ಬೆಂಗಳೂರು; ನವೆಂಬರ್ ತಿಂಗಳಲ್ಲಿ ಯಾವ ಕ್ರಾಂತಿನೂ ಇಲ್ಲ,ಎಲ್ಲಾ ಅವರವರ ಕೆಲಸದಲ್ಲಿ ಇದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನನ್ನ ದೆಹಲಿ ಪ್ರವಾಸದಲ್ಲಿ ಏನೂ ವಿಶೇಷ ಇಲ್ಲ. ನವೆಂಬರ್ ತಿಂಗಳಲ್ಲಿ ಯಾವ ಕ್ರಾಂತಿನೂ ಇಲ್ಲ. ಎಲ್ಲಾ ಅವರವರ ಕೆಲಸದಲ್ಲಿ ಇದ್ದಾರೆ. ಪಕ್ಷದ ಲೀಡರ್ಸ್ ಇದ್ದಾರೆ, ಭೇಟಿ ಮಾಡಿಕೊಂಡು ಬಂದೆ. ಹೈಕಮಾಂಡ್ ಗೆ ಸಲಹೆ ಕೊಡೋಕೆ ಏನಿಲ್ಲ. ವರಿಷ್ಠರನ್ನ ಬೇಟಿ ಮಾಡಿ ಬರೋದು ದೊಡ್ಡ ವಿಷಯ ಅಲ್ಲ. ಪಕ್ಷದ ತೀರ್ಮಾನಕ್ಕೆ ಬದ್ದರಾಗಿದ್ದೇವೆ. 2016 ರಲ್ಲಿ ನಾನೇ ಪಕ್ಷದ ಕೆಲಸ ಮಾಡ್ತೀನಿ ಅಂದಿದ್ದೆ.ಈಗಲೂ ಪಕ್ಷದ ಕೆಲಸ ಮಾಡೋಕೆ ರೆಡಿ ಇದ್ದೇನೆ. ಪಕ್ಷದ ತೀರ್ಮಾನಕ್ಕೆ ಬದ್ದ, ಸಣ್ಣಪುಟ್ಟ ಭಿನ್ನಮತ ಇದ್ದೇ ಇರುತ್ತೆ ಎಂದು ತಿಳಿಸಿದ್ದಾರೆ.
ನವೆಂಬರ್ ನಲ್ಲಿ ಪವರ್ ಶೇರಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು ಪವರ್ ಶೇರಿಂಗ್ ಪ್ರಸ್ತಾಪವೇ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಬೇರೆ ಮಾತಾಡೋದು ಅವಶ್ಯಕತೆ ಇಲ್ಲ. ಬಿಹಾರ ಎಲೆಕ್ಷನ್ ನಲ್ಲಿ ವರಿಷ್ಠರು ಬ್ಯುಸಿ ಇದ್ದಾರೆ. ನಮ್ಮ ಪಕ್ಷದ ಗೆಲುವಿಗೆ ಎಲ್ಲರೂ ಅವರವರ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಎಲ್ಲರೂ ಪಕ್ಷಕ್ಕಾಗಿಯೇ ಕೆಲಸ ಮಾಡಿದ್ದಾರೆ. ಸರ್ಕಾರದ ದುಡ್ಡನ್ನ ಬಿಹಾರದಲ್ಲಿ ನೇರವಾಗಿ ಬಿಜೆಪಿಯವರು ಹಂಚಿಕೆ ಮಾಡಿದ್ದಾರೆ. ಮಹಿಳೆಯರಿಗೆ 10 ಸಾವಿರ ದುಡ್ಡು ಮೊದಲೇ ಕೊಟ್ಟಿದ್ದಾರೆ. ಮೋದಿ ಮಾಡಿರೋದು ಲೀಗಲೈಸ್ ಕರಪ್ಷನ್. ಇವರು ಹೋಗ್ತಿರೋ ದಾರಿ ಸಂವಿಧಾನಕ್ಕೆ ವಿರುದ್ದ. ಎಷ್ಟೋ ಸ್ವತಂತ್ರ ಸಂಸ್ಥೆಗಳನ್ನ ನಿರ್ನಾಮ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಟನಲ್ ಬಗ್ಗೆ ಬಿಜೆಪಿ ವಿರೋಧ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಬೆಂಗಳೂರು ಟ್ರಾಫಿಕ್ ಬಗ್ಗೆ ಬಿಜೆಪಿ ಅವಧಿಯಲ್ಲಿ ಯಾವುದೇ ಪರಿಹಾರ ಇರಲಿಲ್ಲ. ಟನಲ್ ಗೆ ಈಗ ವಿರೋಧ ಮಾಡುತ್ತಿದ್ದಾರೆ.ತೇಜಸ್ವಿ ಸೂರ್ಯ ಏನು ಮಹಾನ್ ಮೇಧಾವಿನಾ? ಅವರೇನು ಇಂಜಿನಿಯರ್ರಾ? ಟೆಕ್ನಿಕಲ್ ಎಕ್ಸಪರ್ಟಾ?. ಈ ಹಿಂದೆ ಸ್ಟೀಲ್ ಬ್ರಿಡ್ಜ್ ವಿರೋಧ ಮಾಡಿದ್ರು. ಅದನ್ನು ನಾವು ಕೈ ಬಿಟ್ಟಿದ್ದೆವು. ಈಗ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಅಂತಾರೆ. ಎಲ್ಲಿ ಸಾಕಾಗುತ್ತೆ ಪಬ್ಲಿಕ್ ಟ್ರಾನ್ಸ್ಫೋರ್ಟ್.
ಬಿಜೆಪಿ ಕಾಲದಲ್ಲಿ ಒಂದೆ ಒಂದು ಯೋಜನೆ ಮಾಡಲಿಲ್ಲ. ಈಗ ನಾವು ಮಾಡಲು ಹೊರಟರೆ ವಿರೋಧ ಮಾಡುತ್ತಿದ್ದಾರೆ.
ತೇಜಸ್ವಿ ಸೂರ್ಯ ಎಲ್ಲಿದ್ದ ಆಗ?. ಬಿಜೆಪಿ ಏನೆ ಹೇಳಿದ್ರು ನಾವು ಟನಲ್ ಮಾಡೆ ಮಾಡುತ್ತೇವೆ. ಬಿಜೆಪಿ ತನ್ನ ಅವಧಿಯಲ್ಲಿ ಪರ್ಯಾಯವಾಗಿ ಯೋಚನೆ ಮಾಡಲಿಲ್ಲ. ಎಲ್ಲದಕ್ಕೂ ವಿರೋಧ ಮಾಡಿದ್ರೆ ಹೇಗೆ. ಕೇಂದ್ರ ಸಚಿವ ಗಡ್ಕರಿ ಹೇಳಿದ್ದಾರೆ ಟನಲ್ ಮಾಡಲು. ಮುಂಬೈ ಸೇರಿದಂತೆ ಅನೇಕ ಟನಲ್ ಮಾಡಿದ್ದಾರೆ.ಬಿಜೆಪಿಗರ ಮಾತು ಕೇಳಿದ್ರೆ ಬೆಂಗಳೂರು ಅಭಿವೃದ್ಧಿ ಆಗಲ್ಲ. ಟೆಕ್ನಿಕಲ್ ಮಾಹಿತಿ ನೀಡುವುದಿದ್ರೆ ನೀಡಲಿ. ಅದು ಬಿಟ್ಟು ವಿರೋಧ ಮಾಡಿದ್ರೆ ಆಗಲ್ಲ.
ಟನಲ್ ಪ್ರಾರಂಭ ಮಾಡಿದರೆ ಚುನಾವಣೆಗೆ ಮುಂಚೆ ಏನು ಅದು ಮುಗಿಯಲ್ಲ. ಚುನಾವಣೆ ಮುಗಿದ ಮೇಲೆ ನಮ್ಮ ಸರ್ಕಾರ ಇರುತ್ತೋ ಇಲ್ವೋ ಗೊತ್ತಿಲ್ಲ. ಯಾವ ಸರ್ಕಾರ ಬರುತ್ತದೋ, ಈಗ ಇರುವ ಲೀಡರ್ ಗಳು ಇರ್ತಾರೋ ಇಲ್ವೋ. ಇದು ಭವಿಷ್ಯದ ಯೋಜನೆ.ಮುಂದಿನ ಪೀಳಿಗೆಗೆ ಅನುಕೂಲ ಆಗಲಿ ಅಂತ ಟನಲ್ ಮಾಡುತ್ತಿರುವುದು ಎಂದಿದ್ದಾರೆ.
ಬಿಜೆಪಿ ಪೆರಿಪರಲ್ ರೋಡ್ ಬಗ್ಗೆ ಯೋಚನೆ ಮಾಡಲಿಲ್ಲ. ಈಗ ನಮಗೆ ಬುದ್ದಿ ಹೇಳುವವರು ಆಗ ಯಾಕೆ ಮಾಡಲಿಲ್ಲ. ಬಿಜೆಪಿಗರು ನೆಗಟಿವ್ ಆಗಿ ಯೋಚನೆ ಮಾಡ್ತಾರೆ. ತೇಜಸ್ವಿ ಸೂರ್ಯ ಏನಾದರೂ ಇಂಜಿನಿಯರ್, ಎಕ್ಸಪರ್ಟಾ. ಡಿಸಿಎಂ ಅವರನ್ನು ಕರೆದು ಮಾತನಾಡಬಾರದಿತ್ತು. ಲಾಲ್ ಬಾಗ್ ಯಾರಾದರೂ ನಾಶ ಮಾಡಲು ಆಗುತ್ತಾ.ರೇಸ್ ಕೋರ್ಸ್ ತೆರವು ಮಾಡಿ ಗ್ರೀನ್ ಏರಿಯಾ ಮಾಡುತ್ತಿದ್ದೇವೆ. ಸುಮ್ಮನೆ ಬೆಂಗಳೂರು ರಕ್ಷಣೆಗೆ ನಿಂತಿದ್ದೇವೆ ಅಂತ ತೋರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.











