತಾರೀಕು ಡಿಸ್ಕಸ್ ಮಾಡ್ತೇವೆ. ಅದನ್ನ ಇಂಪ್ಲಿಮೆಂಟ್ ಮಾಡಬೇಕಾ ಬೇಡವಾ ಅನ್ನೋದನ್ನ ಆನಂತರ ತೀರ್ಮಾನ.ಚುನಾವಣಾ ಆಯೋಗದ ಗಮನಕ್ಕೆ ತಂದು ತೀರ್ಮಾನ ಮಾಡ್ತೀವಿ ಎಂದಿದ್ದಾರೆ. ಬಲ ಸಮುದಾಯಕ್ಕೆ ಅನ್ಯಾಯವಾದರೆ ರಾಜೀನಾಮೆ ಕೊಡಲು ಸಚಿವರು ರಾಜಿನಾಮೆ ಪತ್ರ ರೆಡಿ ಇಟ್ಟುಕೊಂಡಿದ್ದಾರೆ ಎಂಬ ಶಾಸಕ ಎ.ಆರ್ ಕೃಷ್ಣಮೂರ್ತಿ ಹೇಳಿಕೆ ಬಗ್ಗೆ ಮಾತನಾಡಿ ಕೃಷ್ಣಮೂರ್ತಿ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ಪರೋಕ್ಷ ಬೆಂಬಲ ನೀಡಿದ್ದಾರೆ. ಆ ಸನ್ನಿವೇಶ ಬಂದಾಗ ಸಮುದಾಯದ ಪ್ರತಿನಿಧಿಯಾಗಿ ಯಾರು ಏನು ಮಾಡಬೇಕು ಮಾಡುತ್ತಾರೆ ಎಂದಿದ್ದಾರೆ.