ಮನೆ ಪ್ರಸ್ತುತ ವಿದ್ಯಮಾನ ಅದ್ಯಾವುದೇ ಬದಲಾವಣೆ ಬಗ್ಗೆ ನಮ್ಮ ಪಕ್ಷದಲ್ಲಿ ಸೂಚನೆ ಇಲ್ಲ; ಗೃಹ ಸಚಿವ ಡಾ ಜಿ ಪರಮೇಶ್ವರ್...

ಅದ್ಯಾವುದೇ ಬದಲಾವಣೆ ಬಗ್ಗೆ ನಮ್ಮ ಪಕ್ಷದಲ್ಲಿ ಸೂಚನೆ ಇಲ್ಲ; ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು: ಅದ್ಯಾವುದೇ ಬದಲಾವಣೆ ಬಗ್ಗೆ ನಮ್ಮ ಪಕ್ಷದಲ್ಲಿ ಸೂಚನೆ ಇಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಸಿಎಂ ಬದಲಾವಣೆ ಕುರಿತು ಮಾಜಿ ಸಚಿವ ಆರ್ ಅಶೋಕ್ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಮತ್ತೆ ಮತ್ತೆ ನಾನು ಅದನ್ನೇ ಹೇಳಬೇಕು.ಜ್ಯೋತಿಷ್ಯ ಹೇಳೋದನ್ನ ಅವರು ಯಾವಾಗ ಯಾವ ಟ್ರೈನಿಂಗ್ ನಲ್ಲಿ ತೆಗೆದುಕೊಂಡರೂ ಅನ್ನೋದು ಗೊತ್ತಿಲ್ಲ.ಅದ್ಯಾವುದು ಬದಲಾವಣೆ ಕೂಡ ನಮ್ಮ ಪಕ್ಷ ದಲ್ಲಿ ಸೂಚನೆ ಇಲ್ಲ ಎಂದಿದ್ದಾರೆ.

ಮೈಕ್ರೋ ಫೈನಾನ್ಸ್ ಬಿಲ್ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಅವರು ಗೊತ್ತಿಲ್ಲ, ರಾಜ್ಯಪಾಲರು ಕಾನೂನು ತಜ್ಞರ ಜೊತೆ ಮಾತಾಡಿ ತೀರ್ಮಾನ ಮಾಡಬಹುದು.ಎಫೆಕ್ಟೀವ್ ಆಗಿ ಇವತ್ತೇ ಆಗುತ್ತೇ ಅನ್ನೋದು ಗೊತ್ತಿಲ್ಲ.ಅವರು ಇನ್ನೂ ಕಮ್ಯೂನಿಕೇಷನ್ ಮಾಡಿಲ್ಲ.ಬದಲಾವಣೆಗೆ ಹೇಳಿದ್ರೆ ಅದರಲ್ಲಿ ಕೆಲ ಬದಲಾವಣೆ ಮಾಡುತ್ತೇವೆ. ಅದು ಹೇಗಿದೆ ಅದನ್ನೇ ಒಪ್ಪಿದ್ರೆ ಅದೇ ಜಾರಿಯಾಗುತ್ತದೆ ಎಂದಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ನಲ್ಲಿ ಮಹಿಳೆ ಪವಿತ್ರ ಅವರು ಎಫ್ ಐ ಆರ್ ದಾಖಲಿಸಿದರೂ ಆರೋಪಿಗಳು ಅರೆಸ್ಟ್ ಮಾಡಿಲ್ಲ ಎಂಬ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ವಿಚಾರ ಮಾಡುತ್ತೇನೆ.ನಮ್ಮ ಕಮಿಷನರ್ ಅವರಿಗೆ ಸೂಚನೆ ನೀಡುತ್ತೇನೆ.ಕ್ರಮ ತೆಗೆದುಕೊಳ್ಳಲು ಸೂಚನೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಕುರಿತು ಸದನ ಸಮಿತಿ ಎಲ್ಲಿಯವರಗೆ ಬಂತು ಎಂಬ ಹೇಳಿಕೆಗೆ ರಿಯ್ಯಾಕ್ಟ್ ಮಾಡಿದ ಅವರು ನಾಲ್ಕೈದು ಕಡೆ ಪಬ್ಲಿಕ್ ವಿಚಾರಣೆಗೆ ಅವಕಾಶ ಮಾಡಿದ್ದಾರೆ.ಅದಲ್ಲಿ ಒಳ್ಳೆಯ ಸಲಹೆ ಬಂದ್ರೆ ಅದನ್ನ ಸದನಕ್ಕೆ ಚರ್ಚೆ ಗೆ ತರಬೇಕು ಎಂದು ಯೋಚನೆ ಮಾಡಿದ್ದಾರೆ ನಮ್ಮ ಸಚಿವರು. ಎರಡನೇ ಏರ್ಪೋರ್ಟ್ ಎಲ್ಲಿಗೆ ಬಂತು ಎಂಬ ವಿಚಾರದ ಬಗ್ಗೆ ಮಾತನಾಡಿ ಅವರು ಅವರು ಹೊಸೂರಿನ ಬೇಡಿಕೆ ಮೊದಲಿನಿಂದಲೂ ಇದೆ.ಅಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡೋದನ್ನ ಸಲಹೆ ಕೊಟ್ಟಿರಬಹುದು.ಆದ್ರೆ ಈಗಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಜನ ಸಂಖ್ಯೆ ಹೆಚ್ಚಾಗಿದೆ.ಪ್ರಯಾಣಿಕರ ಸಂಖ್ಯೆ ಕಡಿಮೆ ಮಾಡೋದಕ್ಕೆ ಬೇರೆ ಮತ್ತೊಂದು ಏರ್ಪೋರ್ಟ್ ಮಾಡೋದಕ್ಕೆ ನಾವು ಯೋಜನೆ ಮಾಡಿದ್ದೇವೆ.ಬೇರೆ ಮೆಟ್ರೋ ಸಿಟಿಯಲ್ಕಿ ಎರಡು ನಿಲ್ದಾಣ ಇದ್ದಾವೆ.ಅದೇ ರೀತಿ ನಮ್ಮಲ್ಲೂ ಕೂಡ ಎರಡನೇ ಏರ್ಪೋರ್ಟ್ ಆಗಬೇಕು.ಕೇಂದ್ರ ಸರ್ಕಾರ ಯಾವ ರೀತಿ ಅನುಮತಿ ಕೊಡ್ತಾರೆ ಅನ್ನೋದನ್ನ ನೋಡಬೇಕು.ಜಾಗ ಫೈನಲ್ ಆಗಿಲ್ಲ, ಎರಡ್ಮೂರು ಜಾಗ ನೋಡಿಕೊಂಡಿದ್ದಾರೆ ಎಂದಿದ್ದಾರೆ.

ತುಮಕೂರು ಅಥವಾ ಬಿಡದಿ ಭಾಗದಲ್ಲಿ ಏರ್ಪೋರ್ಟ್ ಆಗಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ನಮ್ಮ ಬೇಡಿಕೆ ಇಟ್ಟಿದ್ದೇವೆ, ಅವರು ಬೇರೆ ಬೇಡಿಕೆ ಇಟ್ಟಿದ್ದಾರೆ.ಈ ಹಿಂದೆ ಅವರು ಬಿಡದಿಯಲ್ಲಿ ಮಾಡಬೇಕೆಂದು ಎಂದು ಅಂದುಕೊಳ್ಳಲಾಗಿತ್ತು ಎಂದ್ರು.

ರಾಜ್ಯ ಬಜೆಟ್ ಸಿದ್ದತೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾಳೆಯಿಂದ ಪ್ರತಿಯೊಂದು ಇಲಾಖೆ ಜೊತೆ ಚರ್ಚೆ ಮಾಡ್ತಾರೆ.ಪೊಲೀಸ್ ಇಲಾಖೆ ಜೊತೆ ಸಭೆ ಇದೆ.ನಮ್ಮ ಬೇಡಿಕೆ ಕೂಡ ಇದೆ, ಅದನ್ನ ಕೊಡೋದು ಬೀಡೋದು ಅವರಿಗೆ ಬಿಟ್ಟಿದ್ದು. ಶಾಲೆಗಳಲ್ಲಿ ಹಿಜಾಬ್ ಕುರಿತು  ಸಭೆ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ‌ನಮ್ಮ ತೀರ್ಮಾನ ಆಗಬೇಕು ಅಲ್ಲವೇ.ನಮ್ಮ ಅಭಿಪ್ರಾಯ ವನ್ನೂ ಹೇಳಬೇಕು ಅಲ್ಲವೇ.ಚರ್ಚೆ ಮಾಡಿ ತಿಳಿಸಬೇಕು.ಪರ ವಿರೋಧಗಳು ಯಾವತ್ತೂ ಕೂಡ ಇದೆ‌ ಎಂದಿದ್ದಾರೆ.