ಮನೆ Latest News ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅಣ್ಣ ತಮ್ಮ ಇದ್ದಂತೆ ಇದ್ದಾರೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್...

ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅಣ್ಣ ತಮ್ಮ ಇದ್ದಂತೆ ಇದ್ದಾರೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಹೇಳಿಕೆ

0

ಬೆಂಗಳೂರು; ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅಣ್ಣ ತಮ್ಮ ಇದ್ದಂತೆ ಇದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಣ್ಣ ಪುಟ್ಟ ವ್ಯತ್ಯಾಸಗಳಿರಬಹುದು.ಶ್ರೀರಾಮುಲು ಬಿಜೆಪಿಯಲ್ಲೇ ಇರುತ್ತಾರೆ.ಡಿ.ಕೆ.‌ ಶಿವಕುಮಾರ್ ರಾಮುಲುರನ್ನು ಕಾಂಗ್ರೆಸ್ ಗೆ ಸೆಳೆಯಲು ಪ್ರಯತ್ನ ಎಂಬುದು ಸುಳ್ಳುಶಿವಕುಮಾರ್ ಕಾಂಗ್ರೆಸ್ ನಲ್ಲೇ ಇರುತ್ತಾರೆ, ರಾಮುಲು ಬಿಜೆಪಿಯಲ್ಲೇ ಇರುತ್ತಾರೆ.ನಂಬರ್ ವನ್ ಸ್ಥಾನದಲ್ಲಿರುವ ಅವರಿಬ್ಬರು ಯಾಕೆ ಆಚೆ ಈಚೆ ಹೋಗುತ್ತಾರೆ? .ಅಶೋಕ್ ಮತ್ತು ವಿಜಯೇಂದ್ರ‌ ಒಂದೇ ತಾಯಿಯ ಮಕ್ಕಳ‌ಂತೆ ಇದ್ದಾರೆ.ಅವರ ಮಧ್ಯೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ,

ಇತ್ತೀಚಿನ ದಿನಗಳಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಆಗುತ್ತಿರುವುದು ಸತ್ಯ.ಬೆಂಕಿ ಇಲ್ಲದೇ ಹೊಗೆಯಾಡಲ್ಲ ಎನ್ನುವ ರೀತಿ ಇದೆ. ಇನ್ನೂ ನಮ್ಮ ಕೈ ತಪ್ಪಿ ಯಾವುದೂ ಹೋಗಿಲ್ಲ. ಎಲ್ಲವನ್ನೂ ಸರಿ ಮಾಡುವ ಸಾಮರ್ಥ್ಯ ರಾಷ್ಟ್ರೀಯ ನಾಯಕರಿಗೆ ಇದೆ.ಶ್ರೀರಾಮುಲು ನಮ್ಮ ಪಕ್ಷದ ನಾಯಕರು, ಬಿಜೆಪಿಯಲ್ಲಿ ಗಟ್ಟಿಯಾಗಿ ಇರುವಂತಹವರು.ಯತ್ನಾಳ್ ವಿಚಾರದಲ್ಲಿ ಕೂಡಾ ರಾಷ್ಟ್ರೀಯ ನಾಯಕರು ಸಲಹೆ, ಸೂಚನೆ ಕೊಟ್ಟಿದ್ದಾರೆ.ಇನ್ನು ಎಂಟು ಹತ್ತು ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದರು. ಇದೇ ವೇಳೆ ಯತ್ನಾಳ್ ಉಚ್ಛಾಟನೆಗೆ ಬಿಜೆಪಿಯಲ್ಲಿ ಮಾಜಿ ಶಾಸಕರ ಆಗ್ರಹ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವುದೇ ಸಾಮಾನ್ಯ ಕಾರ್ಯಕರ್ತ ಕೂಡಾ ಉಚ್ಛಾಟನೆ ಆಗಬಾರದು ಇದು ನನ್ನ ವೈಯಕ್ತಿಕ ಅಭಿಪ್ರಾಯ.ಯತ್ನಾಳ್ ಅನುಭವ ಇರುವಂತಹವರು.ಬೇರೆಯವರನ್ನು ನೋಡಿದಾಗ ಯತ್ನಾಳ್ ರದ್ದು ತಪ್ಪು ಅನ್ನಿಸಬಹದು.ಆದರೆ ಅವರು ಅನುಭವಸ್ಥರು,  ಮಾಜಿ ಸಚಿವರು, ಶಾಸಕರು ವಿಜಯೇಂದ್ರ‌ ಯಡಿಯೂರಪ್ಪ ಗರಡಿಯಲ್ಲಿ ಬೆಳೆದವರು.ಎಲ್ಲವನ್ನೂ ಅಳೆದು ತೂಗಿಯೇ ವರಿಷ್ಠರು ವಿಜಯೇಂದ್ರ‌ ನೇಮಕ ಮಾಡಿದ್ದಾರೆ.ಇಬ್ಬರನ್ನೂ ಕೂರಿಸಿ ಮಾತನಾಡಿ ವರಿಷ್ಠರು ಸರಿಪಡಿಸಲಿದ್ದಾರೆ.ಎಲ್ಲದರ ಬಗ್ಗೆಯೂ ಮೋದಿ ಮತ್ತು ಅಮಿತ್ ಷಾ ತೀರ್ಮಾನ ತೆಗೆದುಕೊಳ್ಳುತ್ತಾರೆ.ಎಲ್ಲರೂ ರಾಜ್ಯಾಧ್ಯಕ್ಷರಾಗಬೇಕೆಂಬ ಆಸೆ ಇದ್ದವರು ಕೇಳುವುದರಲ್ಲಿ ತಪ್ಪೇನಿದೆ?.ಅಂತಿಮವಾಗಿ ಯಾರಾಗಬೇಕು ಅಂತಾ ಹೈಕಮಾಂಡ್ ತೀರ್ಮಾನ ಮಾಡುತ್ತದೆ.ಇಲ್ಲಿ ನಮ್ಮ ವೈಯಕ್ತಿಕ ಅಭಿಪ್ರಾಯ ಗಣನೆಗೆ ಬರುವುದಿಲ್ಲ.ಅಧ್ಯಕ್ಷ ಸ್ಥಾ‌ನ ಬದಲಾಗಬೇಕು ಅಂತಾ ಹೇಳುವುದು ಅವರ ವೈಯಕ್ತಿಕ ಅಭಿಪ್ರಾಯ.ರಮೇಶ್ ಜಾರಕಿಹೊಳಿ ಜೊತೆಗೆ ಕೂಡಾ ವರಿಷ್ಠರು ಮಾತಾಡುತ್ತಾರೆ.ಇಡೀ ಪಕ್ಷದ ಬೆಳವಣಿಗೆಯಲ್ಲಿ ಬಿ.ಎಲ್. ಸಂತೋಷ್ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ರು.

ನಿರಾಣಿ ವಿರುದ್ಧ ಕಿರು ಚಿತ್ರದ ವಿಚಾರವಾಗಿ ಸಚಿವ ಎಂ.ಬಿ. ಪಾಟೀಲ್ ಆರೋಪ ಮಾಡಿದ್ದ ವಿಚಾರದ ಬಗ್ಗೆ ಮಾತನಾಡಿದ ಅವರು ಎಂ.ಬಿ. ಪಾಟೀಲ್ ಹಿರಿಯರು, ಇಬ್ಬರದ್ದೂ ಒಂದೇ ವಯಸ್ಸು.ರಾಜಕಾರಣದಲ್ಲಿ ಅರೋಪ ಮಾಡಿದಾಗ ನಾನು ಉತ್ತರ ಕೊಡಬೇಕಾಯ್ತು.ವೈಯಕ್ತಿಕವಾಗಿ ನಮಗೆ ಯಾವುದೇ ವಾದ ವಿವಾದಗಳಿಲ್ಲ.ಎಂ.ಬಿ. ಪಾಟೀಲ್ ಅವರು ಇನ್ನೂ ಉತ್ತಮ ಕೆಲಸ ಮಾಡಿಕೊಂಡು ಹೋಗಲಿ.ದಾವೋಸ್ ಎಕನಾಮಿಕ್ ಫೋರಂಗೆ ನಮ್ಮವರು ಹೋಗಬೇಕು.ಕರ್ನಾಟಕದಿಂದ ಯಾರೂ ಹೋಗದೇ ಇದ್ದರೆ ಕೈಗಾರಿಕೆಯಲ್ಲಿ ಹಿಂದೆ ಬೀಳುತ್ತದೆ.ಎಂ.ಬಿ. ಪಾಟೀಲ್ ಅವರು ಒಂದು ಬಾರಿ ಹೋಗಬೇಕು.ಬರೀ ದಾವೋಸ್ ಅಷ್ಟೇ ಅಲ್ಲ, ವಿಶ್ವದಲ್ಲಿ ಎಲ್ಲೇ ಆರ್ಥಿಕ ಶೃಂಗ ಇದ್ದರೂ ಅವರು ಹೋಗಿ ಕರ್ನಾಟಕದ ಬಗ್ಗೆ ಹೇಳಬೇಕು.ಶಿರಾ ಪಕ್ಕದಲ್ಲಿ ಸುಮಾರು 2000ದಷ್ಟು ಎಕರೆ ಭೂಮಿ ಇದೆ, ಅದನ್ನು ಬಳಕೆ ಮಾಡಿಕೊಂಡು ಮೂರನೇ ಏರ್ ಪೋರ್ಟ್ ಮಾಡಬೇಕು.ಇನ್ನೂ ಐದು ಏರ್ ಪೋರ್ಟ್ ನಮ್ಮಲ್ಲಿ ಬರಬೇಕು.ಹಾಗಾದಾಗ ಆ ಭಾಗದಲ್ಲಿ ಕೈಗಾರಿಕೆಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು.