ಬೆಂಗಳೂರು; ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಸ್ಥಾನ ಕೈತಪ್ಪಿದ ವಿಚಾರಕ್ಕೆ ಸಂಬಂಧಪಟ್ಟಂತೆ ಖರ್ಗೆ ಪರ ಗೃಹ ಸಚಿವ ಪರಮೇಶ್ವರ್ ಬ್ಯಾಟಿಂಗ್ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಎಲ್ಲಾ ಹುದ್ದೆಗಳಿಗೂ ಸಮರ್ಥರು.ಅವರು ಹಿರಿಯರು, ಸುದೀರ್ಘ ಅನುಭವ ಇರುವವರು.ಖರ್ಗೆಯವರು ನಮ್ಮ ಪಕ್ಷದಲ್ಲಿ ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆ.ಯಾರು ಸಿಎಂ ಆಗಬೇಕೆಂದು ನಿರ್ಧಾರ ಮಾಡೋರೇ ಅವರು. ಒಂದು ವೇಳೆ ಅವರು ರಾಜ್ಯ ರಾಜಕಾರಣಕ್ಕೆ ಬರ್ತೀನಿ ಅಂದ್ರೆ ಯಾರೂ ತಪ್ಪು ಭಾವಿಸುವ ಅಗತ್ಯ ಇಲ್ಲ. ಖರ್ಗೆಯವರ ಬಗ್ಗೆ ಈಗ ಯಾರ್ಯಾರು ಮಾತಾಡಿದ್ದಾರೋ ಅವರ್ಯಾರೂ ಖರ್ಗೆಯವರ ಹಂತಕ್ಕೆ ಬೆಳೆದವರಲ್ಲ. ಖರ್ಗೆಯವರು ಏನಾದರೂ ಹೇಳಿದಾಗ ತಪ್ಪಾಗಿ ಭಾವಿಸುವ ಅಗತ್ಯ ಇಲ್ಲ. ಅವರು ರಾಜ್ಯಕ್ಕೆ ಬರ್ತೀನಿ ಅಂತ ಹೇಳಿದರೆ ಅದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.
ಇಂದಿನಿಂದ ಸಿಎಂ ನೇತೃತ್ವದಲ್ಲಿ ಸಭೆ ವಿಚಾರದ ಬಗ್ಗೆ ಮಾತನಾಡಿ ಸಿಎಂ ಜಿಲ್ಲಾವಾರು ಸಭೆ ಮಾಡ್ತಿದ್ದಾರೆ. ಅನುದಾನ, ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತಾರೆ. 2017-18 ರಲ್ಲೂ ಇದೇ ರೀತಿ ಸಭೆಗಳು ನಡೆದಿದ್ವು. ಮುಂದಿನ ಎರಡೂವರೆ ವರ್ಷದಲ್ಲಿ ಹೇಗೆಲ್ಲ ಅಭಿವೃದ್ಧಿ ಮಾಡಬೇಕು ಅನ್ನೋದು ಈ ಸಭೆಯಿಂದ ಅನುಕೂಲ. ಡಿಕೆಶಿ ಅವರೂ ಸಿಎಂ ಜತೆ ಸಭೆಯಲ್ಲಿ ಇರ್ತಾರೆ ಅನ್ಕೊಂಡಿದ್ದೀನಿ. ಅವರಿಗೆ ಸ್ವಲ್ಪ ಹುಷಾರಿಲ್ಲ ಹಾಗಾಗಿ ಅವರು ಬರುತ್ತಿಲ್ಲ ಅನ್ನಿಸುತ್ತದೆ. ಅದರೆ ಡಿಕೆ ಶಿವಕುಮಾರ್ ಅವರೂ ಸಭೆಯಲ್ಲಿ ಇರ್ತಾರೆ ಎಂದು ತಿಳಿಸಿದ್ದಾರೆ.
ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ದೂರು ನೀಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಪೊಲೀಸ್ ಅವ್ರು ಕ್ರಮ ತೆಗೆದುಕೊಳ್ತಾರೆ. ಈ ವಿಚಾರ ಬಹಳ ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಇಂತಹ ಘಟನೆಗಳು ಆಗ್ಬಾರ್ದು. ಅಧಿಕಾರಿಗಳಿಗೆ ನಾನು ಏನೂ ಸೂಚನೆ ಕೊಟ್ಟಿಲ್ಲ. ಕಮಿಷನರ್ ಕ್ರಮ ತೆಗೆದುಕೊಳ್ತಾರೆ ಎಂದು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡಿ ಎಸ್ಐಟಿ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತಗೊಂಡಿದ್ದಾರೆ. ತನಿಖೆ ಮಾಡ್ತಿದ್ದಾರೆ.ತನಿಖೆಯಲ್ಲಿ ನಾವ್ಯಾರೂ ಮಧ್ಯಪ್ರವೇಶ ಮಾಡಲ್ಲ. ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ನಾನು ಮೊದಲಿಂದಲೂ ಹೇಳಿದ್ದೇನೆ ಎಂದ ಅವರು ರಸಗೊಬ್ಬರ ಅಭಾವ, ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾಳಸಂತೆ ಮಾರಾಟ ತಡೆಯಲು ಸಚಿವರು ಸೂಚಿಸಿದ್ದಾರೆ. ಈ ಸಲ ಮುಂಗಾರು ಬೇಗ ಬಂದು ಬೇಡಿಕೆ ಹೆಚ್ಚಾಗಿದೆ. ಕೇಂದ್ರದಿಂದ ನಮಗೆ ಬರಬೇಕಾದ ಗೊಬ್ಬರ ಸಮಯಕ್ಕೆ ಸರಿಯಾಗಿ ಬರಲಿ. ಕಾಳಸಂತೆ ಮಾರಾಟಗಾರರ ಮೇಲೆ ಕೇಸ್ ಹಾಕಲು ಕೃಷಿ ಸಚಿವರು ತಿಳಿಸಿದ್ದಾರೆ. ಕೃಷಿ ಸಚಿವರು ಇಡೀ ರಾಜ್ಯ ನೋಡಬೇಕಲ್ಲ, ಅದಕ್ಕೆ ಪ್ರವಾಸ ಹೋಗಿಲ್ಲ ಎಂದಿದ್ದಾರೆ.