ಮನೆ Latest News ಜಾತಿ ಜನಗಣತಿ ಮೂಲಕ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ:ಬೆಂಗಳೂರಿನಲ್ಲಿ ಶಾಸಕ ವಿ. ಸುನೀಲ್ ಕುಮಾರ್ ಹೇಳಿಕೆ

ಜಾತಿ ಜನಗಣತಿ ಮೂಲಕ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ:ಬೆಂಗಳೂರಿನಲ್ಲಿ ಶಾಸಕ ವಿ. ಸುನೀಲ್ ಕುಮಾರ್ ಹೇಳಿಕೆ

0

ಜಾತಿ ಜನಗಣತಿ ಮೂಲಕ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಶಾಸಕ ವಿ. ಸುನೀಲ್ ಕುಮಾರ್ ಹೇಳಿದ್ದಾರೆ

ಜಾತಿ ಜನಗಣತಿ ಮೂಲಕ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಪ್ರಬಲ ವಿರೋಧ ವ್ಯಕ್ತವಾಗುತ್ತಿದ್ದರೂ ಸಿದ್ದರಾಮಯ್ಯ ಮೊಂಡು ವಾದಕ್ಕೆ ಬಿದ್ದಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಒಲಿಸಿಕೊಳ್ಳಲು ಕರ್ನಾಟಕದ ಪೋಪ್ ಆಗಲು ಸಿದ್ಧರಾಮಯ್ಯ ಹೊರಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಸಮೀಕ್ಷೆಯನ್ನು ತರಾತುರಿಯಲ್ಲಿ ಮಾಡಬಾರದು. ಮುಂದಿನ ಬೇಸಿಗೆಯಲ್ಲಿ ಸಮೀಕ್ಷೆ ಇಟ್ಟುಕೊಳ್ಳಿ. ಸರ್ವಪಕ್ಷ ಸಭೆ ಕರೆದು ಎಲ್ಲರ ಸಲಹೆ ಪಡೆದು ಮುಂದುವರೆಯಿರಿ. ಕೇಂದ್ರ ಸರ್ಕಾರವೇ ಜಾತಿ ಗಣತಿ ಮಾಡುತ್ತಿರುವಾಗ ರಾಜ್ಯದ ಗಣತಿಯ ಔಚಿತ್ಯ ಏನು?.ಸಿದ್ಧರಾಮಯ್ಯ ತಮ್ಮ ಅಧಿಕಾರದ ವಿಸ್ತರಣೆಗೆ ಜಾತಿ ಗಣತಿ ಬಳಸಿಕೊಳ್ಳುತ್ತಿದ್ದಾರೆ. ತಕ್ಷಣ ಈಗ ಸಮೀಕ್ಷೆ ನಿಲ್ಲಿಸಿ ಬೇಸಿಗೆ ಕಾಲದಲ್ಲಿ ಮಾಡಿಸಲಿ ಎಂದು ಇದೇ ವೇಳೆ ಬೆಂಗಳೂರಿನಲ್ಲಿ ಶಾಸಕ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.