ಮನೆ Latest News ವಾಣಿಜ್ಯ ಬಳಕೆಯ ಸಿಲಿಂಡರ್ ಗೆ ಯಾವುದೇ ರೀತಿಯ ತೊಂದರೆ ಇಲ್ಲ, ಅದರ ಬಗ್ಗೆ ಆತಂಕ ಪಡುವ...

ವಾಣಿಜ್ಯ ಬಳಕೆಯ ಸಿಲಿಂಡರ್ ಗೆ ಯಾವುದೇ ರೀತಿಯ ತೊಂದರೆ ಇಲ್ಲ, ಅದರ ಬಗ್ಗೆ ಆತಂಕ ಪಡುವ ಆಗಿಲ್ಲ: ವಿಧಾನಸೌಧದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ

0

 

ಬೆಂಗಳೂರು; ವಾಣಿಜ್ಯ ಬಳಕೆಯ ಸಿಲಿಂಡರ್ ಗೆ ಯಾವುದೇ ರೀತಿಯ ತೊಂದರೆ ಇಲ್ಲ, ಅದರ ಬಗ್ಗೆ ಆತಂಕ ಪಡುವ ಆಗಿಲ್ಲ ಎಂದು  ವಿಧಾನಸೌಧದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

 

ವಿಧಾನಸೌಧದಲ್ಲಿ ಮಾತನಾಡಿದ ಅವರು ಆಯಿಲ್ ಕಾರ್ಪೊರೇಷನ್, HPCL, BPCL, ಗ್ಯಾಸ್ ಗೇಲ್ ಎಲ್ಲರನ್ನೂ ಕರೆಸಿ ಮಾತನಾಡಿದ್ದೀನಿ. ನಿನ್ನೆಯೇ ನಾನು ಉತ್ತರ ಕೊಟ್ಟಿದ್ದೇನೆ. ಡೊಮ್ಯಾಸ್ಟಿಕ್ ಗೆ ಯಾವುದೇ ರೀತಿಯ ತೊಂದರೆ ಇಲ್ಲ. ಅದರ ಬಗ್ಗೆ ಆತಂಕ ಪಡುವ ಆಗಿಲ್ಲ. ವಿನಾಃ ಕಾರಣ ನೋಂದಣಿ ಮಾಡಿಕೊಳ್ಳುವುದು ಬೇಡ. ಸಾಮಾನ್ಯವಾಗಿ ಜನರಿಗೆ ಸಿಲಿಂಡರ್ ಸಿಗುತ್ತೆ. ಪೆಟ್ರೋಲ್, ಡೀಸೆಲ್ ಸ್ಟಾಕ್ ಇಟ್ಟುಕೊಳ್ಳಬಹುದು. ಆದರೆ ಗ್ಯಾಸ್ ಸ್ಟಾಕ್ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಪಿಜಿ, ಹಾಸ್ಟೆಲ್, ಸ್ಕೂಲ್, ಆಸ್ಪತ್ರೆಗಳಿಗೆ ಆಹಾರ, ಔಷಧಿ ತಯಾರಿ ಮಾಡಲು ಬೇಕೆ ಬೇಕು. ಮಿತವಾಗಿ ಬಳಕೆ ಮಾಡಕ್ಕೆ ಹೇಳಿದ್ದೇನೆ ಎಂದಿದ್ದಾರೆ.

ಇನ್ನೋಂದು ವಾರದಲ್ಲಿ ಎಲ್ಲ ಕ್ಲಿಯರ್ ಆಗಲಿದೆ. ಇರೋದ್ರಲ್ಲಿ ಅವಶ್ಯಕತೆ ಇರೋ ಕಡೆ ಕರ್ಮಷಿಯಲ್ ಗ್ಯಾಸ್ ನೀಡ್ತೇವೆ. ಹೋಟೆಲ್ ಮಾಲೀಕರ ಜೊತೆ ಮಾತನಾಡಿದ್ದೇವೆ. ಇಂತಹ ಪರಿಸ್ಥಿತಿ ಸಹಕಾರ ನೀಡಬೇಕೆಂದು. ಸದ್ಯಕ್ಕೆ ಟೆಂಪ್ರವರಿ ಅರೆಜ್ಮೆಂಟ್ ಮಾಡಿಕೊಳ್ಳಬೇಕು. ಗ್ಯಾಸ್ ಪ್ರೊವೈಡ್ ಆದ ತಕ್ಷಣ ನೀಡ್ತೇವೆ. ಇದರ ಜೊತೆಗೆ ಆಟೋದವರಿಗೂ ಸಮಸ್ಯೆಯಿದೆ. ಅವರಿಗೂ ಸಮಸ್ಯೆ ಆಗದಂತೆ ನೋಡಿಕೊಳ್ತೇವೆ. ಐವಾನ್ ಡಿಸೋಜಾ ಅವರು ಪ್ರಶ್ನೆ ಮಾಡಿದ್ರು. ಗ್ಯಾಸ್ ಸಿಕ್ತಾ ಇಲ್ಲ ಅಂತಾ. ನಾವು ಎಲ್ಲವನ್ನ ಗಮನ ಹರಿಸುತ್ತೇವೆ. ಆಟೋದವ್ರು ಜೀವನ ಮಾಡಬೇಕು ಗಮನ ಹರಿಸ್ತೇವೆ. ಅವರಿಗೂ ಸಮಸ್ಯೆ ಆಗದಂತೆ ಗಮನ ಹರಿಸ್ತೇವೆ ಎಂದು ಅವರು ಹೇಳಿದ್ದಾರೆ.

ಕಾಳಸಂತೆಯಲ್ಲಿ ಗ್ಯಾಸ್ ಮಾರಾಟ ವಿಚಾರದ ಬಗ್ಗೆ ಮಾತನಾಡಿದ ಅವರು ಡೆಪ್ಯೂಟಿ ಕಮಿಷನರ್ ಜೊತೆ ಮಾತನಾಡಿದ್ದೇನೆ. ಪೊಲೀಸರಿಗೂ ಕೂಡ ಸಲಹೆ ನೀಡಿದ್ದೇನೆ. ಕಾಳಸಂತೆಯಲ್ಲಿ ಗ್ಯಾಸ್ ಸಿಗಬಾರದು.ಯಾವುದೇ ಭಾಗದಲ್ಲಿ ಸಿಕ್ಕರೂ ಕ್ರಮ ಆಗುತ್ತೆ ಎಂದು ಎಚ್ಚರಿಸಿದ್ದಾರೆ.