ಬೆಂಗಳೂರು; ಯಾವುದೇ ಫೋನ್ ಟ್ಯಾಪಿಂಗ್ ಮಾಡ್ತಿಲ್ಲ, ಆ ಥರಾ ಯಾವುದೇ ಕೆಲಸ ನಡೀತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಫೋನ್ ಟ್ಯಾಪಿಂಗ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವುದೇ ಫೋನ್ ಟ್ಯಾಪಿಂಗ್ ಮಾಡ್ತಿಲ್ಲ. ಆ ಥರಾ ಯಾವುದೇ ಕೆಲಸ ನಡೀತಿಲ್ಲ. ಹೆಚ್ಡಿಕೆ, ಬಿಜೆಪಿ ಬಳಿ ನಿರ್ದಿಷ್ಟವಾಗಿ ಏನಾದ್ರೂ ದಾಖಲೆ ಇದ್ರೆ ಕೊಡಲಿ ಎಂದಿದ್ದಾರೆ.
ಯಾರ ಫೋನ್ ಟ್ಯಾಪ್ ಆಗ್ತಿದೆ ಅಂತ ದಾಖಲೆ ಇದ್ರೆ ಕೊಡಲಿ. ಕದ್ದಾಲಿಕೆ ದಾಖಲೆ ಕೊಡಿ ಅಂತ ಬಿಜೆಪಿ, ಜೆಡಿಎಸ್ ಗೆ ಪರಮೇಶ್ವರ್ ಸವಾಲ್ ಹಾಕಿದ್ದಾರೆ. ಹೆಚ್ಡಿಕೆ, ಬಿಜೆಪಿ ಬಳಿ ನಿರ್ದಿಷ್ಟವಾಗಿ ಏನಾದ್ರೂ ದಾಖಲೆ ಇದ್ರೆ ಕೊಡಲಿ ಎಂದಿದ್ದಾರೆ.
ಒಳಮೀಸಲಾತಿ ಗೊಂದಲ ವಿಚಾರದ ಬಗ್ಗೆ ಮಾತನಾಡಿದ ಅವರು ಈಗಾಗಲೇ ನಾವು ಒಳಮೀಸಲಾತಿ ಕೊಡ್ತೇವೆ ಅಂತ ಸರ್ಕಾರ ಒಪ್ಪಿಕೊಂಡಿದೆ.ಆದ್ರೆ ಒಳಮೀಸಲಾತಿ ಹಂಚಿಕೆಯಲ್ಲಿ ಗೊಂದಲ ಆಗಿದೆ ಅಂತ ಸಮಸ್ಯೆ ಆಗಿದೆ. ರೋಸ್ಟರ್ ಮಾಡುವಾಗ ಒಂದು ವರ್ಗಕ್ಕೆ ಹೆಚ್ಚು ಮೀಸಲಾತಿ ಸಿಗುತ್ತೆ ಅನ್ನೋದಿದೆ.ಈಗ ಮತ್ತೆ ಸಂಪುಟದಲ್ಲಿ ವಿಷಯದ ಮೇಲೆ ಚರ್ಚೆ ಆಗುತ್ತೆ. ಅಂತಿಮವಾಗಿ ಸಂಪುಟದಲ್ಲಿ ಏನು ಚರ್ಚೆ ಆಗುತ್ತೋ ಅದರಂತೆ ಮುಂದುವರಿತೇವೆ. ಎಸ್‌ಸಿ ಸಮುದಾಯಕ್ಕೆ 17% ಒಳಮೀಸಲಾತಿ ಕೊಡುವ ತೀರ್ಮಾನ ಆಗಿತ್ತು. ಆದ್ರೆ ಅಲೆಮಾರಿಗಳಿಗೆ ಪ್ರತ್ಯೇಕ 1% ಕೊಡಿ ಅಂತ ಬೇಡಿಕೆ ಇದೆ.ಕೋರ್ಟಿನಲ್ಲೂ 56% ಮೀಸಲಾತಿಗೆ ತಡೆ ಕೊಡಲಾಗಿದೆ. ಇದೆಲ್ಲ ದೊಡ್ಡ ಚರ್ಚೆ ನಡೆಸಿ ತೀರ್ಮಾನ ಮಾಡಬೇಕಾದ ವಿಚಾರ.ಅದಕ್ಕಾಗಿ ಸಂಪುಟದಲ್ಲಿ ಚರ್ಚೆ ಮಾಡ್ತೇವೆ. ಭಿನ್ನಾಭಿಪ್ರಾಯಗಳು ಇದ್ದೇ ಇರ್ತವೆ.ಏನೇ ಇದ್ದರೂ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಆಗುತ್ತೆ.ನಮ್ಮ ಇಲಾಖೆಯಲ್ಲಿ ನಿನ್ನೆ ನೇಮಕಾತಿಗೆ ಆದೇಶ ಮಾಡಲಾಗಿದೆ.ನೇಮಕಾತಿ ವೇಳೆ ಒಳಮೀಸಲಾತಿ ಅಳವಡಿಕೆ ಆಗುತ್ತದೆ.ಇವತ್ತು ಸಂಪುಟದಲ್ಲಿ ಅದರ ಬಗ್ಗೆನೇ ಚರ್ಚೆ ಆಗುತ್ತೆ ಎಂದಿದ್ದಾರೆ.
ಒಳಮೀಸಲಾತಿ ಕೊಡುವಂತೆ ಒತ್ತಾಯಿಸಿ ಬಿಜೆಪಿಯಿಂದ ಹೋರಾಟದ ಎಚ್ಚರಿಕೆ ವಿಚಾರದ ಮಾತನಾಡಿದ ಅವರು ಬಿಜೆಪಿ ಇದರಲ್ಲಿ ರಾಜಕೀಯ ಮಾಡ್ತಿದೆ.ಬಿಜೆಪಿಯವರಿಗೂ ಗೊತ್ತಿದೆ, 56% ಮೀಸಲಾತಿ ಕೊಡಕ್ಕಾಗಲ್ಲ ಅಂತ.ಆದ್ರೆ ಬಿಜೆಪಿ ರಾಜಕೀಯ ಕಾರಣಕ್ಕೆ ಎಲ್ಲರಿಗೂ ಪ್ರಚೋದನೆ ಮಾಡ್ತಿದ್ದಾರೆ.ಅವರ ರಾಜಕೀಯ ಮೇಲ್ನೋಟಕ್ಕೇ ಗೊತ್ತಾಗುತ್ತಿದೆ ಎಂದ ಅವರು ನಮ್ಮ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಜತೆಗೆ ನಿನ್ನೆ ಚರ್ಚೆ ಮಾಡಿದ್ದೇವೆ. ಒಳಮೀಸಲಾತಿ ಗೊಂದಲ ಬಗ್ಗೆ ಚರ್ಚೆ ಮಾಡಿದ್ದೇವೆ. ಎಲ್ಲ ರಾಜ್ಯಗಳಲ್ಲೂ ಈ ಗೊಂದಲ ಇದೆ. ಇದು ಹೊರತು ಬೇರೇನೂ ಚರ್ಚೆ ಮಾಡಿಲ್ಲ.ಅಧಿಕಾರ ಗೊಂದಲ ಬಗ್ಗೆ ಖರ್ಗೆಯವರ ಜತೆ ಚರ್ಚಿಸಿಲ್ಲ ಎಂದು ತಿಳಿಸಿದ್ದಾರೆ.
ಖಮೇನಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ಗೆ ಇನ್ಸ್ಪೆಕ್ಟರ್ ಭದ್ರತೆ ನೀಡಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ಅದನ್ನ ವಿಚಾರ ಮಾಡುತ್ತೇವೆ. ಅವರ ಕಡೆಯಿಂದ ತಪ್ಪು ಆಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ.ನಮ್ಮ ದೇಶದಲ್ಲಿ ಎರಡು ಸುನ್ನಿ,ಶಿಯಾ ಸಮುದಾಯ ಇದೆ. ಶಿಯಾ ಸಮುದಾಯಕ್ಕೆ ಸೇರಿದ ಖಮೈನಿಯನ್ನು ಕೊಂದಿದ್ದಾರೆ ಎಂದು ಪ್ರತಿಭಟನೆ ಆಗಿದೆ.ಅದರ ಸರಿ ತಪ್ಪನ್ನ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಭಾರತದ ಬೇಸ್ ಬಳಸಿ ಇರಾಕ್ ಮೇಲೆ ದಾಳಿ ಮಾಡಲು ಅವಕಾಶ ಕೊಡಿ ಎಂಬ ಬೇಡಿಕೆ ವಿಚಾರದ ಪ್ರತಿಕ್ರಿಯಿಸಿದ ಅವರು ಇದು ವಿದೇಶಾಂಗ ನೀತಿ ಅನುಸರಿಸಿ ಇರುತ್ತೆ. ಅದರ ಮೇಲೆ ಕೇಂದ್ರ ತೀರ್ಮಾನ ಮಾಡುತ್ತೆ ಎಂದಿದ್ದಾರೆ.











